Monday, December 23, 2013

ಜಿ ಎಸ್ ಎಸ್ ರವರಿಗೆ ನಮ್ಮ ಎದೆತುoಬಿದ ನಮನ.... !








ಗೆಳೆಯರೇ,

ಈ ದಿನ ಕನ್ನಡ ನಾಡಿಗೆ ಅತ್ಯಂತ ನಷ್ಟಕರ ದಿನವೆಂದು  ನಾನು ಹೇಳಲು ಬಯಸುತ್ತೆನೆ. ಏಕೆಂದರೆ, G.S.S ರವರು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ.

ನಿಮಗೆ ಗೊತ್ತಿದಿಯೋ ಇಲ್ಲವೋ! ನಾನು ಒಬ್ಬ G.S.S. ಅಬಿಮಾನಿಯಾಗಿ ಹೇಳುತ್ತಿಲ್ಲ. ನಾನು G.S.S ರವರು ಬರೆದ ಹಾಡುಗಳನ್ನು ಕೇಳುತ್ತಾ ಎಷ್ಟೋ ಸುಖ ದುಃಖ ಗಳನ್ನೂ ತುಂಬಾ ಸರಾಗವಾಗಿ ನಿಬಾಯಿಸಿದೇನೆ. ಒಂದೊಂದು ಬಾರಿ ನನಗು ಅನ್ನಿಸುತ್ತಿತ್ತು, ನಾನು ಯಾಕೆ G.S.S ತರಹ ಯಾಕೆ ಆಗಬಾರದಿತ್ತು? ಅಂಥಾ ಅನ್ನಿಸುತ್ತಿತ್ತು.... !

ಈ ಕನ್ನಡ ಗೆಳೆಯರು ಬ್ಲಾಗ್ ಕ್ರಿಯೇಟ್ ಮಾಡಲು G.S.S ರವರು ನನ್ನಮೇಲೆ  ತುಂಬಾ ಪ್ರಭಾವ ಬೀರಿದ್ದರು.

ಈ ದಿನ ನನಗೆ ಮತ್ತು ನನ್ನ ಬ್ಲಾಗ್ ಗೆ ತುಂಬಾ ದುಃಖ ತಂದಿದೆ.

ಆ ದೇವರು G.S.S ರವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ನಾನು ಈ ಬ್ಲಾಗ್ ಮೂಲಕ ಕೇಳಿಕೊಳ್ಳುತ್ತೇನೆ.

ಈ ಕನ್ನಡ ನಾಡಿನಲ್ಲಿ ಮತ್ತೊಮ್ಮೆ ಹುಟ್ಟಿಬರಲಿ ಎಂದು ನಾನು ತುಂಬು ಹೃದಯದಿಂದ ಆಶಿಸುತ್ತೇನೆ.




*****************************The End********************************************

Sunday, July 21, 2013

ಸಂತೋಷವಿಲ್ಲದ ಮಹಿಳೆ..... !





ಒಂದು ದಿನ ಒಬ್ಬ ಹಿರಿಯರೊಬ್ಬರು, ಒಂದು ಸಂತೋಷವೇ ಇಲ್ಲವೆಂದು ಜೀವನ ನಡೆಸುತ್ತಿದ್ದ ಹುಡುಗಿಯನ್ನು ಭೇಟಿಯಾದ. 

ಆಕೆ ನೋಡಲು ತುಂಬ ಕಿನ್ನಥೆಯಿಂದಾ ಬಳಲುತ್ತಿರುವ ಹಾಗೆ ಬಾಸವಾಯಿತು. ಆಗ ಆ ಹಿರಿಯಾ ಆಕೆಗೆ ಒಂದು ಕೆಲಸ ಮಾಡಲು ಹೇಳಿದ, ಒಂದು ಗಾಜಿನ ಲೋಟದಲ್ಲಿ ನಿರು ತುಂಬಿಸಿ, ಒಂದು ಹಿಡಿ ಉಪ್ಪು ಬೆರಸುವಂತೆ ಹೇಳಿದ, ನಂತರ ಆ ನೀರನ್ನು ಕುಡಿದು ರುಚಿ ಮಾಡಿ, ಉತ್ತರ ತಿಳಿಸಲು ಹೇಳಿದ. 

