Tuesday, November 29, 2011

ಪ್ರೀತಿ ಕುರುಡು ಆಸೆ ಮರುಳು.....


ಒಬ್ಬ ಕುರುಡ ಹುಡುಗ, ಒಬ್ಬ ಹುಡುಗಿಯನ್ನ ಪ್ರೀತಿಸುತ್ತಿದ್ದ.

ಒಂದು ದಿನ ಆ ಹುಡುಗಿ ಕೇಳಿದಳು, ನೀನು ನನ್ನನ್ನು ಮಾಡುವೆಯಾಗುತ್ತಿಯಾ?

ಅದಕ್ಕೆ ಆ ಹುಡುಗ ಹೇಳಿದ, ನಾನು ನಿನ್ನನ್ನು ಮದುವೆಯಾಗಲು ಇಷ್ಟವಿದೆ, ಆದರೆ ನಾನು ಕುರುಡ, ನಾನು ಯಾವಾಗ ನಿನ್ನನ್ನು ನೋಡಲು ಸಾದ್ಯ?

ಕೆಲವು ದಿನಗಳನಂತರ, ಆ ಹುಡುಗನಿಗೆ ಯಾರೋ ಒಬ್ಬರು ಕಣ್ಣುಗಳನ್ನು ದಾನ ಮಾಡಿದರು.

ಆ ಹುಡುಗ ತುಂಬಾ ಖುಷಿಯಾಗಿದ್ದ, ಆತನ ಪ್ರೇಯಸಿಯನ್ನು ನೋಡಲು . ಆ ಹುಡುಗ ತನ್ನ ಪ್ರೇಯಸಿಯ ಬಳಿ ಹೋಗಿ ನಿಂತ, ಆದರೆ ಆ ಹುಡುಗಿ ಕುರುಡಿಯಾಗಿದ್ದಳು.

ಆಗ ಆ ಹುಡುಗ ಆಕೆಯನ್ನು ಮದುವೆಯಾಗಲು ನಿರಾಕರಿಸಿದನು.

ಆ ಹುಡುಗಿ ಅವನಿದ್ದ ಸ್ಥಳದಿಂದ ಹೋಗುವಾಗ ಒಂದು ಮಾತು ಹೇಳಿ ಹೋದಳು...

"ನಿನ್ನ ಇಷ್ಟದಂತೆಯೇ ಆಗಲಿ, ಆದರೆ ದಯಮಾಡಿ ನನ್ನ ಕಣ್ಣುಗಳನ್ನು ಜೋಪಾನವಾಗಿ ನೋಡಿಕೋ ಎಂದು ಹೊರಟು ಹೋದಳು"

ಪ್ರೀತಿ ಕುರುಡು ಆಸೆ ಮರುಳು.....

Wednesday, September 28, 2011

ನಮ್ಮಿಬ್ಬರ ಕನಸು ಒಂದೇ.....

ಹೊಸ ಕನಸುಗಳು ಮೊಡುತಿವೆ ಪ್ರತಿ ರಾತ್ರಿಯಲಿ
ಕನಸು ನನಸು ಮಾಡುವಾಸೆಯೂ ಮುಡುತಿವೆ ಪ್ರತಿ ರಾತ್ರಿಯಲಿ
ಕನಸುಗಳನಂಬಿ ಜೊತೆ ಓಡುವಾಸೆ ನನ್ನ ಮನದಲಿ
ಕನಸಿನಿದೆದ್ದ ಭಯದ ನನ್ನ ಕಣ್ಣುಗಳು ಅರ್ಧ ರಾತ್ರಿಯಲಿ
ನಿದ್ದೆಬಾರದೆ ಕೊರಗುತಿವೆ ನನ್ನ ಮನದಲಿ

ನಿನ್ನ ಇಂದಿನ ಪ್ರೀತಿ ನನ್ನ ಮುಂದಿನ ಕನಸು
ನಿನ್ನ ಮುಂದಿನಾ ಕನಸು ನನ್ನ ಇಂದಿನಾ ಪ್ರಿತಿ
ನಮ್ಮಿಬ್ಬರ ಕನಸು ಮುಂದೆ ಇಂದಿನಾ ಕನಸು
ನನಗಾಗಿ ನೀನು ಕಟ್ಟಿದೆ ಕನಸು
ನಿನ್ನಿಂದ ನಾನು ಕಟ್ಟಿದೆ ಕನಸು
ಕೊನೆಯವರೆಗೂ ಉಳಿಯಲಿ ನಮ್ಮ ಕನಸು

ನೀ ಹಂಚಿದೆ ನಿನ್ನ ಕನಸು ನನ್ನಜೊತೆ
ನಾ ಚಿಂತಿಸಿದೆ ನಿನ್ನ ಕನಸು ನನ್ನ ಕನಸೆಂದು
ನಿನಗೆ ನಾ ಕನಸು ನನಗೆ ನೀ ಕನಸು
ನಮ್ಮಿಬ್ಬರ ಕನಸು ಒಂದು ಮನಸು
 
ಎಂದೂ ಮುರಿಯದಿರಲಿ ನಮ್ಮಿಬ್ಬರ ಕನಸು 

Thursday, September 8, 2011

ಸೋಲಿನಿಂದ ಹೊರಬರುವುದು ಹೇಗೆ...?



ಡಿಯರ್ ಫ್ರೆಂಡ್ಸ್,

ನಾನು ತುಂಬಾ ದಿನಗಳ ನಂತರ ಒಂದು ಕಥೆಯನ್ನು ಬರೆಯುತ್ತಿದ್ದೇನೆ..... ಕ್ಷಮೆಯಿರಲಿ......

ನಾವುಗಳು ಯಾವುದೇ ಕೆಲಸ, ವ್ಯಾಪಾರ ಅಥವಾ ಯಾವುದೇ ಪರೀಕ್ಷೆ ಪ್ರರಂಬದ ಮುಂಚೆ, ನಮಗೆ ಮನಸ್ಸಿನಲ್ಲಿ ಒಂದು ಭಯ ಕಾಡುತ್ತಿರುತ್ತದೆ, ಆದೇ ಸೋಲಿನ ಭಯ!!!!!

