Friday, October 29, 2010

ಓ ದೇವರೇ! ಒಂದೇ ಒಂದು ಅವಕಾಶ ಕೊಡು?



ಹಲೋ, ಗೆಳೆಯರೇ!

ಈ ಕತೆಯಲ್ಲಿ ಓದುವವನೆ "ನಾನು" ಎಂಬುದನ್ನು ತಿಳಿದುಕೊಳ್ಳಬೇಕಾಗಿ ನಿನಂನತಿ!

ಆದೊಂದು ಸುಂದರ ಬೆಳಗಿನ ಜಾವ, ನಾನು ಆಫೀಸ್ ಗೆ ಹೋಗಬೇಕು. ಆಗೆಯೇ ಕೈಯಲ್ಲಿ ನ್ಯೂಸ್ ಪೇಪರ್ ಹಿಡಿದು, ಓದಲು ಶುರುಮಾಡಿದೆ, ಅಲ್ಲಿಯೇ ಇದ್ದ ಶ್ಲೋಕಾಚರಣೆಯ ಕಾಲುಂ ನಲ್ಲಿ ನನ್ನ ಬಾವಚಿತ್ರ ನೋಡಿ! ಏನು ಇದು ನಾನೇನಾ? ಎಂದು ಕೂಗುತ್ತ, ದುಃಖಿಸುತ್ತಾ.
ಒಂದು ನಿಮಿಷ! ನೆನ್ನೆ ದಿನ ರಾತ್ರಿ ನಾನು ಏಷ್ಟು ಗಂಟೆಗೆ ನಾನು ಮಲಗುವ ಕೊಣೆಗೆ ಹೋದೆ ಸ್ವಲ್ಪ ನೆನೆಸಿಕೊಳ್ಳೋಣ, ಆ ಸಮಯದಲ್ಲಿ ಏನಾಯಿತು? ಆ ಸಮಯದಲ್ಲಿ ನನ್ನ ಹೆದೆಯಲ್ಲಿ ತುಂಬಾ ನೋವು ಬಂತು, ಹಾಗೆಯೇ ನಾಗು ಹಾಸಿಗೆಯಮೇಲೆ ನಾನು ಕುಸಿದುಬಿದ್ದೆ, ಆದಾದಮೇಲೆ ನನಗೇನು ನೆನಪಿಗೆ ಬರುತ್ತಿಲ್ಲ! ಭಹೊಷ್ಯ  ನನಗೆ ತುಂಬಾ ನಿದ್ದೆಬಂದಿರಬಹುದು!
ಓ ಇದು ಸುಂದರ ಬೆಳಿಗ್ಗೆ, ಈಗಾಗಲೇ ಸಮಯ ೧೦ ಗಂಟೆ, ಎಲ್ಲಿ ನನ್ನ ಕಾಫ್ಫಿ? ನಾನು ಇವತ್ತು ಆಫೀಸಿಗೆ ಲೇಟ್ಆಗಿ ಒಗುತ್ತೇನೆ, ನನ್ನ ಬಾಸ್ ಗೆ ನನ್ನನ್ನು ಬೈಯಲು ಒಂದು ಅವಕಾಶ ಸಿಗುತ್ತದೆ.

ಎಲ್ಲಿ ಎಲ್ಲರೂ? ಯಾರು ಕಾಣಿಸುತ್ತಿಲವಲ್ಲ ಮನೆಯಲ್ಲಿ!

ಭಹೊಷ್ಯ ನನ್ನ ರೂಂಹೊರಗಡೆ ಜನಗಳು ನಿಂತಿರಬಹುದು, ತುಂಬ ಸದ್ದು ಕೇಳಿಸುತ್ತಿದೆ! ನೋಡೋಣಹೊರಗೆ ಹೋಗಿ.

ತುಂಬ ಜನರು ನೆರದಿದ್ದರೆ, ಕೆಲವರು ಹಳುತ್ತಿದ್ದರೆ, ಆದರೆ ಯಾಕೆ ಕೆಲವರು ದುಃಖಿಸುತ್ತಿದ್ದಾರೆ?

ಏನಿದು ನಾನು ರೂಂ ನ ಹಾಸಿಗೆಮೇಲೆ ಮಲಗಿದ್ದೇನೆ? ಆದರೆ ನಾನು ರೂ ಹೊರಗೆ ಇದ್ದೇನೆ! ಯಾರು ನನ್ನನ್ನುಗಮನಿಸುತ್ತಿಲ್ಲ. ಎಲ್ಲರೂ ನಾನು ಹಾಸಿಗೆಮೇಲೆ ಮಲಗಿರುವುದನ್ನು ನೋಡುತ್ತಿದ್ದರೆ.

ನಾನು ವಾಪಾಸ್ ನನ್ನ ರೂಂ ಬೆಡ್ ಬಳಿ ಹೋದೆ, ಒಂದು ವೇಳೆ ನಾನು ಸತ್ತುಹೊಗಿದ್ದೆನೆಯೇ?

ಎಲ್ಲಿ ನನ್ನ ಹೆಂಡತಿ? ಮಕ್ಕಳು? ತಂದೆ ತಾಯಿ? ನನ್ನ ಸ್ನೇಹಿತರು?

ಅವರೆಲ್ಲ ಬೇರೆ ರೂಂ ನಲ್ಲಿ ಕುಳಿತು ಹಳುತ್ತಿದ್ದರೆ, ತುಂಬಾ ದುಃಖಿಸುತ್ತಿದ್ದರೆ, ಅವರೆಲ್ಲ ಒಬ್ಬರಿಗೊಬ್ಬರು ಸಮಾದಾನ ಮಾಡಿಕೊಳ್ಳುತ್ತಿದ್ದಾರೆ.

ನನ್ನ ಹೆಂಡತಿ ತುಂಬಾ ಹಳುತ್ತಿದ್ದಾಳೆ, ಅವಳು ನೋಡಲು ತುಂಬಾ ದುಃಖಿಸುತ್ತಿದ್ದಾಳೆ, ನನ್ನ ಚಿಕ್ಕ ಮಗುವಿಗೆ ಏನು ತಿಳಿಯುತ್ತಿಲ್ಲ, ಸುಮ್ಮನೆ ಅವನ ತಾಯಿ ಹಳುತ್ತಿದ್ದಾಳೆ ಎಂದು ಆತನು ಹಳುತ್ತಿದ್ದೇನೆ.

ನಾನು ಹೇಗೆ ಹೋಗಲಿ? ನನ್ನ ಮುದ್ದಿನ ಮಗ, ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ, ತುಂಬಾ ಚನ್ನಾಗಿ ನೋಡಿಕೊಳ್ಳುತ್ತಿದ್ದೆ! ಅವನಿಗೆ ಹೇಳದೆ ಹೇಗೆ ನಾನು ಹೋಗಲಿ?

