Friday, October 29, 2010

ಓ ದೇವರೇ! ಒಂದೇ ಒಂದು ಅವಕಾಶ ಕೊಡು?



ಹಲೋ, ಗೆಳೆಯರೇ!

ಈ ಕತೆಯಲ್ಲಿ ಓದುವವನೆ "ನಾನು" ಎಂಬುದನ್ನು ತಿಳಿದುಕೊಳ್ಳಬೇಕಾಗಿ ನಿನಂನತಿ!

ಆದೊಂದು ಸುಂದರ ಬೆಳಗಿನ ಜಾವ, ನಾನು ಆಫೀಸ್ ಗೆ ಹೋಗಬೇಕು. ಆಗೆಯೇ ಕೈಯಲ್ಲಿ ನ್ಯೂಸ್ ಪೇಪರ್ ಹಿಡಿದು, ಓದಲು ಶುರುಮಾಡಿದೆ, ಅಲ್ಲಿಯೇ ಇದ್ದ ಶ್ಲೋಕಾಚರಣೆಯ ಕಾಲುಂ ನಲ್ಲಿ ನನ್ನ ಬಾವಚಿತ್ರ ನೋಡಿ! ಏನು ಇದು ನಾನೇನಾ? ಎಂದು ಕೂಗುತ್ತ, ದುಃಖಿಸುತ್ತಾ.
ಒಂದು ನಿಮಿಷ! ನೆನ್ನೆ ದಿನ ರಾತ್ರಿ ನಾನು ಏಷ್ಟು ಗಂಟೆಗೆ ನಾನು ಮಲಗುವ ಕೊಣೆಗೆ ಹೋದೆ ಸ್ವಲ್ಪ ನೆನೆಸಿಕೊಳ್ಳೋಣ, ಆ ಸಮಯದಲ್ಲಿ ಏನಾಯಿತು? ಆ ಸಮಯದಲ್ಲಿ ನನ್ನ ಹೆದೆಯಲ್ಲಿ ತುಂಬಾ ನೋವು ಬಂತು, ಹಾಗೆಯೇ ನಾಗು ಹಾಸಿಗೆಯಮೇಲೆ ನಾನು ಕುಸಿದುಬಿದ್ದೆ, ಆದಾದಮೇಲೆ ನನಗೇನು ನೆನಪಿಗೆ ಬರುತ್ತಿಲ್ಲ! ಭಹೊಷ್ಯ  ನನಗೆ ತುಂಬಾ ನಿದ್ದೆಬಂದಿರಬಹುದು!
ಓ ಇದು ಸುಂದರ ಬೆಳಿಗ್ಗೆ, ಈಗಾಗಲೇ ಸಮಯ ೧೦ ಗಂಟೆ, ಎಲ್ಲಿ ನನ್ನ ಕಾಫ್ಫಿ? ನಾನು ಇವತ್ತು ಆಫೀಸಿಗೆ ಲೇಟ್ಆಗಿ ಒಗುತ್ತೇನೆ, ನನ್ನ ಬಾಸ್ ಗೆ ನನ್ನನ್ನು ಬೈಯಲು ಒಂದು ಅವಕಾಶ ಸಿಗುತ್ತದೆ.

ಎಲ್ಲಿ ಎಲ್ಲರೂ? ಯಾರು ಕಾಣಿಸುತ್ತಿಲವಲ್ಲ ಮನೆಯಲ್ಲಿ!

ಭಹೊಷ್ಯ ನನ್ನ ರೂಂಹೊರಗಡೆ ಜನಗಳು ನಿಂತಿರಬಹುದು, ತುಂಬ ಸದ್ದು ಕೇಳಿಸುತ್ತಿದೆ! ನೋಡೋಣಹೊರಗೆ ಹೋಗಿ.

ತುಂಬ ಜನರು ನೆರದಿದ್ದರೆ, ಕೆಲವರು ಹಳುತ್ತಿದ್ದರೆ, ಆದರೆ ಯಾಕೆ ಕೆಲವರು ದುಃಖಿಸುತ್ತಿದ್ದಾರೆ?

ಏನಿದು ನಾನು ರೂಂ ನ ಹಾಸಿಗೆಮೇಲೆ ಮಲಗಿದ್ದೇನೆ? ಆದರೆ ನಾನು ರೂ ಹೊರಗೆ ಇದ್ದೇನೆ! ಯಾರು ನನ್ನನ್ನುಗಮನಿಸುತ್ತಿಲ್ಲ. ಎಲ್ಲರೂ ನಾನು ಹಾಸಿಗೆಮೇಲೆ ಮಲಗಿರುವುದನ್ನು ನೋಡುತ್ತಿದ್ದರೆ.