ಈ ದಿನ ನಾವು ಆ ಸೋಲಿನ ಭಯದಿಂದ ಹೊರಬರುವುದು ಹೇಗೆ ಎಂಬುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.
ಕೆಲವೊಮ್ಮೆ ನಾವು ಒಂದಕ್ಕಿಂತ ಹೆಚ್ಚು ಕೆಲಸದ ನಿರ್ಧಾರ ತೆಗೆದುಕೊಳ್ಳುವಾಗ ನಾವು ತುಂಬ ಭಯಪಡುತ್ತೇವೆ, ಆದರೆ ನಾವು ಒಂದನ್ನು ಮರೆತುಬಿಡುತ್ತೇವೆ. ಸೋಲು ಎಂಬುದು ಎಲ್ಲರ ಜೀವನದಲ್ಲಿ ಸಾಮಾನ್ಯವಾದದ್ದು ಅದೇರೀತಿ ಆ ಸೋಲಿನಿಂದ ಹೊರೋಬರುವುದು ಸಾಮಾನ್ಯವಾದ ವಿಚಾರವೇ!!!!!

ಎಲ್ಲರು ಈ ಸೋಲಿನ ಬಯವನ್ನು ತಮ್ಮ ಜೀವನದಲ್ಲಿ ಹೆದರಿಸಿರುತ್ತಾರೆ, ಈ ಸೋಲು ಎಂಬುದು ಎಲ್ಲರ ಜೀವನದ ಬೇರೆ ಬೇರೆ ವಯಸ್ಸಿನಲ್ಲಿ ಬೇರೆ ಬೇರೆ ರೀತಿಯಿಂದ ಕಾಡುತ್ತದೆ, ಆದರೆ ಇಲ್ಲಿ ನಿಮಗೆ ಒಂದು ಒಳ್ಳೆಯ ವಿಷಯ ಹೇಳಲು ಪ್ರಯತ್ನಿಸುತ್ತೇನೆ, ಅದು ನಿಮಗೆ ಸೋಲಿನಿಂದ ಹೊರಬರಲು ಸಹಾಯವಾಗಬಹುದು.

ಒಂದು ಪ್ರಶ್ನೆ! ಸೋಲಿನಿಂದ ಹೊರಬರುವುದು ಹೇಗೆ......?

ಈ ಪ್ರೆಶ್ನೆಗೆ ಉತ್ತರಿಸಲು ಒಂದು ಒಳ್ಳೆಯ ಮಾರ್ಗವಿದೆ, ಜೀವನದಲ್ಲಿ ಯಾರು ಸೋಲನ್ನು ಮೆಟ್ಟಿನಿಂತು, ಅವರ ಅನುಬವಗಳನ್ನು ಎಲ್ಲರಿಗೂ ಹಂಚಿದ್ದಾರೆ. ಆ ಅನುಬವಗಳನ್ನು ಓದಿದರೆ ನಿಮಗೆ ಸಹಾಯವಾಗಬಹುದು. ಇಲ್ಲಿ ನಾನು ಒಬ್ಬ  Olympic athlete ಆಟಗಾರ Guy Drut ಬಗ್ಗೆ ಹೇಳಲು ಹಿಚ್ಚಿಸುತ್ತೇನೆ..

ಇದೊಂದು ಫ್ರೆಂಚ್ Olympic ಆಟಗಾರ Guy Drut ನ ನೈಜ ಕಥೆ! ಒಲಿಂಪಿಕ್ 1976 ನಲ್ಲಿ, ಫ್ರಾನ್ಸ್ ನಿಂದ ಒಬ್ಬನೇ ಒಬ್ಬ ಆಟಗಾರ track-and-field ದರಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಸಾಮರ್ಥ್ಯ ಹೊಂದಿದ್ದ. ಆದರೆ ಆತನಿಗೆ ತುಂಬಾ ಭಯವಿತ್ತು, ಆತನಿಗೆ ಚನ್ನಾಗಿ ಗೊತ್ತಿತ್ತು, ಹಿಡಿ ದೇಶದ ಮಾನ ಮತ್ತು ಪ್ರತಿಷ್ಠೆ ಉಳಿಸಿಕೊಳ್ಳುವ ಭಾರ ಅವನದಾಗಿತ್ತು! ಈ ಸಮಯದಲ್ಲಿ ಆತನ ಸ್ನೇಹಿತನೊಬ್ಬ ಅತ್ತಿರ ಬಂದು ಒಂದು ಸಲಹೆ ಕೊಟ್ಟಿದ್ದ. ಹೇಗೆ ಸೋಲಿನ ಭಯದಿಂದ ಹೊರಗೆ ಬರುವುದು ಎಂಬ ಸಲಹೆ " ಗೆಳೆಯ ಈ ಸಾಲುಗಳನ್ನು ನಿನ್ನ ಮನದಲ್ಲೇ ಎಳಿಕೋ "ನೀನೊಬ್ಬನೇ ನಿನ್ನ ಧೇಹ ಮತ್ತು ಮನಸ್ಸುನ್ನು ಅತ್ಯುತ್ತಮ ಪ್ರದರ್ಶನಕ್ಕೆ ಬಳಸಿಕೊಳ್ಳುವ ಸಮರ್ಥ್ಯ ನಿನಗೆ ಮಾತ್ರ ಇದೆ" ಎಂಬುದನ್ನು ಹಲವುಬಾರಿ ಮನಸ್ಸಿನಲ್ಲೇ ಹೇಳಿಕೋ! ಎಂಬ ಸಲಹೆಯನ್ನು ಕೊಟ್ಟನು.ಆದೇರೀತಿ ಆತನು ಮನಸ್ಸಿನಲ್ಲೇ ಹಲವು ಬಾರಿ ಹೇಳಿಕೊಂಡು ಆಟಕ್ಕೆ ತಯಾರಿಯಾಗಿದ್ದನು.