ನಾನು ಹೇಗೆ ಹೋಗಲಿ? ನನ್ನ ಪ್ರೀತಿಯ ಸುಂದರ ಹೆಂಡತಿ, ಅವಳು ತುಂಬಾ ಚನ್ನಾಗಿ ನನ್ನನ್ನು ನೋಡಿಕೊಳ್ಳುತ್ತಿದ್ದಳು, ಅವಳಹಾಗೆ  ನನ್ನನ್ನು ಪ್ರೀತಿಸುವವರು ಈ ಪ್ರಪಂಚದಲ್ಲಿಯೇ ಯಾರು ಇಲ್ಲ! ನಾನು ಹೇಗೆ ಹೋಗಲಿ ಅವಳಿಗೆ ತಿಳಿಸದೇ?

ನಾನು ಹೇಗೆ ಹೋಗಲಿ? ನನ್ನ ತಂದೆ ತಾಯಿಯರಿಗೆ ತಿಳಿಸದೇ, ಅವರಿಂದಲೇ ನಾನು ಈ ಭೂಮಿಗೆ ಬಂದಿದ್ದು. ಅವರಿಗೆ ತಿಳಿಸದೇ ನಾನು ಹೇಗೆ ಹೋಗಲಿ?

ನಾನು ಹೇಗೆ ಹೋಗಲಿ?ನನ್ನ ಸ್ನೇಹಿತರನ್ನು ಬಿಟ್ಟು, ಅವರಿಗೆ ತಿಳಿಸದೇ? ನಾನು ನನ್ನ ಜೀವನದಲ್ಲಿ ತುಂಬಾ ತಪ್ಪುಗಳನ್ನೂ ಮಾಡಿರಬಹುದು, ಆ ಸಮಯದಲ್ಲಿಯೂ ಕೂಡ ನನ್ನ ಸ್ನೇಹಿತರು ನನ್ನ ಜೊತೆಯಲ್ಲಿಯೇ ಇದ್ದರು, ಅದಕ್ಕೆ ನಾನು ದನ್ಯವಾದಗಳನ್ನು ಹೇಳುತ್ತೇನೆ! ಮತ್ತು ನಾನು ಕ್ಷಮಿಸಿ ಎಂದು ಕೇಳಿಕೊಳ್ಳುತ್ತೇನೆ, ನಾನು ಅವರೊಂದಿಗೆ ಇಲ್ಲ, ಅವರಿಗೆ ನಾನು ಬೇಕಾದ ಈ ಸಮಯದಲ್ಲಿ ನಾನು ಅವರೊಂದಿಗೆ ಇಲ್ಲ!

ನಾನು ಒಬ್ಬನನ್ನು ನೋಡಬಹುದು ಆತನು ಕಣ್ಣಿರನ್ನು ಹೊರಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ, ಓ ಆತನು ನನ್ನ ಪ್ರಾಣಸ್ನೇಹಿತ! ಆದರೆ ಒಂದು ಚಿಕ್ಕ ಮನಸ್ಥಪಕ್ಕಾಗಿ ನಾವಿಬ್ಬರು ಒಂದಾಲೇಇಲ್ಲ, ನಾವಿಬ್ಬರು ನಮ್ಮ ಇಗೋ ಬಿಟ್ಟು ಒಂದಾಗಲು ಪ್ರಯತ್ನಿಸಲಿಲ್ಲ,

ನಾನು ಆತನ ಬಳಿ ಹೋದೆ, ಆತನ ಮೇಲೆ ನನ್ನ ಕೈ ಇಟ್ಟು, ಗೆಳೆಯ ನನ್ನನ್ನು ಕ್ಷೆಮಿಸು, ನಾನು ಮಾಡಿದ್ದಕ್ಕೆಲ್ಲ ನನ್ನನ್ನು ಕ್ಷಮಿಸು, ನಾವು ಇಗಳು ತುಂಬಾ ಒಳ್ಳೆಯ ಸ್ನೇಹಿತರೆ! ದಯಮಾಡಿ ನನ್ನನ್ನು ಕ್ಷಮಿಸು. ಎಂದು ಕೇಳಿಕೊಂಡೆ. ಆದರೆ ಅವನಿಂದ ಏನು ರೆಸ್ಪಾನ್ಸ್ ಇರಲಿಲ್ಲ, ಏನು ನರಕ ಇದು? ಆತನು ಇನ್ನೂ ತನ್ನ ಸಿಟ್ಟನ್ನು ಬಿಡಲಿಲ್ಲ! ಆದರೆ ನಾನು ಇತರದ ಮನುಷ್ಯನ ಬಗ್ಗೆ ಜಾಸ್ತಿ ಯೋಚನೆ ಮಾಡುವುದಿಲ್ಲ, ಆದರೆ ನಾನು ಅವನಿಗೆ ಕಾಣಿಸುತ್ತಿದ್ದೆನಾ?  ಅವನು ನನ್ನ ಕೈ ಯನ್ನೂ ನೋಡಲೇ ಇಲ್ಲ, ನಾನು ಆತನ ಹೆಗಲಮೇಲೆ ಇಟ್ಟಿದ್ದು.

ಹೈಯೋ ನಾನೇನಾದರು ಸತ್ತಿದ್ದೆನಾ?  ನಾನು ನನ್ನ ಬಳಿ ಬಂದು ಕುಳಿತುಕೊಂಡೆ, ನನಗು ತುಂಬಾ ಹಳುಬರುತ್ತಿದೆ.

ಓ ದೇವರೇ! ದಯಮಾಡಿ ನನಗೆ ಕೆಲವು ದಿನಗಳನ್ನೂ ಕೊಡು! ನಾನು ನನ್ನ ಹೆಂಡತಿ, ತಂದೆ ತಾಯಿ, ನನ್ನ ಸ್ನೇಹಿತರಿಗೆ ತಿಳಿಸಬೇಕು ನಾನು ಅವರನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದನ್ನು!

ಹರೇ! ನನ್ನ ಹೆಂಡತಿ ನನ್ನ ರೂಂ ಒಳಗೆ ಬರುತ್ತಿದ್ದಾಳೆ, ಅವಳು ನೋಡಲು ತುಂಬಾ ಸುಂದರವಾಗಿದ್ದಾಳೆ, ಆದರೆ ನಾನು ಏನು ಹೇಳಿದರು ಅವಳಿಗೆ ಕೇಳುತ್ತಿಲ್ಲ, ನಾನು ಯಾವತ್ತು ಅವಳಿಗೆ ಆ ಮಾತುಗಳನ್ನೂ ಹೆಳಿರಲಿಲ್ಲ.

