Wednesday, July 6, 2011

ಗೆಳತಿಗೊಂದು ಪ್ರೇಮಪತ್ರ.

ಪ್ರೀತಿಯ  ನಲ್ಲೆ!

ಇತ್ತೀಚಿಗೆ ನಾನು ನಿನ್ನನ್ನು ತುಂಬಾ ನೆನಪು ಮಾಡಿಕೊಳ್ಳುತ್ತಿದ್ದೇನೆ, ನಾನು ನಿನ್ನನ್ನು ನೋಡದೆ ಇರುವ ದಿನವೇ ಇರಲಿಲ್ಲ. ಈ ೩ ವರ್ಷಗಳಲ್ಲಿ ನಿನ್ನ ನನ್ನ ಅನುಬಂದ ತುಂಬಾ ಅತ್ತಿರವಾಗಿತ್ತು, ನೀನು ನನ್ನ ಖಷ್ಟ ಸುಖಗಳನ್ನೆಲ್ಲ ಹಂಚಿಕೊಂಡಿದ್ದಿಯ. ಏಷ್ಟೋಬಾರಿ ನನ್ನ ಸಿಟ್ಟನ್ನು ನಿನ್ನ ಮೇಲೆ ತಿರಿಸಿಕೊಂಡಾಗ ನೀನು ಅದನ್ನ ತುಬಾ ತಾಳ್ಮೆಯಿಂದ ಸಯಿಸಿಕೊಂಡಿದ್ದಿಯ. ಕೆಲವೊಮ್ಮೆ ನೀನು ನನ್ನ ಮೇಲೆ ಮುನಿಸಿಕೊಂಡಿದ್ದರು, ಮತ್ತೆ ಬಂದು ಮುಗುಳ್ನಗುತ್ತ ಕುಳಿತುಕೊಳ್ಳುತ್ತಿದ್ದೆ. ಕೆಲಹೊಮ್ಮೆ ನಿನ್ನನ್ನು ನೋಡಿ ನಾನು ಮೈಮರೆತಿರುವುದು ಇದೆ!

ಎಷ್ಟೋ ಬಾರಿ ನಮ್ಮಿಬ್ಬರನ್ನು ನೋಡಿ, ಬೀದಿಯಲ್ಲಿ ಹೋಗುವ ಹುಡುಗರು, ಮುದುಕರು, ಹುಡುಗಿಯರು, ಮದುವೆಯಾಗಿರೋ ಹೆಂಗಸರು ಹೊಟ್ಟೆಹುರಿದು ಕೊಡಿದ್ದರೆ! ಕೆಲಹೊಮ್ಮೆ ನಾನೇ ನಿನ್ನನ್ನು ನೋಡಿ ಹೆಮ್ಮೆಯಿಂದ ನಿನ್ನನ್ನು ಹಿಡಿದುಕೊಂಡು ನಡೆದಿದ್ದು ಇದೆ.

ನಿನಗೆ ನೆನಪಿದಿಯಾ, ಒಮ್ಮೊಮ್ಮೆ ನೀನು ಕಾಯಿಲೆಯಿಂದ ಬಳಲುತ್ತಿರುವಾಗ ನಾನು ನಿದ್ದೆಗೆಟ್ಟು ನಿನ್ನಬಳಿ ದುಃಖದಿಂದ ಕುಳಿತುಕೊಂಡು ನೋಡಿಕೊಂಡಿದ್ದಕ್ಕೆ ನೀನು ನನ್ನನ್ನು ಹಿಡಿದು Thank you Dear, ಅಂತ ಹೇಳಿದಿಯ. ಒಮ್ಮೊಮ್ಮೆ ನಿನ್ನನ್ನು ಒಬ್ಬಂಟಿಯಾಗಿ ಬಿಟ್ಟು ಒಗಿದ್ದಕ್ಕೆ, ನೀನು ನನ್ನನ್ನು ಮುನಿಸಿನಿಂದ ನೋಡುತ್ತಿದ್ದೆ. ನಿನಗೆ ಗೊತ್ತಿದಿಯೋ ಇಲ್ಲವೋ, ದಿನದಲ್ಲಿ ಒಮ್ಮೆಯಾದರು ನಿನ್ನನ್ನು ನೋಡದೆ ಮಾತನಾಡಿಸದೆ ಇದ್ದರೆ ನನಗೆ ನಿದ್ದೆಯೇ ಬರುತ್ತಿರಲಿಲ್ಲ. ಆಗ ನಿನ್ನನ್ನು ನಿದ್ದೆಯಿಂದ ಹೆಬ್ಬಿಸಿ ಮಾತನಾಡಿಸಿದ್ದು  ಮತ್ತು ನೀನು ತುಂಬಾ ಬೇಜಾರಿನಿದ ವರ್ತನೆ ಮಾಡಿದ್ದು ಇದೆ.