ಆಕೆ ಹಿರಿಯರು ಹೇಳಿದ ಹಾಗೆ ಮಾಡಿದಳು, ಆ ಹುಡುಗಿ ಆ ನೀರನ್ನು ಕುಡಿದಳು, ಆ ನೀರು ಸಹಿಸಲಾರದಷ್ಟು ಉಪ್ಪು ಮಿಶ್ರಿತವಾಗಿರುವುದನ್ನು ಹೇಳಿದಳು. 

ನಂತರ, ಆ ಹಿರಿಯರು, ಮತ್ತೆ ಒಂದು ಹಿಡಿ ಉಪ್ಪನ್ನು ತಗೆದುಕೊಂಡು ಬರಲು ಹೇಳಿದರು, ಆ ಉಪ್ಪನ್ನು ಸಮೀಪದಲ್ಲಿರುವ ಕೆರೆಗೆ ಮಿಶ್ರಣಮಾಡಲು ಹೇಳಿದರು.

ನಂತರ, ಆಕೆಗೆ, ಕೆರೆಯ ನೀರನ್ನು ಕುಡಿದು, ರುಚಿ ತಿಳಿಸಲು ಹೇಳಿದರು. 

ಆಕೆ, ಕೆರೆಯ ನೀರನ್ನು ಕುಡಿದು, ಆ ನೀರು ತುಂಬ ಸಿಹಿಯಾಗಿದೆ ಎಂದು ಹೇಳಿದಳು. 


ಆಗ ಹಿರಿಯರು ಹೇಳಿದರು, ನೀನು ಒಂದು ಗಾಜಿನ ಲೋಟದಲ್ಲಿ ಬೆರೆಸಿದ ಉಪ್ಪಿನ ಪ್ರಮಾಣ ಮತ್ತು ಕೆರೆಯಲ್ಲಿ ಬೆರೆಸಿದ ಪ್ರಮಾಣ ಒಂದೇಆಗಿತ್ತು, ಆದರೆ ಅದರ ರುಚಿ ಬೇರೆ ಬೇರೆಯಾಗಿತ್ತು.

ಉಪ್ಪು ನಿಜ ಜೀವನದ ದುಃಖ, ನೋವುಗಳು, ಯಾಡರುತೊಡರುಗಳು ಇದ್ದಹಾಗೆ. 

ನೀರಿನ ಪ್ರಮಾಣ, ನೀನು ಯೋಚನೆ ಮಾಡುವ ವಿದಾನವಾಗಿರುತ್ತದೆ. 


ಈ ಕಥೆಯ ಮೂಲಕ ನಾನು ಹೇಳಲು ಹೊರಟಿರುವುದು ಏನೆಂದರೆ? ನಾವು ನಿಜ ಜೀವನದಲ್ಲಿ, ಚಿಕ್ಕ ದಾಗಿ ಯೋಚನೆ ಮಾಡಿದರೆ, ಸಮಸ್ಯೆ ದೊಡ್ಡದಾಗಿ ಕಾಣಿಸುತ್ತದೆ, ವಿಶಾಲವಾಗಿ ಯೋಚನೆ ಮಾಡುವುದನ್ನು ಅಬ್ಯಾಸ ಮಾಡಿಕೊಂಡರೆ, ಯಾವುದೇ ತೊಂದರೆ, ದುಃಖ, ನೋವುಗಳು, ಯಾಡರುತೊಡರುಗಳು ಬಂದರು ಸುಲಬವಾಗಿ ಪರಿಹಾರ ಕೊಡಬಹುದು. 


************************The End************************

Thursday, February 28, 2013

ಒಬ್ಬ ವ್ಯಕ್ತಿಯಾ ವ್ಯಕ್ತಿತ್ವ ತಿಳಿಯುವ ಮುನ್ನ, ವ್ಯಕ್ತಿತ್ವವನ್ನು ಅಳೆಯಬೇಡಿ......!





ಒಂದು ದಿನ ಒಬ್ಬ ತಂದೆ ಮತ್ತು ಮಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು, ಮಗನ ಯವಸ್ಸು ಸುಮಾರು ೨೪ ವರ್ಷಗಳಿರಬಹುದು ಎಂದುಕೊಳ್ಳಿ. 