ಓ! ದೇವರೇ ನಾನು ನಿನ್ನನ್ನು ದಯಮಾಡಿ ಕೇಳಿಕೊಳ್ಳುತ್ತೇನೆ, ನನಗೆ ಕೆಲವೇ ಕೆಲವು ಗಂಟೆಗಳ ಕಾಲ ಅವಕಾಶ ಕೊಡು, ಎಂದು ನಾನು ಹತ್ತೇ. ಒಂದೆವಂದು ಅವಕಾಶ ಕೊಡು ನಾನು ನನ್ನ ಮಗನ್ನು ಒಂದು ಬಾರಿ ಹಪ್ಪಿ ಮುದ್ದಾಡಬೇಕು, ನಾನು ನನ್ನ ತಾಯಿಯನ್ನು ನಗಿಸಬೇಕು, ನನ್ನ ತಂದೆಗೆ ತಿಳಿಸಬೇಕು ಅವರ ಮಗನಾಗಿದ್ದುಕ್ಕೆ ನಾನು ತುಂಬ ಅದೃಷ್ಟ ಮಾಡಿದ್ದೆ ಎಂಬುದನ್ನು. ನಾನು ನನ್ನ ಸ್ನೇಹಿತರ ಬಳಿ ಕ್ಷೆಮೆಯಾಚಿಸಬೇಕು ಮಾಡಿದ್ದಕ್ಕೆಲ್ಲ. ಮತ್ತೆ ನಾನು ಹಳಲು ಪ್ರಸಂಬಿಸಿದೆ, ಕೂಗಾಡಿದೆ,

ಓ ದೇವರೇ ಒಂದೆವಂದು ಅವಕಾಶ ಕೊಡು, ದಯಮಾಡಿ ಒಂದೆವಂದು ಅವಕಾಶ ಕೊಡು ಎಂದು ಕೂಗಾಡಿದೆ.

"ಯಾರೋ ನನ್ನನ್ನು ತಟ್ಟಿ ಹೆಬ್ಬಿಸಿದಂತೆ ಆಯಿತು! ನನ್ನ ಹೆಂಡತಿ ನನ್ನನ್ನು ಹೆಬ್ಬಿಸಿ, ನೀವು ಕುಗಾಡುತ್ತಿದ್ದಿರಿ ಎಂದಳು!


ಆಗ ನನಗೆ! ಓ ಇದು ಕೇವಲ ಕನಸು! ನಾನು ನಿದ್ದೆಯಲ್ಲಿದ್ದೆ!

ನನ್ನಹೆಂಡತಿ ನನ್ನ ಪಕ್ಕದಲ್ಲಿಯೇ ಇದ್ದಳು, ಅವಳು ಕೇಳಿಸಿಕೊಂಡಿರಬಹುದು. ಈ ಸಮಯ ಅತ್ಯಂತ ಸಂತೋಷದ ಸಮಯವಾಯಿತು, ಆಗ ನಾನು ನನ್ನ ಹೆಂಡತಿಯನ್ನೂ ಅಪ್ಪಿಕೊಂಡೆ, ಸಂತೋಷದಿಂದ ಕಣ್ಣಿರಿಟ್ಟೆ ಆಮೇಲೆ ನಾನು ಅವಳಿಗೆ ಹೇಳಿದೆ ನೀನು ತುಂಬಾ ಸುಂದರವಾಗಿದ್ದಿಯ, ಈ ಪ್ರಪಂಚದಲ್ಲಿಯೇ ನಿನ್ನೋಷ್ಟೋ ಸುಂದರವಾಗಿರುವುದು ಯಾವುದು ಇಲ್ಲ , ನಾನು ನಿನ್ನನ್ನು ನಿಜವಾಗಿಯೂ ತುಂಬಾ ಪ್ರೀತಿಸುತ್ತೇನೆ ಎಂದೆ. ಆಗ ಅವಳ ಮುಖದಮೇಲೆ ಸಂತೋಷವನ್ನು ನೋಡಿದೆ, ಅವಳ ಕಣ್ಣಿನಲ್ಲಿ ನೀರನ್ನು ನೋಡಿದೆ. ನನಗೆ ತುಂಬಾ ಸಂತೋಷವಾಯಿತು.

"ದನ್ಯವಾದಗಳು ದೇವರೇ! ನನಗೆ ಮತ್ತೊಂದು ಅವಕಾಶ ಕೊಟ್ಟಿದ್ದಕ್ಕೆ!!!!"

ಗೆಳೆಯರೇ  ಈ ಮೂಲಕ ನಿಮಗೆ ತಿಳಿಸುವುದೇನೆಂದರೆ, ಇನ್ನೂ ತಡವಾಗಿಲ್ಲ, ಮರೆತುಬಿಡಿ ನಿಮ್ಮ ಮನಸ್ತಪಗಳನ್ನು, ಮರೆತುಬಿಡಿ ಏನೇ ಆಗಿರುವುದನ್ನು, ಕೇವಲ ನಿಮ್ಮ ಪ್ರಿತಿಯನ್ನು ತೋರಿಸಿ, ಸ್ನೇಹದಿಂದಿರಿ, ನೀವಿರುವ ಪರಿಸರವನ್ನು ಯಾವಾಗಲು ಸಂತೋಷವಾಗಿ ಇಡಲು ಪ್ರಯತ್ನಿಸಿ.

********************************ದಿ ಎಂಡ್ ******************************

Sunday, October 24, 2010

ನಿಮ್ಮ ಕೆಲಸವನ್ನೂ ಒಂದುಬಾರಿ ಪರೀಕ್ಷೆ ಮಾಡಿ!

ಹಲೋ,ಗೆಳೆಯರೇ!

ಈ  ಕಥೆ ಒಂದು ಸೆಲ್ಫ್ ಅಪ್ಪ್ರಯಾಸಯಾಲ್ ಸ್ಟೋರಿ!


ಒಂದು ದಿನ ಒಬ್ಬ ಬಾಲಕ ಒಂದು ಅಂಗಡಿಗೆ ಹೋದ ಅಲ್ಲಿದ್ದ ಕ್ಯಾಶ್ ಕೌಂಟರ್ ಬಳಿ ಇದ್ದ ಫೋನ್ ತೆಗೆದುಕೊಂಡು ಒಂದು ಕಾಲ್ ಮಾಡಲು ಪ್ರಯತ್ನಿಸಿದ, ಅಲ್ಲಿಯೇ ಇದ್ದ ಅಂಗಡಿಯ ಮಾಲೀಕ ಅವನನ್ನೇ ಗಮನಿಸುತ್ತಿದ್ದ. ಎಲ್ಲಿಗೋ ಆ ಬಾಲಕ ಕಾಲ್ ಮಾಡಿದ, ಆಕಡೆಂದ ಫೋನ್ ರೆಸಿವೆ ಮಾಡಿದರು, ಆ ಬಾಲಕ ಮಾತನಾಡಲು ಪ್ರಾರಂಬಿಸಿದ.

ಬಾಲಕ : ಮೇಡಮ್ ನನಗೆ ಒಂದು ಕೆಲಸ ಬೇಕಾಗಿದೆ, ನನಗೆ ಗರ್ಡನಿಗ್ ತುಂಬಾ ಚನ್ನಾಗಿ ಬರುತ್ತದ್ದೆ ನಿಮ್ಮ ಮನೆಯಲ್ಲಿ ಇರುವ ಗಾರ್ಡನ್ ನಲ್ಲಿರುವ ಸಸ್ಯಗಳನ್ನು ಚನ್ನಾಗಿ ನೋಡಿಕೊಳ್ಳುತ್ತೇನೆ, ನನಗೆ ಕೆಲಸ ನನ್ನ ಜೀವನಕ್ಕೆ ತುಂಬಾ ಅಗತ್ಯವಿದೆ. ಎಂದು ತುಂಬಾ ವಿನಂಬ್ರವಾಗಿ ಕೇಳಿದ.