ಆಟದ ದಿನ ಬಂದೆಬಿಟ್ಟಿತು, ಆಟಕ್ಕೆ ಎಲ್ಲಾರಿತಿಯಾಗಿ ತಯಾರಿಯಾಗಿದ್ದ. ಆತನು ಒಂದು ವಿಷಯವನ್ನು ಮನದಲ್ಲಿ ದೃಡವಾಗಿ ನೆನಸಿಕೊಂಡಿದ್ದ, ಅದು " ಒಂದು ವೇಳೆ ನಾನು ಆಟದಲ್ಲಿ ಗೆದ್ದರೆ, ಇಡಿ ದೇಶವೇ ನನ್ನನ್ನು ಹೊಗಳುತ್ತದೆ, ಹಾಗೆ ನನಗೆ ದೇಶದ ಮಾನ ಉಳಿಸಿದ ಅಭಿಮಾನವಿರುತ್ತದೆ. ಒಂದುವೇಳೆ ನಾನು ಸೋತರೂ, ನನ್ನ ಸ್ನೇಹಿತರು ನನ್ನ ಒಳ್ಳೆಯ ಸ್ನೇಹಿತರಾಗಿರುತ್ತಾರೆ, ನನ್ನ ದ್ವೇಷಿಗಳು, ದ್ವೆಷಿಗಳಗಿಯೇ ಇರುತ್ತಾರೆ. ಈ ಪ್ರಪಂಚದಲ್ಲಿ ಏನೂ ಬದಲಾವಣೆಯಾಗುವುದಿಲ್ಲ"

Guy Drut. ತನ್ನ ಸ್ನೇಹಿತನ ಸಲಹೆಯನ್ನು ಹಿಡಿ ಒಲಂಪಿಕ್ ಆಟದ ಸಮಯದಲ್ಲಿ, ಅಭ್ಯಾಸ ಪಂದ್ಯಗಳಲ್ಲಿ, ಸಮಯ ಸಿಕ್ಕಾಗಲೆಲ್ಲ, ತನ್ನ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಿದ್ದ. ಕಟ್ಟ ಕಡೆಗೆ ಕೊನೆಯ ಪಂದ್ಯದಲ್ಲೂ ಆ ವಾಕ್ಯವನ್ನು ಹೇಳಿಕೊಳ್ಳುತ್ತಿದ್ದ, ಹಾಗೆಯೇ ಆತನು ಒಲಿಂಪಿಕ್ ನ ಕೊನೆಯ ಆಟದಲ್ಲಿ ಆತನೇ ಗೆದ್ದ, ಆತನು ಆ ವಾಕ್ಯವನ್ನು ತನ್ನ ಚಿನ್ನದ ಪದಕವನ್ನು ಸ್ವೀಕರಿಸುವವರೆಗೂ ಆ ವಾಕ್ಯವನ್ನು ಹೇಳಿಕೊಳ್ಳುತ್ತಿದ್ದ.



ಗೆಳೆಯರೇ! ನಾನು ಇಲ್ಲಿ ಹೇಳಲು ಬಯಸುವುದು ಇಷ್ಟೇ. ನಾವುಗಳು ಈ ಸಾಳುಗಳನ್ನು ಉಪಯೋಗಿಸಬಹುದು
"ನೀನೊಬ್ಬನೇ ನಿನ್ನ ಧೇಹ ಮತ್ತು ಮನಸ್ಸುನ್ನು ಅತ್ಯುತ್ತಮ ಪ್ರದರ್ಶನಕ್ಕೆ ಬಳಸಿಕೊಳ್ಳುವ ಸಮರ್ಥ್ಯ ನಿನಗೆ ಮಾತ್ರ ಇದೆ", ಈ ಸಾಲುಗಳು ನಮಗೂ ಉಪಯೋಗವಾಗಬಹುದು.

ನಮ್ಮ ಒಳಮನಸ್ಸಿನ ಜೊತೆ
ಹೆಚ್ಚು ಮಾತನಾಡಿದರೆ, ನಮ್ಮ ಸಾಧನೆ ಗುರಿಯನ್ನು ಸಿದ್ದಿಸುವ ಬಲ ನಮ್ಮಲ್ಲಿಯೇ ಹೆಚ್ಚಾಗುತ್ತದೆ, ಹಾಗೆಯೇ ನಮ್ಮ ಸಾಧನೆಯನ್ನು ಮುಟ್ಟುವುದರಲ್ಲಿ ಯಾವುದೇ ಸಂಶಯವಿರುವುದಿಲ್ಲ. 



********Positive self talk is more than a positive mental attitude********

 


Wednesday, July 6, 2011

ಗೆಳತಿಗೊಂದು ಪ್ರೇಮಪತ್ರ.

ಪ್ರೀತಿಯ  ನಲ್ಲೆ!

ಇತ್ತೀಚಿಗೆ ನಾನು ನಿನ್ನನ್ನು ತುಂಬಾ ನೆನಪು ಮಾಡಿಕೊಳ್ಳುತ್ತಿದ್ದೇನೆ, ನಾನು ನಿನ್ನನ್ನು ನೋಡದೆ ಇರುವ ದಿನವೇ ಇರಲಿಲ್ಲ. ಈ ೩ ವರ್ಷಗಳಲ್ಲಿ ನಿನ್ನ ನನ್ನ ಅನುಬಂದ ತುಂಬಾ ಅತ್ತಿರವಾಗಿತ್ತು, ನೀನು ನನ್ನ ಖಷ್ಟ ಸುಖಗಳನ್ನೆಲ್ಲ ಹಂಚಿಕೊಂಡಿದ್ದಿಯ. ಏಷ್ಟೋಬಾರಿ ನನ್ನ ಸಿಟ್ಟನ್ನು ನಿನ್ನ ಮೇಲೆ ತಿರಿಸಿಕೊಂಡಾಗ ನೀನು ಅದನ್ನ ತುಬಾ ತಾಳ್ಮೆಯಿಂದ ಸಯಿಸಿಕೊಂಡಿದ್ದಿಯ. ಕೆಲವೊಮ್ಮೆ ನೀನು ನನ್ನ ಮೇಲೆ ಮುನಿಸಿಕೊಂಡಿದ್ದರು, ಮತ್ತೆ ಬಂದು ಮುಗುಳ್ನಗುತ್ತ ಕುಳಿತುಕೊಳ್ಳುತ್ತಿದ್ದೆ. ಕೆಲಹೊಮ್ಮೆ ನಿನ್ನನ್ನು ನೋಡಿ ನಾನು ಮೈಮರೆತಿರುವುದು ಇದೆ!

ಎಷ್ಟೋ ಬಾರಿ ನಮ್ಮಿಬ್ಬರನ್ನು ನೋಡಿ, ಬೀದಿಯಲ್ಲಿ ಹೋಗುವ ಹುಡುಗರು, ಮುದುಕರು, ಹುಡುಗಿಯರು, ಮದುವೆಯಾಗಿರೋ ಹೆಂಗಸರು ಹೊಟ್ಟೆಹುರಿದು ಕೊಡಿದ್ದರೆ! ಕೆಲಹೊಮ್ಮೆ ನಾನೇ ನಿನ್ನನ್ನು ನೋಡಿ ಹೆಮ್ಮೆಯಿಂದ ನಿನ್ನನ್ನು ಹಿಡಿದುಕೊಂಡು ನಡೆದಿದ್ದು ಇದೆ.