ಅವರ ಮುಂದಿನ ಹಾಸನದಲ್ಲಿ ಒಂದು ಜೋಡಿ ಕುಳಿತಿತ್ತು. ಅವರು ಈ ತಂದೆ ಮಗನನ್ನು ಗಮನಿಸುತ್ತಿದ್ದರು.

ಮಗ ರೈಲಿನ ಕಿಟಕಿಯಬಳಿ ಕುಳಿತುಕೊಂಡು ಹೊರಗಡೆ ನೋಡುತ್ತಿದ್ದ. 

ಮಗ ತಂದೆಗೆ ಹೇಳಿದ, ಅಪ್ಪ ನೋಡಲ್ಲಿ ಗಿಡಗಳು ಮರಗಳು ನಮ್ಮ ಪಕ್ಕದಲ್ಲಿ ಓಡುತ್ತಿವೆ....! ಎಂದು. 

ಮುಂದೆಯೇ ಇದ್ದ ಆ ಜೋಡಿ ಮಾತಾಡಿಕೊಳ್ಳುತ್ತಿದ್ದರು, ನೋಡಿ ಆ ಹುಡುಗ ನೋಡಲು ೨೪ ವರ್ಷದವನ ಹಗೆ ಕಾಣುತ್ತಾನೆ, ಆದರೆ ಬುದ್ದಿ ಬ್ರಮಣೆಯಾಗಿರುವವನ  ಹಾಗೆ ಮಾತನಾಡುತಿದ್ದಾನೆ ಎಂದುಕೊಂಡರು.

ಆದೆ ಸಮಯದಲ್ಲಿ , ಮಗ ಮತ್ತೆ ಕೂಗಿ ಹೇಳಿದ, ಅಪ್ಪ ನೋಡಲ್ಲಿ ಮೋಡಗಳು ನಮ್ಮ ಜೊತೆ ಓಡುತ್ತಿವೆ....! ಎಂದ.

ಅದನ್ನ ಕೇಳಿಸಿಕೊಂಡ ಆ ಜೋಡಿ, ಅಪ್ಪನಿಗೆ ಹೇಳಿದರು, ನೀವು ನಿಮ್ಮ ಮಗನನ್ನು ಯಾವುದಾದರು ಒಂದು ಒಳ್ಳೆಯ ಆಸ್ಪತ್ರೆಗೆ ತೋರಿಸಿ... ಎಂದರು.

ಅದಕ್ಕೆ ಆ ಅಪ್ಪ ಉತ್ತರಿಸಿದ... ನಾನು ನನ್ನ ಮಗನನ್ನು  ಆಸ್ಪತ್ರೆಗೆ ತೋರಿಸಿದೆ, ಈಗ ನಾವಿಬ್ಬರು  ಅಲ್ಲಿಂದಾನೆ ಬರುತ್ತಿದೇವೆ.... 

ನನ್ನ ಮಗ ಹುಟ್ಟು ಕುರುಡನಾಗಿದ್ದ... ಮೊನ್ನೇತಾನೇ ಅವನಿಗೆ ಕಣ್ಣಿನ ಆಪರೇಷನ್ ಆಯಿತು.... ನನ್ನ ಮಗ ಇವತ್ತೇ ಈ ಜಗತ್ತನ್ನು ನೋಡುತ್ತಿರುವುದು ..... ಎಂದ. 

ಆ ಜೋಡಿ ಮೌನದಿಂದ ತಲೆತಗ್ಗಿಸಿದರು....!


ಈ ಕಥೆಯ ಮೂಲಕ ನಾನು ಹೇಳಲು ಬಯಸುವುದೇನೆಂದರೆ, ಪ್ರತಿಯೊಬ್ಬ ವ್ಯಕ್ತಿಯಾ ಹಿಂದೆ ಒಂದೊಂದು ಕಥೆಯಿರುತ್ತದೆ. ದಯಮಾಡಿ ಸರಿಯಾಗಿ ತಿಳಿದು ಕೊಳ್ಳುವ ಮುನ್ನ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಬೇಡಿ.....!


*****************************The End***************************