ಆಕಡೆಯಿಂದ ಮೇಡಮ್ : ನೋಡಪ್ಪ ನನ್ನ ಮನೆಯಲ್ಲಿ ಈಗಾಗಲೇ ಒಬ್ಬ ಕೆಲಸಕ್ಕೆ ಇದ್ದಾನೆ ಅವನು ನಮ್ಮ ಎಲ್ಲ ಗರ್ಡನಿಗ್ ಕೆಲಸವನ್ನೂ ತುಂಬಾ ಚನ್ನಾಗಿಯೇ ಮಾಡುತ್ತಿದ್ದಾನೆ.

ಬಾಲಕ: ಮೇಡಮ್ ನಾನು ಅರ್ದ ಸಂಬಳಕ್ಕೆ ಕೆಲಸ ಮಾಡುತ್ತೇನೆ, ನೀವು ಈಗ ಇರುವ ಕೆಲಸದವನಿಗೆ ಕೊಡುವ ಸಬಳದಲ್ಲಿ! ಎಂದ.
ಆಕಡೆಯಿಂದ  ಮೇಡಮ್: ಕ್ಷೆಮಿಸಿ ನಾನು ತುಂಬಾ ಸಂತ್ರುಪ್ತಳಗಿದ್ದೇನೆ, ಅವನು ತುಂಬಾ ಚನ್ನಾಗಿ ಕೆಲಸ ನಿಬಾಯಿಸುತ್ತಿದ್ದಾನೆ! ಎಂದರು.
ಬಾಲಕ : ಮೇಡಮ್ ನಾನು ನಿಮ್ಮ ಸಸ್ಯಗಳನ್ನು ಕತ್ಥರಿಸುವುದೂ ಅಲ್ಲದೆ ನಾನು ನಿಮ್ಮ ಮನೆಯ ನೆಲವನ್ನೂ ಸಾರಿಸುತ್ತೇನೆ, ಬಟ್ಟೆಗಳನ್ನೂ ಹೊಗೆಯುತ್ತೇನೆ ಎಂದ!
ಆಕಡೆಯಿಂದ  ಮೇಡಮ್: ನೋ ಥ್ಯಾಂಕ್ಸ್! ಎಂದರು,


ಆಗ ಬಾಲಕ ತುಂಬಾ ಸಂತೋಷದಿಂದಮುಗುಳ್ನಗುತ್ತ ಫೋನ್ ಇಟ್ಟ! ಅಲ್ಲಿಯೇ ಇದ್ದ ಅಂಗಡಿಯ ಮಾಲಿಕ ಆ ಬಾಲಕನನ್ನು ಗಮನಿಸುತ್ತಾ ಆತನ ಮಾತುಗಳನ್ನೂ ಕೇಳಿಸಿಕೊಂಡಿದ್ದ.  ಆಗ ಅಂಗಡಿ ಮಾಲೀಕ ಆ ಬಾಲಕನ ಬಳಿಗೆ ಬಂದು!


ಅಂಗಡಿ ಮಾಲೀಕ : ಬಾಲಕ ನಿನ್ನದಿಟ್ಟ ತನ ನನಗೆ ತುಂಬಾ ಇಷ್ಟವಾಯಿತು, ಅವರು ನಿನಗೆ ಕೆಲಸ ಕೊಡುವುದಿಲ್ಲವೆಂದರು ನೀನು ಸ್ವಲ್ಪವೂ ಬೇಜಾರು ಪಡದೆ ನಗುತ್ತಿದ್ದಿಯ, ನಾನು ನಿನಗೆ ನನ್ನ ಅಂಗಡಿಯಲ್ಲಿ ಕೆಲಸ ಕೊಡುತ್ತೇನೆ ಎಂದ!
ಬಾಲಕ: ನಿಮ್ಮ ಸಹಾಯಕ್ಕಾಗಿ ನನ್ನ ಧನ್ಯವಾದಗಳು, ಆದರೆ ನನಗೆ ನಿಮ್ಮ ಕೆಲಸ ಬೇಡ ಎಂದ!
ಅಂಗಡಿ ಮಾಲೀಕ: ಆದರೆ ನೀನು ತುಂಬಾ ಕಷ್ಟ ಪಡುತ್ತಿದ್ದಿಯ ಒಂದೇ ಒಂದು ಕೆಲಸಕ್ಕಾಗಿ? ಎಂದ.
ಬಾಲಕ: ಇಲ್ಲ ಮಾಲಿಕರೇ ನಾನು ಕೇವಲ ನನ್ನ ಕೆಲಸವನ್ನೂ ಪರೀಕ್ಷೆ ಮಾಡಿದೆ, ನಾನು ಹೇಗೆ ಕೆಲಸ ಮಾಡುತ್ತಿದ್ದೇನೆ, ನಾನು ಮಾಡುವ ಕೆಲಸ ನನ್ನ ಮಾಲಿಕರಿಗೆ ತೃಪ್ತಿ ತಂದಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುತ್ತಿದ್ದೆ, ನಾನು ಆ ಮೇಡಮ್ ಮನೆಯಲ್ಲಿ ಸಸ್ಯಗಳನ್ನು ಕತ್ತರಿಸುವ ಕೆಲಸ ಮಾಡುತ್ತಿದ್ದೇನೆ ಎಂದ!
      
    ಗೆಳೆಯರೇಈ ಮೂಲಕ ನಾನು ನಿಮಗೆಲ್ಲ ತಿಳಿಸುವುದೇನೆಂದರೆ, ನಾವು ಯಾರನ್ನು ತೃಪ್ತಿ ಪಡಿಸಲು ಸಾದ್ಯವಿಲ್ಲ, ಅಕಸ್ಮಾತ್ ತೃಪ್ತಿ ಪಡಿಸಿದ್ದರು ಅವರು ನಮಗೆ ತ್ಹೊರಿಸಿಕೊಲ್ಲುವುದಿಲ್ಲ, ಆದರೆ ನಾವು ನಮ್ಮ ದುಡುಕಿನ ನಿರ್ಧರವನ್ನು ತೆಗೆದುಕೊಳ್ಳುವುದಕ್ಕೆ ಮುನ್ನ ನಮ್ಮ ಶ್ರಮವನ್ನು ಮಾಲೀಕರು ಹೇಗೆ ತಿಳಿದಿದ್ದರೆ ಎಂಬುದನ್ನು ನಾವು ತಿಳಿದುಕೊಳ್ಳುವುದು ಅನಿವಾರ್ಯವಾದ ಸಂಗತಿ.



**********************************ದಿ ಎಂಡ್ *****************************************

Sunday, October 10, 2010

ಕೇವಲ ಒಂದೇ ಒಂದು ರೂಂ ಗಾಗಿ,,,,,?????

ಹಲೋ! ಸ್ನೇಹಿತರೆ,
ಈ ಒಂದು ಕಥೆ ಒಬ್ಬಶಿಕ್ಷಕನ ನೈಜ ಕಥೆಯಾಗಿದೆ! ಈ ಬೆಂಗಳೊರಿನಲ್ಲಿ ಒಬ್ಬ ಶಿಕ್ಷಕನಿದ್ದ ಅವನು ತುಂಬ ಕಷ್ಟಪಟ್ಟು ಶಿಕ್ಷಕನಾಗಿದ್ದ ಆತನ ಜಿವನವನ್ನು ಮಕ್ಕಳಿಗೆ ಒಳ್ಳೆಯ ಶಿಕ್ಷಣನೀಡುವುದಕ್ಕೆ ಮುಡುಪಾಗಿಟ್ಟಿದ್ದ. ನಿಮಗೆ ತಿಳಿದಿರುವಂತೆ ಶಿಕ್ಷಕರು ನಮ್ಮ ಜೀವನ ವನ್ನು ಸರಿಯಾದ ದಾರಿಯಲ್ಲಿ ಹೋಗುವ ಹಾಗೆ ಶಿಕ್ಷಣ ಕೊಡುವುವವರು ಆದ್ದರಿಂದಲೇ ನಾವುಗಳು ಅವರಿಗೆ ತುಂಬ ಗೌರವವನ್ನೂ ನೀಡುತ್ತೇವೆ, "ಹರ ಮುನಿದರೆ ಗುರು ಕಾಯುವ" ಎಂಬ ಮಾತು ಅಷ್ಟೇ ಸತ್ಯ, ಈ ತರಹದ ಒಬ್ಬ ಶಿಕ್ಷಕನಿಗೆ ಒಬ್ಬ ಮಗನಿದ್ದ ಅವರ ಕುಟುಂಬ ತುಂಬ ಚಿಕ್ಕದು ಅವರ ಕುಟುಂಬದಲ್ಲಿ ಅವನ ಹೆಂಡತಿ ಮತ್ತು ಒಬ್ಬ ಮಗ ಒಂದು ಚಿಕ್ಕ ಸಂಸಾರ, ನಿಮಗೆ ತಿಳಿದಿರುವಂತೆ ಒಬ್ಬ ಪ್ರಾರ್ಥಮಿಕ ಶಾಲೆಯ ಶಿಕ್ಷಕನಿಗೆ ಆಗಿನ ತಿಂಗಳ ವರಮಾನ ತುಂಬ ಕಡಿಮೆ ಇತ್ತು ಆತನ ತಿಂಗಳ ವರಮಾನದೆಂದಲೇ ಆತನ ಸಂಸಾರವನ್ನು ತುಗಿಸಬೇಕಿತ್ತು, ಆತನ ಗುರಿ ಎರಡೇ ಎರಡು ಆಗಿತ್ತು! ಮೊದಲನೆಯದು ಆತನ ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದು ಹಾಗು ಎರಡನೆಯದು ಒಂದು ಚಿಕ್ಕ ಸ್ವಂತ ಮನೆಯನ್ನೂ ಕಟ್ಟುವುದು! ಆತನ ಜೀವನದ ಗುರಿಯಾಗಿತ್ತು. ಈ ಶಿಕ್ಷಕ ತುಂಬ ಕಷ್ಟಪಟ್ಟು ಮಗನನ್ನು ಒಂದು ಒಳ್ಳೆಯ ವಿಧ್ಯಾವಂತ ನನ್ನಾಗಿ  ಮಾಡಲು ತುಂಬ ಪ್ರಯತ್ನ ಪಟ್ಟ, ಆತ ಮತ್ತು ಆತ ಹೆಂಡತಿ ಹಸಿವಿನಿಂದಿದ್ದರು ಆತನ ಮಗನಿಗೆ ಒಂದು ದಿನವು ಹಸಿವಿನ ಪರಿಚಯ ಮಾಡಿಸಿರಲಿಲ್ಲ, ತುಂಬ ಕಷ್ಟ ಪಟ್ಟು ಆತನ ತಿಂಗಳ ವರಮಾನದಲ್ಲಿ ಸ್ವಲ್ಪ ಸ್ವಲ್ಪ ಹುಳಿಸಿ ಒಂದು ಚಿಕ್ಕ ಸೈಟ್ಅನ್ನು ಕೊಂಡುಕೊಂಡ ಆಗಆತನ ಜೀವನದ ಆಸೆಗಳೆಲ್ಲ ನೆರವೇರುವ ಕನಸು ಹೆಚ್ಚು ಹೆಚ್ಚು ಕಾಣ ತೊಡಗಿದ.

ಅದೆರಿತಿಯಾಗಿ  ಆತನ ಮಗನು ಚೆನ್ನಗಿಹೆ ಓದುತಿದ್ದ, ದಿನಗಳು ಹುರುಲಿದವು ವರ್ಷಗಳು ಕಳೆದವು ಮಗನು ಕಾಲೇಜು ಮೆಟ್ಟಿಲು ಹೇರಿದ ಹಾಗೆಯೇ ಈ ಶಿಕ್ಷಕ ಮಗನಿಗೆ ಬೇಕಾದವುಗಳನ್ನೆಲ್ಲ ಹೋದಗಿಸಿದ, ಒಂದುವೇಳೆ ಆತನಿಗಿಲ್ಲದಿದ್ದರು  ಆತನ ಮಗನಿಗೆ ಯಾವುದನ್ನೂ ಕಡಿಮೆ ಮಾಡಲಿಲ್ಲ, ಈ ಸಮಯದಲ್ಲೇ ಆತ ಒಂದು ಪುಟ್ಟ ಮನೆಯನ್ನೂ ಕಟ್ಟಿದ, ಆ ಮನೆಯಲ್ಲಿ ಒಂದು ಹಡುಗೆ ಕೋಣೆ, ಒಂದು ಅಟ್ಟಚ್ ಬಾತ್ ರೂಂ, ಒಂದು ನಡುಮನೆ ಹಾಗು ಒಂದು ಮಲಗುವ ಕೋಣೆ, ಅದೊಂದು ಕಿಕ್ಕವಾದ ಚೊಕ್ಕವ ಮನೆಯನ್ನೂ ಆತ ಕಟ್ಟಿಸಿದ, ಆತನ ಮನೆಯಲ್ಲಿನ ಒಂದು ಕೋಣೆಯನ್ನು ಆತನ ಮಗನಿಗಾಗಿ ಕೊಟ್ಟ ಆ ಕೋಣೆಯಲ್ಲಿ ಮಗನಿಗೆ ಓದಲು ಬೇಕಾದ ವಸ್ತುಗಳ  ವೆವಸ್ಥೆ ಗಳೆಲ್ಲವನ್ನೂ ಹೋದಗಿಸಿಕೊಟ್ಟ.