ನಿನಗೆ ನೆನಪಿದಿಯಾ, ಒಮ್ಮೊಮ್ಮೆ ನೀನು ಕಾಯಿಲೆಯಿಂದ ಬಳಲುತ್ತಿರುವಾಗ ನಾನು ನಿದ್ದೆಗೆಟ್ಟು ನಿನ್ನಬಳಿ ದುಃಖದಿಂದ ಕುಳಿತುಕೊಂಡು ನೋಡಿಕೊಂಡಿದ್ದಕ್ಕೆ ನೀನು ನನ್ನನ್ನು ಹಿಡಿದು Thank you Dear, ಅಂತ ಹೇಳಿದಿಯ. ಒಮ್ಮೊಮ್ಮೆ ನಿನ್ನನ್ನು ಒಬ್ಬಂಟಿಯಾಗಿ ಬಿಟ್ಟು ಒಗಿದ್ದಕ್ಕೆ, ನೀನು ನನ್ನನ್ನು ಮುನಿಸಿನಿಂದ ನೋಡುತ್ತಿದ್ದೆ. ನಿನಗೆ ಗೊತ್ತಿದಿಯೋ ಇಲ್ಲವೋ, ದಿನದಲ್ಲಿ ಒಮ್ಮೆಯಾದರು ನಿನ್ನನ್ನು ನೋಡದೆ ಮಾತನಾಡಿಸದೆ ಇದ್ದರೆ ನನಗೆ ನಿದ್ದೆಯೇ ಬರುತ್ತಿರಲಿಲ್ಲ. ಆಗ ನಿನ್ನನ್ನು ನಿದ್ದೆಯಿಂದ ಹೆಬ್ಬಿಸಿ ಮಾತನಾಡಿಸಿದ್ದು  ಮತ್ತು ನೀನು ತುಂಬಾ ಬೇಜಾರಿನಿದ ವರ್ತನೆ ಮಾಡಿದ್ದು ಇದೆ.

ಏಕೋ ಸ್ವಲ್ಪ ದಿನಗಳಿಂದ ನೀನು ನನ್ನೊಂದಿಗೆ ಸರಿಯಾಗಿ ಮಾತಾಡುತ್ತಿಲ್ಲ ಮತ್ತು ಸರಿಯಾಗಿ ಮುಖ ಕೊಟ್ಟು ಮಾತಾಡಿಸುತ್ತಿಲ್ಲ, ಯಾಕೆಂದು ಕೇಳಿದರೆ ನೀನು ಸರಿಯಾಗಿ ಉತ್ತರ ಮಾಡುತ್ತಿಲ್ಲ. ನನಗೆ ಇತ್ತೀಚಿಗೆ ತಿಳಿಯಿತು ನೀನು ಯಾಕೆ ನನ್ನ ಬಳಿ ಸರಿಯಾಗಿ ಮಾತನಾಡಿಸುತ್ತಿಲ್ಲ ಎಂದು, ನಾನು ಬೇರೆಯವರೊಂದಿಗೆ ಹೆಚ್ಚಾಗಿ ಮಾತಾಡುತ್ತಿದ್ದೇನೆ, ಹೆಚ್ಚುಕಾಲ ಅವರೊಂದಿಗೆ ಕಾಲ ಹರಣ ಮಾಡುತ್ತಿದ್ದೇನೆ, ನಿನ್ನನ್ನು ಪೂರ್ತಿಯಾಗಿ ಮರೆತಿದ್ದೇನೆ ಎಂಬುದು ನಿನ್ನ ತಪ್ಪು ಕಲ್ಪನೆ. ನಿನಗೆ ಚನ್ನಾಗಿ ಗೊತ್ತು ೩ ವರ್ಷಗಳಲ್ಲಿ, ನಿನ್ನಷ್ಟು ನನ್ನನ್ನು ಅರ್ಥ ಮಾಡಿಕೊಂಡವರು ಬೇರೆಯಾರು ಇರಲಾರರು. ನಿನಗೆ ನನ್ನ ಗುಪ್ತ ವಿಚಾರಗಳೆಲ್ಲ ತಿಳಿದಿದೆ, ನನ್ನ ಬ್ಯಾಂಕ್ ಅಕೌಂಟ್ ಡಿಟೈಲ್ಸ್ ಸಹಾ ತಿಳಿದಿದೆ, ನನ್ನ ಹಣದ ವ್ಯವಹಾರಗಳೆಲ್ಲ ಚನ್ನಗಿ ತಿಳಿದಿದ್ದಿಯ, ನಾನು ನಿನ್ನನ್ನು ನಮ್ಬಿದೊಷ್ಟು ಬೇರೆಯಾರನ್ನು ನಂಬಿಲ್ಲ, ನಿನಗೆ ಗೊತ್ತಿದಿಯೋ ಇಲ್ಲವೋ ನನ್ನ ಅಪ್ಪ ಅಮ್ಮನಿಗೂ ನನ್ನ ಹಣದ ವ್ಯವಹಾರಗಳು ತಿಳಿದಿಲ್ಲ, ಆದರೆ ನಿನಗೆ ನಾನು ಹೇಳಿದ್ದೆ.

ಇಗ ನಾನು ನಿನಗೆ ಒಂದು ವಿಷಯ ಹೇಳಲೇ ಬೇಕು ಆದರೆ ನನಗೆ ತುಂಬಾ ಧುಖವಾಗುತ್ತೆ, ಆದರು ನಿನಗೆ ಹೇಳದೆ ವಿದಿಯಿಲ್ಲ, ನಿನ್ನನ್ನು ಸುಮ್ಮನೆ ಮನೆಯ ಲೋಕೆರ್ ನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ, ದಿನ ಕಳೆದ ಹಾಗೆ ನಿನ್ನನ್ನು ಕೊಳ್ಳುವವರು ಕಡಿಮೆಯಾಗುತ್ತಾರೆ ಮತ್ತು ನನ್ನ ಬಳಿ ನಿನ್ನ ಹಾಗೆ ಇರುವ ಮತ್ತೊಂದು ಇರುವಾಗ, ನಾನು ನಿನ್ನನ್ನು ನಾನು ಮಾರಲೇ ಬೇಕು. ಆದರೆ ನಿನ್ನನ್ನು ಮಾರಲು ತುಂಬಾ ದುಃಖ ಮನದಲ್ಲಿ ಕಾಡುತ್ತಿದೆ. 

