Sunday, October 24, 2010

ನಿಮ್ಮ ಕೆಲಸವನ್ನೂ ಒಂದುಬಾರಿ ಪರೀಕ್ಷೆ ಮಾಡಿ!

ಹಲೋ,ಗೆಳೆಯರೇ!

ಈ  ಕಥೆ ಒಂದು ಸೆಲ್ಫ್ ಅಪ್ಪ್ರಯಾಸಯಾಲ್ ಸ್ಟೋರಿ!


ಒಂದು ದಿನ ಒಬ್ಬ ಬಾಲಕ ಒಂದು ಅಂಗಡಿಗೆ ಹೋದ ಅಲ್ಲಿದ್ದ ಕ್ಯಾಶ್ ಕೌಂಟರ್ ಬಳಿ ಇದ್ದ ಫೋನ್ ತೆಗೆದುಕೊಂಡು ಒಂದು ಕಾಲ್ ಮಾಡಲು ಪ್ರಯತ್ನಿಸಿದ, ಅಲ್ಲಿಯೇ ಇದ್ದ ಅಂಗಡಿಯ ಮಾಲೀಕ ಅವನನ್ನೇ ಗಮನಿಸುತ್ತಿದ್ದ. ಎಲ್ಲಿಗೋ ಆ ಬಾಲಕ ಕಾಲ್ ಮಾಡಿದ, ಆಕಡೆಂದ ಫೋನ್ ರೆಸಿವೆ ಮಾಡಿದರು, ಆ ಬಾಲಕ ಮಾತನಾಡಲು ಪ್ರಾರಂಬಿಸಿದ.

ಬಾಲಕ : ಮೇಡಮ್ ನನಗೆ ಒಂದು ಕೆಲಸ ಬೇಕಾಗಿದೆ, ನನಗೆ ಗರ್ಡನಿಗ್ ತುಂಬಾ ಚನ್ನಾಗಿ ಬರುತ್ತದ್ದೆ ನಿಮ್ಮ ಮನೆಯಲ್ಲಿ ಇರುವ ಗಾರ್ಡನ್ ನಲ್ಲಿರುವ ಸಸ್ಯಗಳನ್ನು ಚನ್ನಾಗಿ ನೋಡಿಕೊಳ್ಳುತ್ತೇನೆ, ನನಗೆ ಕೆಲಸ ನನ್ನ ಜೀವನಕ್ಕೆ ತುಂಬಾ ಅಗತ್ಯವಿದೆ. ಎಂದು ತುಂಬಾ ವಿನಂಬ್ರವಾಗಿ ಕೇಳಿದ.

ಆಕಡೆಯಿಂದ ಮೇಡಮ್ : ನೋಡಪ್ಪ ನನ್ನ ಮನೆಯಲ್ಲಿ ಈಗಾಗಲೇ ಒಬ್ಬ ಕೆಲಸಕ್ಕೆ ಇದ್ದಾನೆ ಅವನು ನಮ್ಮ ಎಲ್ಲ ಗರ್ಡನಿಗ್ ಕೆಲಸವನ್ನೂ ತುಂಬಾ ಚನ್ನಾಗಿಯೇ ಮಾಡುತ್ತಿದ್ದಾನೆ.

ಬಾಲಕ: ಮೇಡಮ್ ನಾನು ಅರ್ದ ಸಂಬಳಕ್ಕೆ ಕೆಲಸ ಮಾಡುತ್ತೇನೆ, ನೀವು ಈಗ ಇರುವ ಕೆಲಸದವನಿಗೆ ಕೊಡುವ ಸಬಳದಲ್ಲಿ! ಎಂದ.
ಆಕಡೆಯಿಂದ  ಮೇಡಮ್: ಕ್ಷೆಮಿಸಿ ನಾನು ತುಂಬಾ ಸಂತ್ರುಪ್ತಳಗಿದ್ದೇನೆ, ಅವನು ತುಂಬಾ ಚನ್ನಾಗಿ ಕೆಲಸ ನಿಬಾಯಿಸುತ್ತಿದ್ದಾನೆ! ಎಂದರು.
ಬಾಲಕ : ಮೇಡಮ್ ನಾನು ನಿಮ್ಮ ಸಸ್ಯಗಳನ್ನು ಕತ್ಥರಿಸುವುದೂ ಅಲ್ಲದೆ ನಾನು ನಿಮ್ಮ ಮನೆಯ ನೆಲವನ್ನೂ ಸಾರಿಸುತ್ತೇನೆ, ಬಟ್ಟೆಗಳನ್ನೂ ಹೊಗೆಯುತ್ತೇನೆ ಎಂದ!
ಆಕಡೆಯಿಂದ  ಮೇಡಮ್: ನೋ ಥ್ಯಾಂಕ್ಸ್! ಎಂದರು,