ಆತನ ಮಗನು ಕೂಡ ತಂದೆಗೆ ಓದಿನಲ್ಲಿ ಎಂದು ನಿರಾಷೆ ಮೂಡಿಸಲಿಲ್ಲ, ಮಗನು ಎಲ್ಲ ಸಬ್ಜೆಕ್ಟ್ ಗಳಲ್ಲೂ ರಾಂಕ್ ತೆಗೆದುಕೊಳ್ಳುತ್ತಿದ್ದ, ತಂದೆ ಕನಸುಕಂಡತ್ತೆಯೇ ಆತನು ಒಂದು ದಿನ ಇಂಜಿನಿಯರಿಂಗ್ ನಲ್ಲಿ ರಾಂಕ್ ಅಂಕಗಳನ್ನು ಪಡೆಯುವಮುಲಕ ಪದವಿದರನಾದ. ಆ ಸಮಯದಲ್ಲಿ ತಂದೆಯ ಖುಷಿ ಮತ್ತು ಸಂತಸ ಆಗಸಕ್ಕೆ ಮೂಟ್ಟಿತ್ತು, ತಂದೆಯ ಎರಡನೇಯ ಕನಸೂ ನನಸಾಗಿತ್ತು! ನಿಮಗೆ ಈ ಕಥೆಯನ್ನು ಓದುತ್ತ, ಈ ಕಥೆಯಲ್ಲಿ ಏನು ಇದೆ ಹನ್ನಿಸಬಹುದು, ಈ ಕಥೆಗೆ ಟ್ವಿಸ್ಟ್ ಸಿಗುವುದೇ ಇಲ್ಲಿಂದ, ನಾನು ಯಾಕೆ ಇದೆಲ್ಲ ಹೇಳಿದೆ ಅಂದರೆ ಮಕ್ಕಳಿಗೆ ತಂದೆ ತಾಯಿಯರ ಮನಸ್ಸು, ಪ್ರೀತಿ, ಅವರ ತ್ಯಾಗ ಕೆಲ ಮಕ್ಕಳಿಗೆ ಅರ್ಥವೇ ಹಾಗುವುದಿಲ್ಲ, ಇಲ್ಲಿಯವರೆಗೂ ತಂದೆ ಪಟ್ಟ ಕಷ್ಟ ಏನು ಹನ್ನಿಸಿರಲಿಲ್ಲ, ಆತನ ಕಷ್ಟಗಳನ್ನೆಲ್ಲ ಪ್ರೀತಿಸುತ್ತ, ಎಲ್ಲ ಕಷ್ಟಗಳನ್ನೆಲ್ಲ ಎದರಿಸುತ್ತ, ತನ್ನ ಮಕ್ಕಳ ಆಸೆಗಳನ್ನು ಪುರೈಸುತ್ತ ಬಂದಿದ್ದ.

      ಅದೊಂದು ದಿನ ಆತನ ಮಗನಿಗೆ ವಿದೇಶದಿಂದ ಜಾಬ್ ಆಫರ್ ಬಂತು, ಮಗನು ಸಂತಸದಿಂದ ತಂದೆ ತಾಯಿಯರಿಗೆ ತಿಳಿಸಿದ ಆದರೆ ಅವರಿಗೆ ಇಷ್ಟವಿರಲಿಲ್ಲ, ಅವರಿಗೆ ತಮ್ಮ ಮಗ ತಮ್ಮ ಬಳಿಯಲ್ಲಿಯೇ ಇದ್ದು ಕೆಸಮಾಡಿಕೊಂಡು ನೆಮ್ಮದಿಯ ಜೀವನ ನಡೆಸುವಂಥಹ ಆಸೆಯಾಗಿತ್ತು. ಆದರೆ ಮಗನು ತುಂಬ ಹಠಮಾಡಿ ತಂದೆ ತಾಯಿಯರನ್ನು ಒಪ್ಪಿಸಿದನು, ಕೊನೆಗೆ ವಿಧಿ ಇಲ್ಲದೆ ತಂದೆ ತಾಯಿಯರು ಮನಸಿಲ್ಲದ ಮನಸಿನಲ್ಲಿ ಒಪ್ಪಿಕೊಂಡರು, ಆತನು ವಿದೇಶಕ್ಕೆ ತೆರಳಿದ ಆತನ ಮನಸ್ಸಿನಲ್ಲಿ ಖುಷಿ ಹೇಳತೀರದಾಗಿತ್ತು, ಆತನು ವಿದೇಶಕ್ಕೆ ಹೋಗಿ ಸ್ವಲ್ಪ ದಿನಗಳು ಕಳೆದ ನಂತರ ಆತ ಪ್ರತಿದಿನವು ತಂದೆ ತಾಯಿಯರಿಗೆ ಫೋನ್ಮಾಡಿ ಮಾತನಾಡಿಸುತ್ತಿದ್ದ, ಇಗೆಹೆ ದಿನಗಳು ತಿಂಗಳುಗಳು ಹುರುಲಿದವು, ಪ್ರತಿ ದಿನ ಮಾಡುತ್ತಿದ್ದ ಫೋನ್ ಕಾಲ್, ವಾರಕ್ಕೆ ಒಂದು ಫೋನ್ ಕಾಲ್ ಆಗಿ ಪರಿವರ್ಥನೆಗೊಂಡವು, ಹಾಗೆಯೇ ಕೆಲದಿನಗಳ ನಂತರ ತಿಂಗಳಿಗೆ ಒಂಮ್ಮೆ ಕಾಲ್ ಆಗಿ ಪರಿವರ್ತನೆಗೊಂಡಿತು, ಇಲ್ಲಿ ತಂದೆ ತಾಯಿಯರು ಆತನ ಯೋಗಕ್ಷೇಮದ ಫೋನ್ ಕಾಲ್ ಗಳನ್ನೇ ನಿರಿಕ್ಷಿಸುತ್ತ ಇರುತ್ತಿದ್ದರು, ಕೆಲ ಕಾಲಗಳ ನಂತರ ಮಗನ ಫೋನ್ ಕಾಲ್ ಗಳು ೬ ತಿಂಗಳಿಗೊಮ್ಮೆ ವರ್ಷಕ್ಕೆ ಒಮ್ಮೆ ಬರಲು ಪ್ರರಂಬಿಸಿದವು,ಇಲ್ಲಿ ತಂದೆ ತಾಯಿಗಳು ಮಗನ ಎದುರುನೋಡುತ್ತಲೇ ತಮ್ಮ ಜೀವನ ಸಾಗಿಸುತ್ತಿದ್ದರು, ಹೀಗೆ ದಿನಗಳು ಕಳೆದಹಾಗೆ ಅವರಿಗೆ ಆನಾಥ ಪ್ರೆಜ್ಞೆ ಬೆಳೆಯುತ್ತ ಹೋಯಿತು. ಅಲ್ಲಿ ಮಗ ತನ್ನ ಕೆಲಸದಲ್ಲಿ ಬ್ಯುಸಿ ಆಗಿಬಿಟ್ಟ ಹೆದ್ದರು ದುಡಿಮೆ ಮಲಗಿದರು ದುಡಿಮೆ, ಅವನಿಗೆ ಅವನ ಅಪ್ಪ ಅಮ್ಮನ ಬಗ್ಗೆ ಯೋಚನೆ ಮಾಡುವುದನ್ನೇ ಬಿಟ್ಟುಬಿಟ್ಟ, ಒಂದು ದಿನ ಮಗ ಅವನಿದ್ದ ಜಾಗದಲ್ಲಿಯೇ ಒಂದು ಹುಡುಗಿಯನ್ನು ನೋಡಿ ಮದುವೆಯೂದ ಆದರೆ ಅವನ ತಂದೆ ತಾಯಿಯರಿಗೆ ತಿಳಿಸಲಿಲ್ಲ, ಕೇವಲ ಫೋನಿನಲ್ಲಿ  ಕಾಲ್ ಮಾಡಿ ತಿಳಿಸಿದ, ಆಗ ತಂದೆ ತಾಯಿಯರಿಗೆ ಮಗನ ಮೇಲಿದ್ದ ಸಂಪೂರ್ಣ ನಂಬಿಕೆ ಹೊಯಿತು, ಪೂರ್ತಿ ಆನಾಥಪ್ರಜ್ಞೆ ಬಂತು.