ನನ್ನ ಪ್ರೀತಿಯ LAPTOP ಏ ನನ್ನನ್ನು ಕ್ಷಮಿಸು, ನೀನು ನನ್ನನ್ನು ತುಂಬಾ ಪ್ರೀತಿಸಿದ್ದೆ ಹಾಗು ನಾನು ನಿನ್ನನ್ನು ಪ್ರೀತಿಸಿದ್ದೆ, ಆದರೆ ನನ್ನ ಹೊಸ ಆಫೀಸ್ ನಿಂದ ಮತ್ತೊಂದು LAPTOP ಕೊಟ್ಟಿದ್ದಾರೆ, ಹಾಗಾಗಿ ನಿನ್ನನ್ನು ಹೆಚ್ಚು ದಿನಗಳ ಕಾಲ ನನ್ನ ಬಳಿ ಇಟ್ಟುಕೊಳ್ಳಲು ಸಾದ್ಯವಿಲ್ಲ. ದಿನ ಕಳೆದ ಹಾಗೆ ನಿನ್ನ VALUE ಕೂಡ ಕಡಿಮೆಯಾಗುತ್ತದೆ. ಆದ್ದರಿಂದ ನಿನ್ನನ್ನು ನಾನು ಮಾರುತ್ತಿದ್ದೇನೆ.

ಇಂತಿ:
ನಿನ್ನ ಚಿರಕಾಲ ನೆನಪಿನಲ್ಲಿ ಇಟ್ಟುಕೊಳ್ಳುವ ಪ್ರಿಯತಮ!

Friday, April 22, 2011

ಸ್ನೇಹವೂ? ಸ್ನೇಹದ ಮುಕವಾಡವೂ???????

ಎಲ್ಲಿಗೆ ನನ್ನ  ಪಯಣ ಯಾವ ಹಾದಿಗೂ
ಹೊಸ ಹಾದಿಯಲ್ಲಿ ಹೋಗಬಯಸುವ ನನ್ನ ಮನ
ಹಳೆಯ ಹಾದಿಗೆಳೆಯುತಿದೆ ವಿದಿಯ ಮನ

ಕಾಲು ಹೆಳೆಯಲು ಒಬ್ಬ ಸ್ನೇಹಿತ,
ಕೈ ಹಿಡಿಯಲು ಇಬ್ಬರು ಸ್ನೇಹಿತರು
ನಡುವೆ ನಲುಗುತಿದೆ  ನನ್ನ ಮನ

ಸ್ವಾರ್ಥಕ್ಕೆ ಸ್ನೇಹದ ಮುಕವಾಡ ಹಾಕಿ
ತನ್ನ ಆಸೆಗಳನ್ನು ತೀರಿಸಿಕೊಳ್ಳುವ ಸ್ನೇಹಕ್ಕೆ
ಆರ್ಥ ಹುಡುಕುತ್ತಿದೆ ನನ್ನ ಮನ

ನೈತಿಕ ಬೆಂಬಲ ಬಯಸುವ ನನ್ನ ಮನ
ಸ್ವಾರ್ಥ ಸ್ನೇಹದ ಮುಂದೆ ನಲುಗಿದೆ
ನಿಸ್ವಾರ್ಥ ಸ್ನೇಹದ ಜೊತೆ ಕೈಜೋಡಿಸುವ
ಆಸೆ ಮನದಲ್ಲಿ ಮೂಡುತಿದೆ

Monday, January 31, 2011

ಅವಕಾಶಗಳು ನಿಮ್ಮ ಮನೆಯ ಬಾಗಿಲು ಬಡಿದಾಗ ??????


ನಿಮ್ಮ ಪ್ರಯತ್ನ ನಿಲ್ಲಿಸಬೇಡಿ..........!

ಹಲೋ ಗೆಳೆಯರೇ,

ನಿಮಗೆ ಇವರು ತಿಳಿದಿರಬಹುದು MR.Colonel Harland Sanders!

ಸಂಡಿರ್ಸ್ ಅವರು ತಮ್ಮ ನಿವೃತ್ತಿಯೊಂದಿದ್ದು ೬೫ ರ ವಯಸ್ಸಿನಲ್ಲಿ, ಅವರಿಗೆ ಪ್ರತಿ ತಿಂಗಳಿಗೆ $೧೦೬ ನಿವೃತ್ತಿ ವೇತನ ಅವರ ಮನೆಗೆ ಚಕ್ ಬಂದು ಸೇರುತ್ತಿತ್ತು, ಆದರೆ ಅವರಿಗೆ ಆ ಹಣ ಯಾವುದಕ್ಕೂ ಸಾಕಾಗುತ್ತಿರಲಿಲ್ಲ, ಅವರು ಒಂದು ಒಳ್ಳೆಯ ಚಿಕನ್ ಅಡುಗೆ ಮಾಡುತ್ತಿದ್ದರು, ಆ ಊಟ ಅವರಿಗೆ ತುಂಬಾ ಖುಷಿ ಕೊಡುತ್ತಿತ್ತು, ಅದನ್ನು ತುಂಬಾ ಇಷ್ಟಪಡುತಿದ್ದರು. ಅವರಿಗೆ ತುಂಬಾ ಯೋಚನೆಯಾಗಿತ್ತು ಅವರ ನಿವೃತ್ತಿ ವೇತನ ಆತನ ಜೀವನ ನಡೆಸಲು ಯಾವುದಕ್ಕೂ ಸಾಕಾಗುತ್ತಿರಲಿಲ್ಲ.

ಒಂದು ದಿನ ಅವರು ನಿರ್ಧರಿಸಿದರು, ಅವರು ಮಾಡುವ ಚಿಕನ್ ಅಡುಗೆಯನ್ನು ಕೆಲವು ಹೋಟೆಲ್ ಗಳಿಗೆ ಮಾರಾಟಮಾಡುವುದು ಮತ್ತು ಹಣ ಸಂಪಾದಿಸುವುದಾಗಿ. ಹಾಗೆಯೇ ಅವರು ಒಂದು ದಿನ ಒಂದಿಷ್ಟು ಚಿಕನ್ ತಯಾರುಮಾಡಿ ಒಂದು ಹೋಟೆಲ್ ಗೆ ತೆಗೆದುಕೊಂಡು ಹೋದರು, ಆದರೆ ಅಲ್ಲಿ ಅವರಿಗೆ ನಿರಾಸೆಯಾಯಿತು, ಆ ಹೋಟೆಲ್ ಮಾಲೀಕ ಆ ಚಿಕನ್ ಅನ್ನು ನಿರಾಕರಿಸಿದ.