ನಾನು ವಾಪಾಸ್ ನನ್ನ ರೂಂ ಬೆಡ್ ಬಳಿ ಹೋದೆ, ಒಂದು ವೇಳೆ ನಾನು ಸತ್ತುಹೊಗಿದ್ದೆನೆಯೇ?

ಎಲ್ಲಿ ನನ್ನ ಹೆಂಡತಿ? ಮಕ್ಕಳು? ತಂದೆ ತಾಯಿ? ನನ್ನ ಸ್ನೇಹಿತರು?

ಅವರೆಲ್ಲ ಬೇರೆ ರೂಂ ನಲ್ಲಿ ಕುಳಿತು ಹಳುತ್ತಿದ್ದರೆ, ತುಂಬಾ ದುಃಖಿಸುತ್ತಿದ್ದರೆ, ಅವರೆಲ್ಲ ಒಬ್ಬರಿಗೊಬ್ಬರು ಸಮಾದಾನ ಮಾಡಿಕೊಳ್ಳುತ್ತಿದ್ದಾರೆ.

ನನ್ನ ಹೆಂಡತಿ ತುಂಬಾ ಹಳುತ್ತಿದ್ದಾಳೆ, ಅವಳು ನೋಡಲು ತುಂಬಾ ದುಃಖಿಸುತ್ತಿದ್ದಾಳೆ, ನನ್ನ ಚಿಕ್ಕ ಮಗುವಿಗೆ ಏನು ತಿಳಿಯುತ್ತಿಲ್ಲ, ಸುಮ್ಮನೆ ಅವನ ತಾಯಿ ಹಳುತ್ತಿದ್ದಾಳೆ ಎಂದು ಆತನು ಹಳುತ್ತಿದ್ದೇನೆ.

ನಾನು ಹೇಗೆ ಹೋಗಲಿ? ನನ್ನ ಮುದ್ದಿನ ಮಗ, ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ, ತುಂಬಾ ಚನ್ನಾಗಿ ನೋಡಿಕೊಳ್ಳುತ್ತಿದ್ದೆ! ಅವನಿಗೆ ಹೇಳದೆ ಹೇಗೆ ನಾನು ಹೋಗಲಿ?

ನಾನು ಹೇಗೆ ಹೋಗಲಿ? ನನ್ನ ಪ್ರೀತಿಯ ಸುಂದರ ಹೆಂಡತಿ, ಅವಳು ತುಂಬಾ ಚನ್ನಾಗಿ ನನ್ನನ್ನು ನೋಡಿಕೊಳ್ಳುತ್ತಿದ್ದಳು, ಅವಳಹಾಗೆ  ನನ್ನನ್ನು ಪ್ರೀತಿಸುವವರು ಈ ಪ್ರಪಂಚದಲ್ಲಿಯೇ ಯಾರು ಇಲ್ಲ! ನಾನು ಹೇಗೆ ಹೋಗಲಿ ಅವಳಿಗೆ ತಿಳಿಸದೇ?

ನಾನು ಹೇಗೆ ಹೋಗಲಿ? ನನ್ನ ತಂದೆ ತಾಯಿಯರಿಗೆ ತಿಳಿಸದೇ, ಅವರಿಂದಲೇ ನಾನು ಈ ಭೂಮಿಗೆ ಬಂದಿದ್ದು. ಅವರಿಗೆ ತಿಳಿಸದೇ ನಾನು ಹೇಗೆ ಹೋಗಲಿ?

ನಾನು ಹೇಗೆ ಹೋಗಲಿ?ನನ್ನ ಸ್ನೇಹಿತರನ್ನು ಬಿಟ್ಟು, ಅವರಿಗೆ ತಿಳಿಸದೇ? ನಾನು ನನ್ನ ಜೀವನದಲ್ಲಿ ತುಂಬಾ ತಪ್ಪುಗಳನ್ನೂ ಮಾಡಿರಬಹುದು, ಆ ಸಮಯದಲ್ಲಿಯೂ ಕೂಡ ನನ್ನ ಸ್ನೇಹಿತರು ನನ್ನ ಜೊತೆಯಲ್ಲಿಯೇ ಇದ್ದರು, ಅದಕ್ಕೆ ನಾನು ದನ್ಯವಾದಗಳನ್ನು ಹೇಳುತ್ತೇನೆ! ಮತ್ತು ನಾನು ಕ್ಷಮಿಸಿ ಎಂದು ಕೇಳಿಕೊಳ್ಳುತ್ತೇನೆ, ನಾನು ಅವರೊಂದಿಗೆ ಇಲ್ಲ, ಅವರಿಗೆ ನಾನು ಬೇಕಾದ ಈ ಸಮಯದಲ್ಲಿ ನಾನು ಅವರೊಂದಿಗೆ ಇಲ್ಲ!