ಏಕೋ ಸ್ವಲ್ಪ ದಿನಗಳಿಂದ ನೀನು ನನ್ನೊಂದಿಗೆ ಸರಿಯಾಗಿ ಮಾತಾಡುತ್ತಿಲ್ಲ ಮತ್ತು ಸರಿಯಾಗಿ ಮುಖ ಕೊಟ್ಟು ಮಾತಾಡಿಸುತ್ತಿಲ್ಲ, ಯಾಕೆಂದು ಕೇಳಿದರೆ ನೀನು ಸರಿಯಾಗಿ ಉತ್ತರ ಮಾಡುತ್ತಿಲ್ಲ. ನನಗೆ ಇತ್ತೀಚಿಗೆ ತಿಳಿಯಿತು ನೀನು ಯಾಕೆ ನನ್ನ ಬಳಿ ಸರಿಯಾಗಿ ಮಾತನಾಡಿಸುತ್ತಿಲ್ಲ ಎಂದು, ನಾನು ಬೇರೆಯವರೊಂದಿಗೆ ಹೆಚ್ಚಾಗಿ ಮಾತಾಡುತ್ತಿದ್ದೇನೆ, ಹೆಚ್ಚುಕಾಲ ಅವರೊಂದಿಗೆ ಕಾಲ ಹರಣ ಮಾಡುತ್ತಿದ್ದೇನೆ, ನಿನ್ನನ್ನು ಪೂರ್ತಿಯಾಗಿ ಮರೆತಿದ್ದೇನೆ ಎಂಬುದು ನಿನ್ನ ತಪ್ಪು ಕಲ್ಪನೆ. ನಿನಗೆ ಚನ್ನಾಗಿ ಗೊತ್ತು ೩ ವರ್ಷಗಳಲ್ಲಿ, ನಿನ್ನಷ್ಟು ನನ್ನನ್ನು ಅರ್ಥ ಮಾಡಿಕೊಂಡವರು ಬೇರೆಯಾರು ಇರಲಾರರು. ನಿನಗೆ ನನ್ನ ಗುಪ್ತ ವಿಚಾರಗಳೆಲ್ಲ ತಿಳಿದಿದೆ, ನನ್ನ ಬ್ಯಾಂಕ್ ಅಕೌಂಟ್ ಡಿಟೈಲ್ಸ್ ಸಹಾ ತಿಳಿದಿದೆ, ನನ್ನ ಹಣದ ವ್ಯವಹಾರಗಳೆಲ್ಲ ಚನ್ನಗಿ ತಿಳಿದಿದ್ದಿಯ, ನಾನು ನಿನ್ನನ್ನು ನಮ್ಬಿದೊಷ್ಟು ಬೇರೆಯಾರನ್ನು ನಂಬಿಲ್ಲ, ನಿನಗೆ ಗೊತ್ತಿದಿಯೋ ಇಲ್ಲವೋ ನನ್ನ ಅಪ್ಪ ಅಮ್ಮನಿಗೂ ನನ್ನ ಹಣದ ವ್ಯವಹಾರಗಳು ತಿಳಿದಿಲ್ಲ, ಆದರೆ ನಿನಗೆ ನಾನು ಹೇಳಿದ್ದೆ.

ಇಗ ನಾನು ನಿನಗೆ ಒಂದು ವಿಷಯ ಹೇಳಲೇ ಬೇಕು ಆದರೆ ನನಗೆ ತುಂಬಾ ಧುಖವಾಗುತ್ತೆ, ಆದರು ನಿನಗೆ ಹೇಳದೆ ವಿದಿಯಿಲ್ಲ, ನಿನ್ನನ್ನು ಸುಮ್ಮನೆ ಮನೆಯ ಲೋಕೆರ್ ನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ, ದಿನ ಕಳೆದ ಹಾಗೆ ನಿನ್ನನ್ನು ಕೊಳ್ಳುವವರು ಕಡಿಮೆಯಾಗುತ್ತಾರೆ ಮತ್ತು ನನ್ನ ಬಳಿ ನಿನ್ನ ಹಾಗೆ ಇರುವ ಮತ್ತೊಂದು ಇರುವಾಗ, ನಾನು ನಿನ್ನನ್ನು ನಾನು ಮಾರಲೇ ಬೇಕು. ಆದರೆ ನಿನ್ನನ್ನು ಮಾರಲು ತುಂಬಾ ದುಃಖ ಮನದಲ್ಲಿ ಕಾಡುತ್ತಿದೆ. 

ನನ್ನ ಪ್ರೀತಿಯ LAPTOP ಏ ನನ್ನನ್ನು ಕ್ಷಮಿಸು, ನೀನು ನನ್ನನ್ನು ತುಂಬಾ ಪ್ರೀತಿಸಿದ್ದೆ ಹಾಗು ನಾನು ನಿನ್ನನ್ನು ಪ್ರೀತಿಸಿದ್ದೆ, ಆದರೆ ನನ್ನ ಹೊಸ ಆಫೀಸ್ ನಿಂದ ಮತ್ತೊಂದು LAPTOP ಕೊಟ್ಟಿದ್ದಾರೆ, ಹಾಗಾಗಿ ನಿನ್ನನ್ನು ಹೆಚ್ಚು ದಿನಗಳ ಕಾಲ ನನ್ನ ಬಳಿ ಇಟ್ಟುಕೊಳ್ಳಲು ಸಾದ್ಯವಿಲ್ಲ. ದಿನ ಕಳೆದ ಹಾಗೆ ನಿನ್ನ VALUE ಕೂಡ ಕಡಿಮೆಯಾಗುತ್ತದೆ. ಆದ್ದರಿಂದ ನಿನ್ನನ್ನು ನಾನು ಮಾರುತ್ತಿದ್ದೇನೆ.

ಇಂತಿ:
ನಿನ್ನ ಚಿರಕಾಲ ನೆನಪಿನಲ್ಲಿ ಇಟ್ಟುಕೊಳ್ಳುವ ಪ್ರಿಯತಮ!