ಆದರೆ ಸಂಡಿರ್ಸ್ ಅವರು ಅವರ ಛಲವನ್ನೂ ಬಿಡಲಿಲ್ಲ.

ಎರಡನೇ ಬಾರಿ ಯತಾಪ್ರಕಾರ ಪ್ರಯತ್ನಿಸಿದರೂ.....


ಮೂರನೇ ಬಾರಿ .........


ನಾಲ್ಕನೇ ಬಾರಿ.........


ಆದರೆ ಅವರಿಗೆ ಆಗಿದ್ದು ನಿರಾಶೆ, ಅವರು ೧೦೦೮ ಬಾರಿ ನಿರಾಶೆ ಅನುಭವಿಸಿದರು, ಆದರೆ ಅವರು ತಮ್ಮ ಪ್ರಯತ್ನ ನಿಲ್ಲಿಸಲಿಲ್ಲ , ಅವರು ಎಲ್ಲ ಹೋಟೆಲ್ ಮಾಲಿಕರ ಬಳಿ ಹೋಗುವುದು ಮತ್ತು ಚಿಕನ್ ತೋರಿಸುವುದು ಮಾಡುತ್ತಿದ್ದರು, ಅಮೇರಿಕಾದ ಎಲ್ಲ ನಗರಗಳನ್ನು ಸುತ್ತುತ್ತ ಹೋಟೆಲ್ ಮಾಲಿಕರಿಗೆ ತಮ್ಮ ಚಿಕನ್ ಪರಿಚಯ ಮಾಡಿಸುವುದು ಬಿಡಲಿಲ್ಲ ಕೆಲವುಬಾರಿ ಅವರು ಹೋಟೆಲ್ ನಲ್ಲಿ ಮಲಗಲು ಹಣ ಇಲ್ಲದೆ ತಮ್ಮ ಕಾರಿನಲ್ಲೇ ಮಲಗುತ್ತಿದ್ದರು. 

ಅದೊಂದು ದಿನ ಅವರ ಪಾಲಿಗೆ ಸಣ್ಣ ಜಯ ಸಿಕ್ಕಿತು, ಅದು ೧೦೦೯ನೇ ಬಾರಿಯ ಪ್ರಯತ್ನವಾಗಿತ್ತು, ಒಂದು ಹೋಟೆಲ್ ನ ಮಾಲೀಕ ಅವರ ಚಿಕನ್ ನ್ನು ಕರೀದಿಮಾಡಲು ಮುಂದಾದರು, ಆ ಅವಕಾಶವನ್ನು ಸರಿಯಾಗಿ ಬಳಸಿಕೊಂಡರು.

ಇದಾದ ೨ ವರ್ಷಗಳ ಪ್ರತಿನಿತ್ಯದ ಮಾರಾಟದ ನಂತರ ಅವರಿಗೆ ೫ ಹೋಟೆಲ್ ಗಳೊಂದಿಗೆ ಒಪ್ಪಂದ ಮಾಡಿಕೊಂಡರು. ಸಂಡಿರ್ಸ್ ಅವರು ತಮ್ಮ ಪ್ರಯತ್ನದಲ್ಲಿ ಇನ್ನೂ ಹೆಚ್ಚು ಮುತುವರ್ಜಿವಯಿಸಿ ಉತ್ತಮ ಚಿಕನ್ ಗಳನ್ನು ತಯಾರು ಮಾಡಲು ಶುರುಮಾಡಿದರು.ಹಾಗೆಯೇ ಅವರು ಸ್ವಲ್ಪ ವರ್ಷಗಳಲ್ಲೇ ೬೦೦ ಹೋಟೆಲ್ ಗಳಲ್ಲಿ ದೇಶದಾದ್ಯಂತ ಒಪ್ಪಂದ ಮಾಡಿಕೊಂಡರು, ಅವರ ಚಿಕನ್ ಹೆಸರು ನಿಮಗೆ ಚನ್ನಾಗಿಯೇ ಗೊತ್ತಿದೆ ಅದರ ಹೆಸರು "ಕೆನ್ಚುಕಿ ಫ್ರೈಡ ಚಿಕನ್" ಸ್ವಲ್ಪ ವರ್ಷಗಳಲ್ಲೇ ಅವರು ಕೊಟ್ಯಾದಿಪತಿ ಆಗಿಬಿಟ್ಟರು.

ಗೆಳೆಯರೇ ನೀವು ಈ ಕಥೆಯಿಂದ ಒಂದು ತಿಳಿದುಕೊಳ್ಳಬಹುದು ಅದು "ಇನ್ನೂ ಸಮಯ ಮುಗಿದಿಲ್ಲ ಜಿವನವನ್ನು ಬಿಟ್ಟುಕೊಡುವುದು ಬೇಡ!!"

ಸಂಡಿರ್ಸ್ ಅವರು ಈ ಮುಂಚೆ ಅಲವಾರು ವ್ಯಾಪಾರ ಮಾಡಿದ್ದರು ಆದರೆ ಅವರಿಗೆ ಗೆಲುವು ಸಿಕ್ಕಿರಲಿಲ್ಲ  ಆದರೆ ಅವರ ೬೫ ನೇ ವಯಸ್ಸಿನಲ್ಲಿ ಈ ಚಿಕನ್ ಮಾರಾಟದ ಯೋಚನೆ ತುಂಬಾ ಯೆಶಸ್ಸು ಸಿಕ್ಕಿತು. ಅವರಿಗೆ ಒಂದು ತಿಳಿದಿತ್ತು ಪ್ರಯತ್ನ ಮಾಡುತ್ತಲೇ ಇದ್ದರೆ ಒಂದಲ್ಲ ಒಂದು ಬಾರಿ ನಾನು ಯೆಶಸ್ಸು ಪಡೆಯುತ್ತೇನೆ ಎಂಬುದು, ಆದ್ದರಿಂದಲೇ ಅವರಿಗೆ ಆ ವಯಸ್ಸಿನಲ್ಲಿ ಅದ್ವಿತಿಯಾ ಜಯ ಸಿಕ್ಕಿದ್ದು!

