Tuesday, September 21, 2010

ನನ್ನ ಹನಿಗವನ:--

ಜೀವನದ ಹಾದಿಯಲಿ
ಸೋಲು ಗೆಲುಹು ಗಳಿರಲಿ
ನೋವುನಲಿವು ಗಳಿರಲಿ
ಯಡರು ತೊಡರುಗಲಿರಲಿ
ಏಳು ಬಿಳು ಗಳಿರಲಿ
ಸಾದಿಸುವ ಛಲವು ಯನ್ನ ಬಿಡದಿರಲಿ

ದಕ್ಷಿಣ ಕನ್ನಡ ಸ್ನೇಹದ ಪ್ರವಾಸ

ನಾನು  ಮತ್ತು ನನ್ನ ಆಪ್ತ ಸ್ನೇಹಿತ ನಾಗರಾಜ್ ಕೆಲಹು ವರ್ಷಗಳಿಂದ ತುಂಬ ಒಳ್ಳೆಯಾ ಸ್ನೇಹಿಥರಗಿದ್ದೇವೆ, ನನ್ನ ಗೆಳೆಯ ಕೆಲವು ದಿನಗಳಿಂದ ತುಂಬ ಒತ್ತಾಯ ಮಾಡುತ್ತಿದ್ದ ಒಂದು ಪ್ರವಾಸಕ್ಕಾಗಿ. ಅದೊಂದು ದಿನ ನನ್ನ ಸ್ನೇಹಿತ ಫೋನ್ ಕಾಲ್ ಮಾಡಿ ನನ್ನನು ತುಂಬ ಒತ್ತಾಯ ಡುತ್ತಿದ್ದ ಆ ಪ್ರವಾಸವು ಒಂದು ತಾಣವಾಗಿತ್ತು ನಾನು ನನ್ನ ಜೀವನದಲ್ಲೇ ಕೇಳಿರದ ತಾಣವದು, ನನ್ನ ಜೀವನದಲ್ಲೇ ನೋಡಿರದ ತಾಣವದು, ಅದು ನಮ್ಮ ಕರ್ನಾಟಕದಲ್ಲಿ ಇದೆ ಎಂದು ಹೇಳಲು ನನಗೆ ತುಂಬ ಖುಷಿ ಆಗು ಹೆಮ್ಮೆಯಗುತ್ತದ್ದೆ. ನಾನು ಕನಸಿನಲ್ಲೂ ಅಂದುಕೊಡಿರದ ತಾಣವದು ಆದರೆ ನಾನು ಪ್ರವಾಸಕ್ಕೆ ಹೊರಡುವ ಮುನ್ನ ನಾನು ಆ ಸ್ತಳವನ್ನೂ ತಪ್ಪು ತಿಳಿದಿದ್ದೆ, ಆದರೆ ನನ್ನ ಸ್ನೇಹಿತ ತುಂಬ ಒತ್ತಾಯಮಾಡಿ ಪ್ರವಾಸಕ್ಕೆ ಕರೆದುಕೊಂಡು ಹೊರಟಿದ್ದ. ನಾವು ಒಟ್ಟು ೧೨ ಮಂದಿ ಹೊರಟಿದ್ದೆವು ಎಲ್ಲರೂ ನನ್ನ ಹಳೆಯ ಸ್ನೇಹಿತರೆ, ಎಲ್ಲರೂ ಸರಿಯಾದ ಸಮಯಕ್ಕೆ ಹೊರತು ದೇವರ ಪೂಜೆಯನ್ನೂ ವಿಜಯ ನಗರದ ಅಂಜಯ್ಯ ಸ್ವಾಮಿ ದೇವಸ್ತಾನದಲ್ಲಿ ಮುಗಿಸಿ ಸರಿಯಾರಿ ೮ ಗಂಟೆ ಸುಮಾರಿನಲ್ಲಿ ನಾವು ಬೆಂಗಳೂರನ್ನು ಬಿಟ್ಟೆವು. ನಮ್ಮಲ್ಲಿ ಯಾರು ರಾತ್ರಿ ಊಟವನ್ನೂ ಮಾಡಿರಲಿಲ್ಲ ಏಕೆಂದರೆ ನಾವು ಹೊರಟಿದ್ದು ಸಂಜೆಯ ವೇಳೆಗೆ, ಆದರೆ ನಾವು ತುಮಕೂರು ತಲುಪುವ ಹೊತ್ತಿಗೆ ಎಲ್ಲ ಹೋಟೆಲ್ ಗಳು ಮುಚ್ಚಿಹೊಗಿದ್ದವು, ಎಲ್ಲರು ಹೊಟ್ಟೆ ಹಸಿವಿನಿಂದ ಹೋಟೆಲ್ ಗಾಗಿ ಹುಡುಕುತ್ತಿದ್ದಾರೆ ಕೊನೆಗೆ ರಾತ್ರಿ ೧೧:೩೦ರ ವೇಳೆಗೆ ಮಾರ್ಗ ಮದ್ಯ ಒಂದು ಹೋಟೆಲ್ ಸಿಕ್ಕಿತು ಅಲ್ಲಿ ನಮ್ಮ ರಾತ್ರಿ ಮಹಾಬೋಜನವನ್ನು ಮುಗಿಸಿ ಅಲ್ಲಿಂದ ನಮ್ಮ ವಾಹನವನ್ನೂ ಹತ್ತಿದೆವು ಬೆಳಿಗ್ಗೆ ಸರಿಯಾಗಿ ೬:೩೦ಕ್ಕೆ ಕೊಡಚಾದ್ರಿ ಬೆಟ್ಟದ ತಪ್ಪಲನ್ನು ಸೇರಿದೆವು. ಅಲ್ಲಿಯೇ ಸ್ವಲ್ಪ ಹೊತ್ತು ಹರಟೆ ಹೊಡೆದು ಕಾಫೀ ಮುಗಿಸಿ ಖುಷಿಂದ ಮಾತನಾಡುತ್ತ ಕಾಲ ಹರಣ ಮಾಡುತಿದ್ದೆವು ಆದರೆ ನಮಗೆ ಒಂದುಶೋಕ್ ಕಾದಿತ್ತು, ಅದೇನೆಂದರೆ ಕೊಡಚಾದ್ರಿ ಬೆಟ್ಟದ ಮೇಲೆ ಹೋಗಲು ಯಾವ ವಾಹನವು ಎಲ್ಲ ಮತ್ತು ವಾಹವ ಇದ್ದರು ರಸ್ತೆ ಸರಿಯಾಗಿಲ್ಲ ಕಾರಣ ಅತೆಚ್ಚವಾಗಿ ಮಳೆ ಬಿದ್ದು ರಸ್ತೆಯು ಹಳಾಗಿಹೊಗಿತ್ತು ಹಾಗು ನಾವು ೧೫ ರೆಂದ ೨೦ ಕಿಲೋಮೀಟರ್ ಕಾಲ್ನಡುಗೆಯಲ್ಲೇ ಹೋಗಬೇಕಾಗಿತ್ತು ಆಗು ಅಲ್ಲಿ ಅತಿ ಹೆಚ್ಚು ಜಿಗಣೆಹುಳುಗಳ ಕಾಟ. ಮೊದಲ ಬಾರಿಗೆ ಕೊಡಚಾದ್ರಿ ಗಿರಿಯನ್ನು ನೋಡುವ ಹುಮ್ಮಸಿನಿಂದ ಯಾವುದನ್ನು ಲೆಕ್ಕಿಸದೆ ಹೊರಟೆವು, ಮೊದ ಮೊದಲು ನಮಗೆ ತುಂಬ ಹುಮ್ಮಸ್ಸಿನಿಂದ ಕೂಗುತ್ತ ಕಿರುಚುತ್ತ ಓಡುತ್ತಿದ್ದೆವು ಒಂದು ೩ ರಿಂದ ೪ ಕಿಲೋಮೀಟರ್ ಆದಮೇ ನಮಗೆ ಕಷ್ಟದ ಸಮಯ ಶುರುವಾಯಿತು, ನಾನು ಮತ್ತು ನನ್ನ ಗೆಳೆಯರು  ನಾಗರಾಜ್, ಸಂದೀಪ್,ರಾಜಶೇಖರ್, ಉಮೇಶ್ , ಮತ್ತಿತರರು ನೆಡೆದು ಹೋಗುತ್ತಿರುವಾಗ ನಾವುಗಳು ಒಂದು ವಿಷಯವನ್ನೂ ಗಮನಿಸಿರಲಿಲ್ಲ, ದಾರಿಯ ಉದ್ದಕ್ಕೂ ಬರಿ ಜಿಗಣೆ ಹುಳುಗಳು ನಮ್ಮ ಎಲ್ಲರ ಮೇಲು ಹತ್ತಿ ರಕ್ತ ಇರುತಿರುವುದನ್ನು ಆ ಹುಳುಗಳು ಹೇಗೆ ನಮ್ಮ ಮೈಮೇಲೆ ಹತ್ತಿದವು ಯೆಬುದೇ ಯಾರಿಗೂ ತಿಳಿಯುತ್ತಿರಲಿಲ್ಲ ಆ ಹುಳುಗಳು ರಕ್ತ ಈರುವುದೇ ನಮಗೆ ತಿಳಿಯುತ್ತಿರಲಿಲ್ಲ, ನಾವುಗಳು ಬರಿ ಫೋಟೋ ತಿಗಿಯುವುದ ಮತ್ತು ತಿಗಿಸಿಕೊಳ್ಳುವುದರಲ್ಲೇ ನಿರರತರಾಗಿದ್ದೆವು ಸ್ವಲ್ಪ ಹೊತ್ತಾದಮೇಲೆ ನಮ್ಮ ಗುಂಪಿನಲ್ಲಿನ ಒಬ್ಬ ಸ್ನೇಹಿತ ಬೇರೆ ಸ್ನೇಹಿತನ ಕಾಳುಗನ್ನು ಗಮನಿಸಿ ನೋಡಿ ಅವನ ಕಾಲುಗಳಲ್ಲಿ ೪ ಕ್ಕೂ ಹೆಚ್ಚು ಜಿಗಣೆ ಹುಳುಗಳು ಹತ್ತಿ ರಕ್ತ ಇರುತ್ತಿದ್ದವು , ಅದನ್ನು ನೋಡಿ ನಮಗೆಲ್ಲ ಗಾಬರಿಯಾಗಿ ಮುಂದೆ ಬರು ಹಾಗು ಮುಂದಿನ ದಾರಿಯುದ್ದಕ್ಕೂ ಮುಂಜಗ್ರತಿ ಹೊಯಿಸಿದೆವು.


