Thursday, February 28, 2013

ಒಬ್ಬ ವ್ಯಕ್ತಿಯಾ ವ್ಯಕ್ತಿತ್ವ ತಿಳಿಯುವ ಮುನ್ನ, ವ್ಯಕ್ತಿತ್ವವನ್ನು ಅಳೆಯಬೇಡಿ......!





ಒಂದು ದಿನ ಒಬ್ಬ ತಂದೆ ಮತ್ತು ಮಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು, ಮಗನ ಯವಸ್ಸು ಸುಮಾರು ೨೪ ವರ್ಷಗಳಿರಬಹುದು ಎಂದುಕೊಳ್ಳಿ. 

ಅವರ ಮುಂದಿನ ಹಾಸನದಲ್ಲಿ ಒಂದು ಜೋಡಿ ಕುಳಿತಿತ್ತು. ಅವರು ಈ ತಂದೆ ಮಗನನ್ನು ಗಮನಿಸುತ್ತಿದ್ದರು.

ಮಗ ರೈಲಿನ ಕಿಟಕಿಯಬಳಿ ಕುಳಿತುಕೊಂಡು ಹೊರಗಡೆ ನೋಡುತ್ತಿದ್ದ. 

ಮಗ ತಂದೆಗೆ ಹೇಳಿದ, ಅಪ್ಪ ನೋಡಲ್ಲಿ ಗಿಡಗಳು ಮರಗಳು ನಮ್ಮ ಪಕ್ಕದಲ್ಲಿ ಓಡುತ್ತಿವೆ....! ಎಂದು. 

ಮುಂದೆಯೇ ಇದ್ದ ಆ ಜೋಡಿ ಮಾತಾಡಿಕೊಳ್ಳುತ್ತಿದ್ದರು, ನೋಡಿ ಆ ಹುಡುಗ ನೋಡಲು ೨೪ ವರ್ಷದವನ ಹಗೆ ಕಾಣುತ್ತಾನೆ, ಆದರೆ ಬುದ್ದಿ ಬ್ರಮಣೆಯಾಗಿರುವವನ  ಹಾಗೆ ಮಾತನಾಡುತಿದ್ದಾನೆ ಎಂದುಕೊಂಡರು.

ಆದೆ ಸಮಯದಲ್ಲಿ , ಮಗ ಮತ್ತೆ ಕೂಗಿ ಹೇಳಿದ, ಅಪ್ಪ ನೋಡಲ್ಲಿ ಮೋಡಗಳು ನಮ್ಮ ಜೊತೆ ಓಡುತ್ತಿವೆ....! ಎಂದ.

ಅದನ್ನ ಕೇಳಿಸಿಕೊಂಡ ಆ ಜೋಡಿ, ಅಪ್ಪನಿಗೆ ಹೇಳಿದರು, ನೀವು ನಿಮ್ಮ ಮಗನನ್ನು ಯಾವುದಾದರು ಒಂದು ಒಳ್ಳೆಯ ಆಸ್ಪತ್ರೆಗೆ ತೋರಿಸಿ... ಎಂದರು.

ಅದಕ್ಕೆ ಆ ಅಪ್ಪ ಉತ್ತರಿಸಿದ... ನಾನು ನನ್ನ ಮಗನನ್ನು  ಆಸ್ಪತ್ರೆಗೆ ತೋರಿಸಿದೆ, ಈಗ ನಾವಿಬ್ಬರು  ಅಲ್ಲಿಂದಾನೆ ಬರುತ್ತಿದೇವೆ.... 

ನನ್ನ ಮಗ ಹುಟ್ಟು ಕುರುಡನಾಗಿದ್ದ... ಮೊನ್ನೇತಾನೇ ಅವನಿಗೆ ಕಣ್ಣಿನ ಆಪರೇಷನ್ ಆಯಿತು.... ನನ್ನ ಮಗ ಇವತ್ತೇ ಈ ಜಗತ್ತನ್ನು ನೋಡುತ್ತಿರುವುದು ..... ಎಂದ. 

ಆ ಜೋಡಿ ಮೌನದಿಂದ ತಲೆತಗ್ಗಿಸಿದರು....!


ಈ ಕಥೆಯ ಮೂಲಕ ನಾನು ಹೇಳಲು ಬಯಸುವುದೇನೆಂದರೆ, ಪ್ರತಿಯೊಬ್ಬ ವ್ಯಕ್ತಿಯಾ ಹಿಂದೆ ಒಂದೊಂದು ಕಥೆಯಿರುತ್ತದೆ. ದಯಮಾಡಿ ಸರಿಯಾಗಿ ತಿಳಿದು ಕೊಳ್ಳುವ ಮುನ್ನ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಬೇಡಿ.....!


*****************************The End***************************