ಒಂದು ಮಾತು ಹೇಳಲು ಇಷ್ಟ ಪಡುತ್ತೇನೆ, "ಕೇಳಿರಿ! ಬೇಕಾದ್ದನ್ನು ಪಡೆಯಿರಿ, ಹುಡುಕಿರಿ! ನಿಮಗೆ ಬೇಕಾಗಿರುವುದನ್ನು ನೀವು  ನೋಡಬಹುದು, ಡೋರ್ ನ್ನು ತಟ್ಟಿ! ಡೋರ್ ತೆರೆಯಬಹುದು", ಆದರೆ ಸುಮ್ಮನೆ ಒಂದು ಬಾರಿ ಕೇಳಿದರೆ ಸಾಕಾಗುವುದಿಲ್ಲ ಮತ್ತೆ ಮತ್ತೆ ಪ್ರಯತ್ನ ಮಾಡುತ್ತಿರಬೇಕು, ಸುಮ್ಮನೆ ಹುಡುಕಬೇಡಿ ಸಿಗುವವರೆಗೂ ಹುಡುಕಿ, ಸುಮ್ಮನೆ ಡೋರ್ ತಟ್ಟಬಾರದು ಡೋರ್ ತೆರೆಯುವವರೆಗೂ ಡೋರ್ ತಟ್ಟಿರಿ, ಇನ್ನೂ ಸಮಯ ಮುಗಿದಿಲ್ಲ ನಿಮ್ಮ ಪ್ರಯತ್ನ ಮುಂದುವರಿಯುತ್ತಲೇ ಇರಲಿ, ಎಂದೂ ನಿಮ್ಮ ಪ್ರಯತ್ನ ನಿಲ್ಲಿಸಬೇಡಿ, ಒಂದಲ್ಲ ಒಂದು ದಿನ ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.


***************************ದಿ ಎಂಡ್ ***************************

ಮಾನವಿಯಥೆ ಎಂದೂ ಕೈಬಿದುವುದಿಲ್ಲ.............

ಹಲೋ ಗೆಳೆಯರೇ,

ಒಂದು ದಿನ ಒಬ್ಬ ಬಡ ಹುಡುಗ ತನ್ನ ಓದಿನ ಸಲುವಾಗಿ ಶಾಲೆಗೆ ಹಣಪಾವತಿಸಬೇಕಾಗಿತ್ತು, ಆ ಬಾಲಕನು ಕೆಲಸಮಾಡುತ್ತ ಹಣ ಸಂಪಾದಿಸುತ್ತಿದ್ದ ಹಾಗೆ ಶಾಲೆಗೇ ಹಣ ಪಾವತಿಮಾಡಿ ಕಷ್ಟಪಟ್ಟು ಓದುತ್ತಿದ್ದ. ಒಂದು ದಿನ ಆ ಬಾಲಕ ಕೆಲವು ದಿನ, ದಿನಬಳಕೆಗೆ ಬೇಕಾದ ವಸ್ತುಗಳನ್ನು ಮಾರಾಟ ಮಾಡುತ್ತಾ ಮನೆ ಮನೆಗೂ ಹೋಗಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಸ್ವಲ್ಪ ಹಣವನ್ನು ಸಂಪಾದಿಸಿದ, ಆ ಹಣ ಶಾಲೆಗೇ ಪಾವತಿ ಮಾಡಲು ಸ್ವಲ್ಪ ಕಡಿಮೆ ಇತ್ತು, ಆ ದಿನದ ವ್ಯಾಪಾರ ಮುಗಿಯಿತು ಆದರೆ ಆತನಿಗೆ ತುಂಬಾ ಹೊಟ್ಟೆ ಹಸಿದಿತ್ತು ಆದರೆ ಆತನು ಊಟ ಮಾಡುವಷ್ಟು ಹಣ ಆತನ ಬಳಿ ಇರಲಿಲ್ಲ, ರಾತ್ರಿಬೇರೆ ಆಗುತ್ತಿತ್ತು, ಏನು ಮಾಡುವುದು ಎಂಬುದು ತಿಳಿಯದೆ ಒಂದು ಮನೆಯ ಬಾಗಿಲನ್ನು ತಟ್ಟಿದನು, ಮನಸ್ಸಿನಲ್ಲೇ ದೇವರನ್ನು ನೆನೆಯುತ್ತ, ಆ ಮನೆಯಿಂದ ಒಂದು ವಯಸ್ಸಾದ ತಾಯಿ ಅಥವಾ ತಂದೆ ಬಂದು ಕದವನ್ನುತೆಗೆದರೆ ಸಾಕು ಎಂದು ದೇವರಲ್ಲಿ ಪ್ರಾರ್ಥಿಸುತ್ತ ಕದವನ್ನು ತಟ್ಟಿದ.

ಆಗ ಆ ಮನೆಯಿಂದ ಒಂದು ಸುಂದರ ಹುಡುಗಿ ಬಂದು ಬಾಗಿಲನ್ನು ತೆಗೆದಳು, ಆಕೆಯನ್ನು ನೋಡಿ ಆ ಹುಡುಗ, ಊಟ ಕೇಳಲು  ಆಗದೆ ಅನುಮಾನದಿಂದ, ಆಕೆಯನ್ನು ಒಂದು ಲೋಟ ನೀರನ್ನು ಕೇಳಿದ, ಆಗ ಆಕೆಯು ಆತನನ್ನು ಸರಿಯಾಗಿ ಗಮನಿಸಿ ಆತನು ತುಂಬಾ ಹಸಿವಿನಿಂದ ಇರುವುದನ್ನು ನೋಡಿ, ಒಂದು ದೊಡ್ಡ ಲೋಟದಲ್ಲಿ ಹಸುವಿನ ಹಾಲನ್ನು ತುಂಬಿ ತಂದು ಕೊಟ್ಟಳು. ಆಗ ಆ ಬಾಲಕ ಆಶ್ಚರ್ಯದಿಂದ ಅದನ್ನು ಸ್ವಿಕರಿಸಿದನು, ಆನಂತರ ಆ ಬಾಲಕ ದನ್ಯವಾದ ಏಳಿ ಸ್ವಲ್ಪ ಹಣ ಕೊಡಲು ಮುಂದಾದನು, ಆದರೆ ಆ ಬಾಲಕಿ ಆ ಹಣವನ್ನು ನಿರಾಕರಿಸಿದಳು, ಹಾಗೆ ಆಕೆ ಹೇಳಿದಳು ನನ್ನ ತಾಯಿ ಹೇಳಿದ್ದರೆ ಯಾರಬಳಿಯಲ್ಲೂ ಹಣ ಪಡಿಯಬಾರದು ಸಹಾಯ ಮಾಡಿದ್ದಕ್ಕೆ ಎಂದಳು, ಆಗ ಆ ಬಾಲಕ ತುಂಬಾ ಸಂತೋಷನಿದಿಂದ ಮನೆಗೆ ಹೋದ.