ನಾನು ಒಬ್ಬನನ್ನು ನೋಡಬಹುದು ಆತನು ಕಣ್ಣಿರನ್ನು ಹೊರಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ, ಓ ಆತನು ನನ್ನ ಪ್ರಾಣಸ್ನೇಹಿತ! ಆದರೆ ಒಂದು ಚಿಕ್ಕ ಮನಸ್ಥಪಕ್ಕಾಗಿ ನಾವಿಬ್ಬರು ಒಂದಾಲೇಇಲ್ಲ, ನಾವಿಬ್ಬರು ನಮ್ಮ ಇಗೋ ಬಿಟ್ಟು ಒಂದಾಗಲು ಪ್ರಯತ್ನಿಸಲಿಲ್ಲ,

ನಾನು ಆತನ ಬಳಿ ಹೋದೆ, ಆತನ ಮೇಲೆ ನನ್ನ ಕೈ ಇಟ್ಟು, ಗೆಳೆಯ ನನ್ನನ್ನು ಕ್ಷೆಮಿಸು, ನಾನು ಮಾಡಿದ್ದಕ್ಕೆಲ್ಲ ನನ್ನನ್ನು ಕ್ಷಮಿಸು, ನಾವು ಇಗಳು ತುಂಬಾ ಒಳ್ಳೆಯ ಸ್ನೇಹಿತರೆ! ದಯಮಾಡಿ ನನ್ನನ್ನು ಕ್ಷಮಿಸು. ಎಂದು ಕೇಳಿಕೊಂಡೆ. ಆದರೆ ಅವನಿಂದ ಏನು ರೆಸ್ಪಾನ್ಸ್ ಇರಲಿಲ್ಲ, ಏನು ನರಕ ಇದು? ಆತನು ಇನ್ನೂ ತನ್ನ ಸಿಟ್ಟನ್ನು ಬಿಡಲಿಲ್ಲ! ಆದರೆ ನಾನು ಇತರದ ಮನುಷ್ಯನ ಬಗ್ಗೆ ಜಾಸ್ತಿ ಯೋಚನೆ ಮಾಡುವುದಿಲ್ಲ, ಆದರೆ ನಾನು ಅವನಿಗೆ ಕಾಣಿಸುತ್ತಿದ್ದೆನಾ?  ಅವನು ನನ್ನ ಕೈ ಯನ್ನೂ ನೋಡಲೇ ಇಲ್ಲ, ನಾನು ಆತನ ಹೆಗಲಮೇಲೆ ಇಟ್ಟಿದ್ದು.

ಹೈಯೋ ನಾನೇನಾದರು ಸತ್ತಿದ್ದೆನಾ?  ನಾನು ನನ್ನ ಬಳಿ ಬಂದು ಕುಳಿತುಕೊಂಡೆ, ನನಗು ತುಂಬಾ ಹಳುಬರುತ್ತಿದೆ.

ಓ ದೇವರೇ! ದಯಮಾಡಿ ನನಗೆ ಕೆಲವು ದಿನಗಳನ್ನೂ ಕೊಡು! ನಾನು ನನ್ನ ಹೆಂಡತಿ, ತಂದೆ ತಾಯಿ, ನನ್ನ ಸ್ನೇಹಿತರಿಗೆ ತಿಳಿಸಬೇಕು ನಾನು ಅವರನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದನ್ನು!

ಹರೇ! ನನ್ನ ಹೆಂಡತಿ ನನ್ನ ರೂಂ ಒಳಗೆ ಬರುತ್ತಿದ್ದಾಳೆ, ಅವಳು ನೋಡಲು ತುಂಬಾ ಸುಂದರವಾಗಿದ್ದಾಳೆ, ಆದರೆ ನಾನು ಏನು ಹೇಳಿದರು ಅವಳಿಗೆ ಕೇಳುತ್ತಿಲ್ಲ, ನಾನು ಯಾವತ್ತು ಅವಳಿಗೆ ಆ ಮಾತುಗಳನ್ನೂ ಹೆಳಿರಲಿಲ್ಲ.