ಹೀಗೆ ಮುಂದೆ ಸಾಗುತ್ತಿದ್ದೆವು ದಾರಿಯುದ್ದಕ್ಕೂ ತುಂತುರು ಮಳೆ, ಕೆಳಗೆ ಜಿಗಣೆಗಳ ಕಾಟ, ಅತ್ಯಂತ ಎತ್ತರವಾದ ಬೆಟ್ಟ, ಕಲ್ನಡುಗೆ ಮುಂದೆ ಮುಂದೆ ಸಾಗುತ್ತ ಸ್ವಲ್ಪ ಸ್ಸುತು ದೇಹಕ್ಕೆ ಆಯಾಸ ಆದರೆ ನಾವು ಎಲ್ಲಿಯೂ ಕೂತು ವಿಶ್ರಮಿಸಲು ಆಗುತ್ತಿರುಲಿಲ್ಲ ಏಕೆಂದರೆ ಅಲ್ಲಿಯ ಪ್ರದೇಶ ನೋಡಲು ಸುಂದರ ಆದರೆ ಅಷ್ಟೇ ಪ್ರಮಾಣದ ಜಿಗನೆಜುಳುಗಳ ಕಾಟ, ಹೇಗೋ ನಾನು ೫ ಕಿಲೋಮೀಟರ್ ದೂರ ತುಂಬ ಕಷ್ಟ ಪಟ್ಟು ಸಾಗಿದೆವು, ಕೆಲವು ಪ್ರವಾಸಿಗರು ಅಲ್ಲಿಯ ಸೌಂದರ್ಯ ವನ್ನೂ ಅನುವಬಿಸಿ ವಾಪಾಸ್ ಆಗುತ್ತಿದ್ದರು ಅವರನ್ನು ನಾವು ಕೇಳಿದೆವು ಇನ್ನು ಏಷ್ಟು ದೂರ ಎದೆ ಆ ಕೊಡಚಾದ್ರಿ ಶಿಖರ , ಅವರು ಉತ್ತರಿಸಿದ್ದೆ ಇನ್ನು ತುಂಬ ದೂರ ಇದೆ ಎಂದರು ಅವರಲ್ಲಿ ಹೆಚ್ಚು ಹುಡುಗ ಹುಡುಗಿಯರು ಎದ್ದರು ಅವರೆಲ್ಲ ನಮ್ಮ ಹಾಗೆ ಬೆಂಗಳೂರಿನಿಂದ ಬಂದ್ದರು. ಹಾಗೆ ನಾವು ಮುಂದೆ ಸಾಗುತ್ತಿರುವಾಗ ಹೊಟ್ಟೆ ಹಸಿಯುತ್ತಿತ್ತು, ನನ್ನ ಗೆಳೆಯರು ತಿಂಡಿ ತಿನಿಸುಗಳನ್ನೂ ತಂದಿದ್ದರು ಬಿಸ್ಕೆಟ್ಸ್ ಗಳನ್ನೂ ತಂದಿದ್ದರು ಅವುಗಳನ್ನು ತಿನ್ನುತ್ತ ನಾವು ಮುಂದೆ ಸಾಗಿದೆವು. ಸರಿ ಸುಮಾರು ನಾವು ೧೦ ಗಂಟೆ ಬೆಳಿಗ್ಗೆ ಸರಿಯಾಗಿ ಒಂದು ಅರ್ಧ ದೂರ ಸಾಗಿದ್ದೆವು ಅಲ್ಲಿ ಸ್ವಲ್ಪ ವಿಶ್ರಮಿಸಲು ಜಾಗವಿತ್ತು ಅದು ಅತ್ಯಂತ ಎತ್ತರವಾದ ಸ್ತಳ ಅಲ್ಲಿ ಅಷ್ಟು ಜಿಗಣೆ ಹುಳುಗಳು ಇರಲಿಲ್ಲ ಅದ್ದರಿಂದ ನಾವುಗಳು ಅಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿ ಹಿಂದೆ ಒಳಿದಿದ್ದ ಕೆಲವು ಸ್ನೇಹಿತರಿಗಾಗಿ ಕಾದು ಕುಳಿತ್ತಿದ್ದೆವು, ಅಲ್ಲಿಯ ಜಾಗ ಫೋಟೋ ಸೇಸ್ಸಿಒನ್ಗೆ ತುಂಬ ಚನ್ನಾಗಿತ್ತು ಅಲ್ಲಿಯ ಕೆಲವು ಫೋಟೋಗಳು ಈಗಿವೆ. ಅಲ್ಲಿಯ ಸೌಂದರ್ಯವನ್ನೂ 
ನೋಡಲು ನಾವು ಅದೃಷ್ಟ ಮಾಡಿದ್ದೆವು ಎಂದು ಸ್ವಲ್ಪಕಾಲ ಬಾಸವಿಗಿತ್ತು.



....ಮುಂದುವರೆಯುವುದು....