ಆಗ ಬಾಲಕ ತುಂಬಾ ಸಂತೋಷದಿಂದಮುಗುಳ್ನಗುತ್ತ ಫೋನ್ ಇಟ್ಟ! ಅಲ್ಲಿಯೇ ಇದ್ದ ಅಂಗಡಿಯ ಮಾಲಿಕ ಆ ಬಾಲಕನನ್ನು ಗಮನಿಸುತ್ತಾ ಆತನ ಮಾತುಗಳನ್ನೂ ಕೇಳಿಸಿಕೊಂಡಿದ್ದ.  ಆಗ ಅಂಗಡಿ ಮಾಲೀಕ ಆ ಬಾಲಕನ ಬಳಿಗೆ ಬಂದು!


ಅಂಗಡಿ ಮಾಲೀಕ : ಬಾಲಕ ನಿನ್ನದಿಟ್ಟ ತನ ನನಗೆ ತುಂಬಾ ಇಷ್ಟವಾಯಿತು, ಅವರು ನಿನಗೆ ಕೆಲಸ ಕೊಡುವುದಿಲ್ಲವೆಂದರು ನೀನು ಸ್ವಲ್ಪವೂ ಬೇಜಾರು ಪಡದೆ ನಗುತ್ತಿದ್ದಿಯ, ನಾನು ನಿನಗೆ ನನ್ನ ಅಂಗಡಿಯಲ್ಲಿ ಕೆಲಸ ಕೊಡುತ್ತೇನೆ ಎಂದ!
ಬಾಲಕ: ನಿಮ್ಮ ಸಹಾಯಕ್ಕಾಗಿ ನನ್ನ ಧನ್ಯವಾದಗಳು, ಆದರೆ ನನಗೆ ನಿಮ್ಮ ಕೆಲಸ ಬೇಡ ಎಂದ!
ಅಂಗಡಿ ಮಾಲೀಕ: ಆದರೆ ನೀನು ತುಂಬಾ ಕಷ್ಟ ಪಡುತ್ತಿದ್ದಿಯ ಒಂದೇ ಒಂದು ಕೆಲಸಕ್ಕಾಗಿ? ಎಂದ.
ಬಾಲಕ: ಇಲ್ಲ ಮಾಲಿಕರೇ ನಾನು ಕೇವಲ ನನ್ನ ಕೆಲಸವನ್ನೂ ಪರೀಕ್ಷೆ ಮಾಡಿದೆ, ನಾನು ಹೇಗೆ ಕೆಲಸ ಮಾಡುತ್ತಿದ್ದೇನೆ, ನಾನು ಮಾಡುವ ಕೆಲಸ ನನ್ನ ಮಾಲಿಕರಿಗೆ ತೃಪ್ತಿ ತಂದಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುತ್ತಿದ್ದೆ, ನಾನು ಆ ಮೇಡಮ್ ಮನೆಯಲ್ಲಿ ಸಸ್ಯಗಳನ್ನು ಕತ್ತರಿಸುವ ಕೆಲಸ ಮಾಡುತ್ತಿದ್ದೇನೆ ಎಂದ!
      
    ಗೆಳೆಯರೇಈ ಮೂಲಕ ನಾನು ನಿಮಗೆಲ್ಲ ತಿಳಿಸುವುದೇನೆಂದರೆ, ನಾವು ಯಾರನ್ನು ತೃಪ್ತಿ ಪಡಿಸಲು ಸಾದ್ಯವಿಲ್ಲ, ಅಕಸ್ಮಾತ್ ತೃಪ್ತಿ ಪಡಿಸಿದ್ದರು ಅವರು ನಮಗೆ ತ್ಹೊರಿಸಿಕೊಲ್ಲುವುದಿಲ್ಲ, ಆದರೆ ನಾವು ನಮ್ಮ ದುಡುಕಿನ ನಿರ್ಧರವನ್ನು ತೆಗೆದುಕೊಳ್ಳುವುದಕ್ಕೆ ಮುನ್ನ ನಮ್ಮ ಶ್ರಮವನ್ನು ಮಾಲೀಕರು ಹೇಗೆ ತಿಳಿದಿದ್ದರೆ ಎಂಬುದನ್ನು ನಾವು ತಿಳಿದುಕೊಳ್ಳುವುದು ಅನಿವಾರ್ಯವಾದ ಸಂಗತಿ.



**********************************ದಿ ಎಂಡ್ *****************************************