Sunday, July 21, 2013

ಸಂತೋಷವಿಲ್ಲದ ಮಹಿಳೆ..... !





ಒಂದು ದಿನ ಒಬ್ಬ ಹಿರಿಯರೊಬ್ಬರು, ಒಂದು ಸಂತೋಷವೇ ಇಲ್ಲವೆಂದು ಜೀವನ ನಡೆಸುತ್ತಿದ್ದ ಹುಡುಗಿಯನ್ನು ಭೇಟಿಯಾದ. 

ಆಕೆ ನೋಡಲು ತುಂಬ ಕಿನ್ನಥೆಯಿಂದಾ ಬಳಲುತ್ತಿರುವ ಹಾಗೆ ಬಾಸವಾಯಿತು. ಆಗ ಆ ಹಿರಿಯಾ ಆಕೆಗೆ ಒಂದು ಕೆಲಸ ಮಾಡಲು ಹೇಳಿದ, ಒಂದು ಗಾಜಿನ ಲೋಟದಲ್ಲಿ ನಿರು ತುಂಬಿಸಿ, ಒಂದು ಹಿಡಿ ಉಪ್ಪು ಬೆರಸುವಂತೆ ಹೇಳಿದ, ನಂತರ ಆ ನೀರನ್ನು ಕುಡಿದು ರುಚಿ ಮಾಡಿ, ಉತ್ತರ ತಿಳಿಸಲು ಹೇಳಿದ. 

ಆಕೆ ಹಿರಿಯರು ಹೇಳಿದ ಹಾಗೆ ಮಾಡಿದಳು, ಆ ಹುಡುಗಿ ಆ ನೀರನ್ನು ಕುಡಿದಳು, ಆ ನೀರು ಸಹಿಸಲಾರದಷ್ಟು ಉಪ್ಪು ಮಿಶ್ರಿತವಾಗಿರುವುದನ್ನು ಹೇಳಿದಳು. 

ನಂತರ, ಆ ಹಿರಿಯರು, ಮತ್ತೆ ಒಂದು ಹಿಡಿ ಉಪ್ಪನ್ನು ತಗೆದುಕೊಂಡು ಬರಲು ಹೇಳಿದರು, ಆ ಉಪ್ಪನ್ನು ಸಮೀಪದಲ್ಲಿರುವ ಕೆರೆಗೆ ಮಿಶ್ರಣಮಾಡಲು ಹೇಳಿದರು.

ನಂತರ, ಆಕೆಗೆ, ಕೆರೆಯ ನೀರನ್ನು ಕುಡಿದು, ರುಚಿ ತಿಳಿಸಲು ಹೇಳಿದರು. 

ಆಕೆ, ಕೆರೆಯ ನೀರನ್ನು ಕುಡಿದು, ಆ ನೀರು ತುಂಬ ಸಿಹಿಯಾಗಿದೆ ಎಂದು ಹೇಳಿದಳು. 


ಆಗ ಹಿರಿಯರು ಹೇಳಿದರು, ನೀನು ಒಂದು ಗಾಜಿನ ಲೋಟದಲ್ಲಿ ಬೆರೆಸಿದ ಉಪ್ಪಿನ ಪ್ರಮಾಣ ಮತ್ತು ಕೆರೆಯಲ್ಲಿ ಬೆರೆಸಿದ ಪ್ರಮಾಣ ಒಂದೇಆಗಿತ್ತು, ಆದರೆ ಅದರ ರುಚಿ ಬೇರೆ ಬೇರೆಯಾಗಿತ್ತು.

ಉಪ್ಪು ನಿಜ ಜೀವನದ ದುಃಖ, ನೋವುಗಳು, ಯಾಡರುತೊಡರುಗಳು ಇದ್ದಹಾಗೆ. 

ನೀರಿನ ಪ್ರಮಾಣ, ನೀನು ಯೋಚನೆ ಮಾಡುವ ವಿದಾನವಾಗಿರುತ್ತದೆ. 


ಈ ಕಥೆಯ ಮೂಲಕ ನಾನು ಹೇಳಲು ಹೊರಟಿರುವುದು ಏನೆಂದರೆ? ನಾವು ನಿಜ ಜೀವನದಲ್ಲಿ, ಚಿಕ್ಕ ದಾಗಿ ಯೋಚನೆ ಮಾಡಿದರೆ, ಸಮಸ್ಯೆ ದೊಡ್ಡದಾಗಿ ಕಾಣಿಸುತ್ತದೆ, ವಿಶಾಲವಾಗಿ ಯೋಚನೆ ಮಾಡುವುದನ್ನು ಅಬ್ಯಾಸ ಮಾಡಿಕೊಂಡರೆ, ಯಾವುದೇ ತೊಂದರೆ, ದುಃಖ, ನೋವುಗಳು, ಯಾಡರುತೊಡರುಗಳು ಬಂದರು ಸುಲಬವಾಗಿ ಪರಿಹಾರ ಕೊಡಬಹುದು. 


************************The End************************