ಓ! ದೇವರೇ ನಾನು ನಿನ್ನನ್ನು ದಯಮಾಡಿ ಕೇಳಿಕೊಳ್ಳುತ್ತೇನೆ, ನನಗೆ ಕೆಲವೇ ಕೆಲವು ಗಂಟೆಗಳ ಕಾಲ ಅವಕಾಶ ಕೊಡು, ಎಂದು ನಾನು ಹತ್ತೇ. ಒಂದೆವಂದು ಅವಕಾಶ ಕೊಡು ನಾನು ನನ್ನ ಮಗನ್ನು ಒಂದು ಬಾರಿ ಹಪ್ಪಿ ಮುದ್ದಾಡಬೇಕು, ನಾನು ನನ್ನ ತಾಯಿಯನ್ನು ನಗಿಸಬೇಕು, ನನ್ನ ತಂದೆಗೆ ತಿಳಿಸಬೇಕು ಅವರ ಮಗನಾಗಿದ್ದುಕ್ಕೆ ನಾನು ತುಂಬ ಅದೃಷ್ಟ ಮಾಡಿದ್ದೆ ಎಂಬುದನ್ನು. ನಾನು ನನ್ನ ಸ್ನೇಹಿತರ ಬಳಿ ಕ್ಷೆಮೆಯಾಚಿಸಬೇಕು ಮಾಡಿದ್ದಕ್ಕೆಲ್ಲ. ಮತ್ತೆ ನಾನು ಹಳಲು ಪ್ರಸಂಬಿಸಿದೆ, ಕೂಗಾಡಿದೆ,

ಓ ದೇವರೇ ಒಂದೆವಂದು ಅವಕಾಶ ಕೊಡು, ದಯಮಾಡಿ ಒಂದೆವಂದು ಅವಕಾಶ ಕೊಡು ಎಂದು ಕೂಗಾಡಿದೆ.

"ಯಾರೋ ನನ್ನನ್ನು ತಟ್ಟಿ ಹೆಬ್ಬಿಸಿದಂತೆ ಆಯಿತು! ನನ್ನ ಹೆಂಡತಿ ನನ್ನನ್ನು ಹೆಬ್ಬಿಸಿ, ನೀವು ಕುಗಾಡುತ್ತಿದ್ದಿರಿ ಎಂದಳು!


ಆಗ ನನಗೆ! ಓ ಇದು ಕೇವಲ ಕನಸು! ನಾನು ನಿದ್ದೆಯಲ್ಲಿದ್ದೆ!

ನನ್ನಹೆಂಡತಿ ನನ್ನ ಪಕ್ಕದಲ್ಲಿಯೇ ಇದ್ದಳು, ಅವಳು ಕೇಳಿಸಿಕೊಂಡಿರಬಹುದು. ಈ ಸಮಯ ಅತ್ಯಂತ ಸಂತೋಷದ ಸಮಯವಾಯಿತು, ಆಗ ನಾನು ನನ್ನ ಹೆಂಡತಿಯನ್ನೂ ಅಪ್ಪಿಕೊಂಡೆ, ಸಂತೋಷದಿಂದ ಕಣ್ಣಿರಿಟ್ಟೆ ಆಮೇಲೆ ನಾನು ಅವಳಿಗೆ ಹೇಳಿದೆ ನೀನು ತುಂಬಾ ಸುಂದರವಾಗಿದ್ದಿಯ, ಈ ಪ್ರಪಂಚದಲ್ಲಿಯೇ ನಿನ್ನೋಷ್ಟೋ ಸುಂದರವಾಗಿರುವುದು ಯಾವುದು ಇಲ್ಲ , ನಾನು ನಿನ್ನನ್ನು ನಿಜವಾಗಿಯೂ ತುಂಬಾ ಪ್ರೀತಿಸುತ್ತೇನೆ ಎಂದೆ. ಆಗ ಅವಳ ಮುಖದಮೇಲೆ ಸಂತೋಷವನ್ನು ನೋಡಿದೆ, ಅವಳ ಕಣ್ಣಿನಲ್ಲಿ ನೀರನ್ನು ನೋಡಿದೆ. ನನಗೆ ತುಂಬಾ ಸಂತೋಷವಾಯಿತು.

"ದನ್ಯವಾದಗಳು ದೇವರೇ! ನನಗೆ ಮತ್ತೊಂದು ಅವಕಾಶ ಕೊಟ್ಟಿದ್ದಕ್ಕೆ!!!!"

ಗೆಳೆಯರೇ  ಈ ಮೂಲಕ ನಿಮಗೆ ತಿಳಿಸುವುದೇನೆಂದರೆ, ಇನ್ನೂ ತಡವಾಗಿಲ್ಲ, ಮರೆತುಬಿಡಿ ನಿಮ್ಮ ಮನಸ್ತಪಗಳನ್ನು, ಮರೆತುಬಿಡಿ ಏನೇ ಆಗಿರುವುದನ್ನು, ಕೇವಲ ನಿಮ್ಮ ಪ್ರಿತಿಯನ್ನು ತೋರಿಸಿ, ಸ್ನೇಹದಿಂದಿರಿ, ನೀವಿರುವ ಪರಿಸರವನ್ನು ಯಾವಾಗಲು ಸಂತೋಷವಾಗಿ ಇಡಲು ಪ್ರಯತ್ನಿಸಿ.

********************************ದಿ ಎಂಡ್ ******************************