ಆ ಬಾಲಕನ ಹೆಸರು ಹಾರ್ವರ್ಡ್ ಕೆಲ್ಲಿ.

ಕೆಲವು ವರ್ಷಗಳ ನಂತರ ಆ ಹುಡುಗಿ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಳು ಆಗ ಆಕೆಯನ್ನು ಒಂದು ಆಸ್ಪತ್ರೆಗೆ ಸೇರಿದ್ದಳು, ಆ ಕಾಯಿಲೆಯು ತುಂಬಾ ದೊಡ್ದದಾಗಿದ್ದರಿಂದ ಒಬ್ಬ ಹಿರಿಯ ಆರೋಗ್ಯ ತಜ್ಞರನ್ನು ಕರೆಸಿ, ಆಕೆಯ ಕಾಯಿಲೆಯನ್ನು ಅದ್ಯಯನ ಮಾಡಲು ನಿರ್ದರಿಸಿದರು, ಹಾಗೆಯೇ ಒಬ್ಬ ಹಿರಿಯ ವೈಧ್ಯಕಿಯ ಬಂದರು ಅವರು ಬೇರೆಯಾರು ಆಗಿರಲಿಲ್ಲ, ಅವರು ಹಾರ್ವರ್ಡ್ ಕೆಲ್ಲಿ.

ಡಾ.ಕೆಲ್ಲಿ ಯವರು ಆಕೆಯನ್ನು ನೋಡಿ ಆಕೆಯನ್ನು ಗುರುತಿಸಿದರು, ಆಕೆಯ ಕಾಯಿಲೆಯ ಬಗ್ಗೆ ವಿಶೇಷ ಕಾಳಜಿ ಹೊಯಿಸಿ, ಆಕೆಯನ್ನು ಕಾಯಿಲೆಯಿಂದ ಹುಷಾರ್ ಮಾಡಲು ಸಾಕಷ್ಟು ಪ್ರಯತ್ನಿಸಿದರೂ ಕೊನೆಗೂ ಡಾ.ಕೆಲ್ಲಿ ಗೆದ್ದೆಬಿಟ್ಟರು ಆಗೆಯೇ ಸ್ವಲ್ಪ ದಿನಗಳಲ್ಲಿ ಆಕೆಯ ಕಾಯಿಲೆ ಹುಷಾರ ಹಾಗಿಬಿಟ್ಟಿತು, ಆಕೆಗೆ ಹೆಚ್ಚರ ಬಂದಾಗ ಆ ಆಸ್ಪತ್ತ್ರೆಯನ್ನೂ ನೋಡಿ ತುಂಬಾ ಭಯಬೀತಳಾಗಿ, ಆಕೆಯ ಕಾಯಿಲೆ ಹುಷಾರ್ ಆಗಿ, ಆ ಆಸ್ಪತ್ರೆಯ ಬಿಲ್ ಪಾವತಿ ಮಾಡಲು ತನ್ನ ಜೀವಮಾನವನ್ನೇ ಮುಡುಪಾಗಿ ಇಡಬೇಕಾಗುತ್ತದ್ದೆ ಎಂದು ಯೋಚಿಸುತ್ತ ದುಃಖಿಸುಟ್ಟಿದ್ದಳು.

ಡಾ.ಕೆಲ್ಲಿ ಯವರು ಆ ಆಸ್ಪತ್ರೆಯ ಆಡಳಿತ ಮಂಡಳಿಯವರಿಗೆ ಆಕೆಯ ಬಿಲ್ ಗಳನ್ನು ಅವರಿಗೆ ಕಳಿಸಲು ಹೇಳಿದರು, ಹಾಗೆಯೇ ಡಾ.ಕೆಲ್ಲಿ ಆ ಬಿಲ್ ಪಾವತಿಸಿದರು, ನಂತರ ಆಕೆಯ ಬಿಲ್ ಗಳನ್ನು ಆಕೆಗೆ ಕಳುಯಿಸಿಕೊಟ್ಟರು, ಆ ಬಿಲ್ ನ ಕೆಳಕೆ ಡಾ. ಹಾರ್ವರ್ಡ್ ಕೆಲ್ಲಿ ಯವರು ಬರೆದಿದ್ದರು " ಹಣ ಪಾವತಿಸಿದೆ ಒಂದು ಲೋಟದ ಹಾಲಿನಿಂದ" ಎಂದು ಬರೆದಿದ್ದರು.


ಆ  ಬಿಲ್ ನ್ನು ನೋಡಿ, ಡಾ.ಹಾರ್ವರ್ಡ ಕೆಲ್ಲಿ ಯವರು ಬರೆದಿರುವುದನ್ನು ನೋಡಿ ಆಕೆಯ ಕಣ್ಣುಗಳು ಕಣ್ಣಿರಿನಿಂದ ತುಂಬಿಕೊಂಡು ದೇವರನ್ನು ಅಭಿನಂದಿಸಿದಳು

ಗೆಳೆಯರೇ ಈ ಮೂಲಕ ನಿಮಗೆ ತಿಳಿಸುವುದೆನಿಂದರೆ, ನೀವು ಮಾಡುವ ಸಹಾಯಕ್ಕ ಯಾವ ನಿರೀಕ್ಷೆ ಇಲ್ಲದೆ ಸಹಾಯ ಮಾಡಿ, ಆ ಸಹಾಯ ನಿಮ್ಮನ್ನು ಒಂದಲ್ಲಾ ಒಂದು ರೀತಿಯಲ್ಲಿ ನಿಮ್ಮನ್ನು ಕೈ ಬಿಡುವುದಿಲ್ಲ.

*****************************ದಿ ಎಂಡ್ *******************************