   ಇಗೆ ಅಲ್ಲಿ ಮಗ ದುಡಿಮೆಯಲ್ಲಿ ಸಂಪೂರ್ಣ ಮಗ್ನನಾದ, ಆತನು ಜೀವನದಲ್ಲಿಯೇ ಹಣ ಒಂದೇ ಮುಖ್ಯ ಎಂಬ ಬಾವನೆ ಮನದಲ್ಲಿಯೇ ಬೆಳೆಸಿಕೊಂಡ. ಆತನಿಗೂ ಒಂದು ಮಗುಹಾಯಿತು ಮಗು ಹುಟ್ಟಿದ್ದನ್ನು  ಒಂದು ಫೋನ್ ಕಾಲ್ ಮೂಲಕ ತಂದೆ ತಾಯಿರರಿಗೆ ತಿಳಿಸಿದ, ಆ ಕ್ಷಣ ತಂದೆ ತಾಯಿಯರಿಗೆ ಮೊಮ್ಮಗನನ್ನು ನೋಡುವ ಆಸೆ ತುಂಬ ಬೆಳೆದಿತ್ತು, ಆದರೆ ಅವರಿಗೆ ನೋಡುವ ಅವಕಾಶವೇ ಇರಲಿಲ್ಲ, ಅವರು ಮನಸ್ಸಿನಲ್ಲಿಯೇ ದುಃಖಿಸುತ್ತ, ಕಾಲ ಕಳೆಯುತ್ತ ಜೀವನ ನಡೆಸುತ್ತಿದ್ದರು. ಇಗೆಯೇ ಕೆಲ ವರ್ಷಗಳ ನಂತರ ತಾಯಿ ತೀರಿಕೊಂಡ ವಿಷಯ ಮಗನಿಗೆ ತಿಲಿಯುತ್ತದೆ ಆದರೆ ಮಗನು ತಾಯಿಯ ಅಂತಿಮ ದರ್ಶನಕ್ಕೂ ಬರಲು ಹಾಗುವುದಿಲ್ಲ, ಆತನು ಕೇವಲ ಕೆಲಸದ ಕಡೆಯಲ್ಲಿಯೇ ಬ್ಯುಸಿ ಆಗಿಬಿಟ್ಟ, ಈ ಆಗಥವನ್ನು ತಡೆಯಲಾರದೆ ತಂದೆಯು ತೀರಿಕೊಂಡ ಹಾಗಲೂ ಮಗ ನೋಡಲು ಬರಲು ಸಾಧ್ಯವಾಗಲಿಲ್ಲ.ಮನಸ್ಸಿನಲ್ಲಿಯೇ ದುಃಖ ಪಟ್ಟು ತಂದೆ ತಾಯಿಯರಿಗೆಶಾಂತಿ ಕೋರಿ ಆತನು ತನ್ನ ಕೆಲಸದಲ್ಲಿ ಮಗ್ನನಾದ, ಹಿಗೆಯೇ ಕೆಲ ವರ್ಷಗಳು ಕಳೆದವು, ಆತನು ಕೂಡಿಟ್ಟಿದ್ದ ಹಣವನ್ನೆಲ್ಲ ಕೆಲವು ಕಂಪನಿ ಗಳಲ್ಲಿ ಇನ್ವೆಸ್ಟ್ ಮಾಡಿದ, ಆತನು ಹಣ ಹಾಕಿ ಕೆಲವು ವರ್ಷಗಳು ಕಳೆದವು, ಆತನಿಗೂ ವಯಸ್ಸು ೪೦ ಮುಗಿಯುತ್ತ ಬಂದಿತು, ಮಗನು ಬೆಳೆದು ದೊಡ್ಡವನಾಗಿದ್ದ, ಆದರೆ ಆತನ ಮಗ ಆತನ ಮಾತುಗಳನ್ನೂ ಕೇಳುತ್ತಿರಲಿಲ್ಲ ಆ ಸಮಯದಲ್ಲಿ ಅವನಿಗೂ ಆತನ ತಂದೆ ನೆನಪಾಗುತ್ತಿತ್ತು.

    ಕೆಲವು ವರ್ಷಗಳ ನಂತರ ಆತನಿಗೆ ಎಲ್ಲೊ ಏನೋ ಕೊರಗು ಶುರುವಾಗಿತ್ತು, ಅದು ಆತನು ತನ್ನ ಸಂಸಾರವನ್ನು ಕರೆದುಕೊಂಡು ನನ್ನ ತಾಯಿನಾಡಿಗೆ ವಾಪಾಸ್ ಹಾಗುವ ಯೋಚನೆ ಬಲವಾಗಿ ಮುಡತೊಡಗಿತ್ತು, ಆದರೆ ಆತನ ಹೆಂಡತಿ ಮತ್ತು ಮಗನು ಆತನ ಜೊತೆಯಲ್ಲಿ ಬರಲು ನಿರಾಕರಿಸಿದರು, ಆತನಿಗೆ ಆಗ  ಆನಾಥ ಪ್ರಜ್ಞೆ ಶುರುವಾಯಿತು, ಮಗನು ಆತನ ಮಾತುಗಳನ್ನೂ ಕೇಳುತ್ತಿರಲಿಲ್ಲ, ಹೆಂಡತಿ ಆತನ ಮೇಲಿನ ವ್ಯಮೊಹವನ್ನು ಕಳೆದುಕೊಂಡಳು, ಹೆಂಡತಿಯು ಸ್ವಲ್ಪ ಸ್ವಲ್ಪ ದ್ವೇಷಿಸ ತೊಡಗಿದಳು, ಆ ಸಮಯದಲ್ಲಿ ಆತನಿಗೆ ಸಂಪೂರ್ಣ ಆನಾಥ ಪ್ರಜ್ಞೆ ಹುಟ್ಟಿ ಜೀವನ ಜಿಗುಪ್ಸೆಯಾಗತೊಡಗಿತು , ಅತ್ತ ಮಗನು ಮಾತು ಕೆಳುವುದಿಲ್ಲ, ಇತ್ತ ಹೆಂಡತಿಯೂ ಇಷ್ಟ ಪಡುವುದಿಲ್ಲ, ಆತನಿಗೆ ತುಂಬಾ ಒಂಟಿತನ ಕಾಡುತ್ತಿತ್ತು, ಕೆಲ ತಿಂಗಳು ಕಾದು, ಆತನು ಇನ್ವೆಸ್ಟ್ ಮಾಡಿದ್ದ ಹಣವನ್ನೂ ವಾಪಸ್ಸು ತಿಗಿಯಲು ನಿರ್ದಾರ ಮಾಡಿದ, ಆದರೆ ಅಲ್ಲಿ ಅವನಿಗೆ ಒಂದು ಶಾಕ್ ಕಾದಿತ್ತು, ಆತ ಇನ್ವೆಸ್ಟ್ ಮಾಡಿದ್ದ ಕಂಪನಿ ಅಲ್ಲಿ ಮುಚ್ಚಿಹೋಗಿತ್ತು ಆ ಕಂಪನಿ ಮೋಸಮಾಡಿ ಪರಾರಿಯಾಗಿತ್ತು, ಇಷ್ಟೆಲ್ಲಾ ಆದಮೇಲೆ, ಅವನಿಗೆ ಜೀವನದಲ್ಲಿಯೇ ಸೋಲಿನಿಂದ ಮುಳಿಗಿಹೋದ ಹಾಗೆ ಬಾಸವಗಿತ್ತು. ಅವನು ಅಲ್ಪ ಸ್ವಲ್ಪ ಸೆವಿಂಗ್ ಮಾಡಿದ್ದ ಹಣವನ್ನೆಲ್ಲ ತೆಗೆದುಕೊಂಡು ಒಂದು ದಿನ ಆತ ಬೆಂಗಳೂರಿಗೆ ವಾಪಾಸ್ ಆದ, ಆದರೆ ಆತನಿಗೆ ಒಂದು ವಿಷಯ ತಿಳಿದಿರಲಿಲ್ಲ, ಅಲ್ಲಿ ಅಪ್ಪ ಅಮ್ಮ ಮತ್ತು ಮನೆ ಯಾವುದು ಇರಲಿಲ್ಲ, ಆತನ ಯೋಗಕ್ಷೇಮ ವಿಚರಿಸುವವರು ಇರಲಿಲ್ಲ.

    ಎಷ್ಟೆಲ್ಲಾ ಆದಮೇಲೆ ಆತ ಬೆಂಗಳೂರಿನಲ್ಲಿ ಒಂದುಮನೆಯನ್ನೂ ಕೊಂಡು ಕೊಳ್ಳಲು ನಿರ್ದಾರ ಮಾಡಿದ, ಆದರೆ ಒಂದು ವಿಷರ ಅವನಿಗೆ ತಿಳಿದಿರಲಿಲ್ಲ, ಆತ ಬೆಂಗಳೂರಿನಲ್ಲಿ ಇದ್ದಾಗ ಎಲ್ಲ ವಸ್ತುಗಳ ಬೆಲೆಯೂ ತುಂಬ ಕಡಿಮೆ ಇತ್ತು, ಆದರೆ ಈಗ ಎಲ್ಲ ವಸ್ತುಗಳ ಬೆಲೆಗಳು ಗಗನಕ್ಕೆ ಏರಿದ್ದವು, ಆತನು ಕನಸಿನಲ್ಲೂ ಉಹಿಸಿರದಷ್ಟು ಎತ್ತರಕ್ಕೆ ಹೋಗಿದ್ದವು, ೧೫-೧೬ ವರ್ಷಗಳ ಹಿಂದೆ ನೋಡಿದ್ದ ಬೆಂಗಳೂರು ಈಗ ಆಗಿರಲಿಲ್ಲ, ಹೇಗೂ ಆತನು ಕೂಡಿಟ್ಟಿದ್ದ ಹಣದಲ್ಲಿ ಒಂದು ಮನೆಯನ್ನೂ ಕೊಂಡುಕೊಳ್ಳಲು ನಿರ್ದಾರ ಮಾಡಿದ, ಆತನು ಒಂದು ಮನೆಯನ್ನೂ ಕೊಂಡುಕೊಂಡ, ನೀವು ಯೋಚಿಸಿರಬಹುದು, ಅದರಲ್ಲಿ ಏನಿದೆ ವಿಶೇಷ? ನಿಮಗೆ ಗೊತ್ತೇ? ಆತ ಎಷ್ಟು ದೊಡ್ಡ ಮನೆಯನ್ನೂ ಕೊಂಡುಕೊಂಡ ಎಂಬುದು? ಅದು ಕೇವಲ ೨ ಬೆಡ್ ರೂ ಹೌಸ್! ಆತನ ತಂದೆ ಒಂದು ಬೆಡ್ ರೂಂ ಇರುವ ಮನೆಯನ್ನೂ ಕಟ್ಟಿದ್ದರು, ಆದರೆ ತಂದೆ ಎಲ್ಲ ಸುಖ ಸಂತೋಶಗಳನ್ನು ಪರಸ್ಪರ ಹಂಚುತ್ತ ಸಂತೋಷದಿಂದ ಜೀವನ ನಡೆಸುತ್ತಿದ್ದರು, ಆದರೆ ಈತನು ಎರಡು ಬೆಡ್ ರೂಂ ಮನೆಯನ್ನೂ ಕೊಂಡುಕೊಂಡ, ಆದರೆ ಎಲ್ಲವನ್ನೂ ಕಳೆದುಕೊಂಡಿದ್ದ.

ಈತ ಇಷ್ಟೆಲ್ಲಾ ಮಾಡಿದ್ದು, ಗಳಿಸಿದ್ದು ಕಳೆದುಕೊಂಡಿದ್ದು ಕೇವಲ ಒಂದು ರೂಂ ಹೆಚ್ಚು ಇರುವ ಮನೆಯನ್ನೂ ಕೊಂಡುಕೊಳ್ಳುವ ಆದೃಷ್ಟಕ್ಕಾಗಿ! ಗೆಳೆಯರೇ ಈ ಮೂಲಕ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ನೀವು ಕನಸು ಕಾಣುವುದು ತಪ್ಪಲ್ಲ ಆದರೆ ನಿಮ್ಮ ಕನಸು ನನಸಾಗಿಸುವ ಹಾತುರದಿಂದ, ಇರುವ ಸಂತೋಷವನ್ನೂ ದೂರ ಮಾಡಬೇಡಿ, ಇರುವ ಸಂಬಂದಗಳನ್ನು ದೂರ ಮಾಡಿಕೊಳ್ಳಬೇಡಿ! ಮಾಡಿ ಈ ತರಹದ ಊದಾರಣೆಯಾಗಿ, ಆನಾಥರಾಗಿ ಜೀವನ ನಡೆಸಬೇಡಿ!


***************************ದಿ ಎಂಡ್ *********************************