Friday, October 30, 2015

ಜೈ ಕನ್ನಡ ರಾಜ್ಯೋತ್ಸವ.... !





ಭಾಷ್ಗುಳೊಳಗೆ ಹಾಡೋಕೊಂದೇ ನಮ್ಮ ಕನ್ನಡದ್ ಬಾಷೆ 
ಇರದ್ಯಾವ್ ಜಾಗ್ವಾದ್ರೆನು ಹೃದ್ಯುಕ್ ಮುಟ್ಟೋದ್ ನಮ್ಮ ಕನ್ನಡದ್ ಬಾಷೆ  
ಕ್ಯಾಮೆಗೆಯಾವ್ ಭಾಷ್ಯದ್ರೆನು, ಕನುಸ್ಗುಳ್ ಬಿಳೋದ್ ನಮ್ಮ ಕನ್ನಡದ್ ಬಾಷೆಲಿ
ಕನ್ನಡ ಕಲ್ತ್ ಮ್ಯಾಕೆ, ಕಲ್ತ್ ಕೊಂಡ್ ಬೆಳೆದ್ ಮ್ಯಾಕೆ ಕಲುಸ್ ಬಾರ್ ದ್ಯಾಕೆ ನಮ್ಮ ಕನ್ನಡದ್ ಬಾಷೆ 
ಮರ್ ಗುಳಿಂದ್ ಮರ್ ಗುಳಿಗ್ ಹಬ್ಬೋ ಬಳ್ಳಿಯಂಗೆ ಹಬ್ಲಿ ನಮ್ಮ ಕನ್ನಡದ್ ಬಾಷೆ 
ಸ್ವಲ್ಪವಾದ್ರೂ ಋಣವ ತೀರ್ಸೊಣ್ ಬನ್ನಿ ಉದ್ದಾರಾಗೊಕ್ ಬಳಸಿದ್ ನಮ್ಮ ಕನ್ನಡದ್ ಬಾಷೆ

ಜೈ ಕನ್ನಡ ..... ! ಜೈ ಕರ್ನಾಟಕ ...... !

Friday, February 13, 2015

ಪ್ರಯತ್ನ ಎಂದಿಗೂ ನಿಲ್ಲದಿರಲಿ ....... !





ಒಂದು ದಿನ ತಂದೆ ಮತ್ತು ಮಗಳು ಕಾರ್ ನಲ್ಲಿ ಪ್ರಯಾಣಿಸುತ್ತಿದ್ದರು. ತುಂಬಾ ಮಳೆ, ಗಾಳಿ, ಮಿಂಚು ಮತ್ತು ಗುಡುಗು ಬರುತ್ತಿತ್ತು. ಮಗಳು ತಂದೆಯನ್ನು ಕೇಳಿದಳು, ಅಪ್ಪ ತುಂಬಾ ಮಳೆ ಗಾಳಿ ಇದೆ, ಕಾರ್ ನ್ನು ಮುಂದೆ ಹೊಡಿಸಲು ಖಷ್ಟ ಆಗುತ್ತಿದೆ, ದಾರಿ ಸರಿಯಾಗಿ ಕಾಣಿಸುತ್ತಿಲ್ಲ ಅಂದಳು. ಆದರೆ ಅಪ್ಪ ಕಾರ್ ನ್ನು ನಿಲ್ಲಿಸಬೇಡ, ಮುಂದೆ ಸಾಗು ಅಂದ, ಸ್ವಲ್ಪ ದೂರದ ನಂತರ ಕೆಲವು  ವಾಹನಗಳು  ರಸ್ತೆ ಬದಿಯಲ್ಲಿ ನಿಂತಿದ್ದವು ಅವುಗಳನ್ನು ನೋಡಿದ ಮಗಳು ಹೇಳಿದಳು, ಅಪ್ಪ ತುಂಬಾ ಖಷ್ಟ ಆಗುತ್ತಿದೆ, ತುಂಬಾ ವಾಹನಗಳು ಮುಂದೆ ತೆರಳದೆ ನಿಂತಿವೆ ಅಂದಳು.

ತಂದೆ ಯಾವುದೇ ಕಾರಣಕ್ಕೂ ಕಾರ್ ನ್ನು ನಿಲ್ಲಿಸಬೇಡ, ಮುಂದೆ ಸಾಗುತ್ತಲೇ ಇರು ಅಂದ. ಸ್ವಲ್ಪ ದೂರ ತೆರಳಿದ ನಂತರ, ಮಳೆ ಗಾಳಿ ತುಂಬಾ ಹೆಚ್ಚಾಗುತ್ತಿತ್ತು, ದೊಡ್ಡ ದೊಡ್ಡ ವಾಹನಗಳು ಸಹ ಮುಂದೆ ಸಾಗಲು ಭಯಪಟ್ಟು ನಿಲ್ಲಿಸಿದ್ದರು. ಆದರೆ, ಆಕೆಯ ತಂದೆ ಯಾವುದೇ ಕಾರಣಕ್ಕೂ ಕಾರ್ ನ್ನು ನಿಲ್ಲಿಸದೆ ಮುಂದೆ ಸಾಗು ಅಂದ.

ಸ್ವಲ್ಪ ದೂರ ಸಾಗಿದ ನಂತರ, ಮಳೆ, ಮೋಡ, ಗಾಳಿ ಕಡಿಮೆಯಾಗಿ, ಸೂರ್ಯನ ಬೆಳಗು ಮತ್ತು ಸುಂದರವಾದ ವಾತಾವರಣ ಕಂಡಿತು. ಆಗ ತಂದೆ ಕಾರ್ ನ್ನು ನಿಲ್ಲಿಸು ಎಂದು ಮಗಳಿಗೆ ಹೇಳಿದನು.

ಆಗ ಮಗಳು ಕೇಳಿದಳು, ಅಪ್ಪ ತುಂಬ ಮಳೆ ಗಾಳಿ ಬರುವಾಗ ಕಾರ್ ನ್ನು ನಿಲ್ಲುಸುವೆ ಅಂದರೆ, ನೀವು ಬೇಡ ಅದೇ, ಆದರೆ ಈಗ ಯಾವುದೇ ಭಯವಿಲ್ಲ, ನಾವು ಯಾಕೆ ಕಾರ್ ನ್ನು ನಿಲ್ಲಿಸಬೇಕು ಎಂದು ಕೇಳಿದಳು. ಆಗ ತಂದೆ ಹೇಳಿದ, ಖಷ್ಟದ ಕಾಲದಲ್ಲಿ ನಾವು ನಮ್ಮ ಪ್ರಯತ್ನವನ್ನು ನಿಲ್ಲಿಸಬಾರದು, ಪ್ರಯತ್ನದ ಮೇಲೆ ಪ್ರಯತ್ನ ಮಾಡುತ್ತಲೇ ಇರಬೇಕು. ಸುಖ ಬಂದಾಗ ಪ್ರಯತ್ನ ನಿಲ್ಲಿಸಿದರು ಯಾವುದೇ ಅಪಯವಿರುವುದಿಲ್ಲ ಎಂದ.

ಈ  ಕಥೆ ಬರೆಯುವಾಗ ನಾನೇ ಬರೆದ ಒಂದು ಕವನ ನೆನಪಾಗುತ್ತೆ ನನಗೆ.

ಸಾದನೆಯ ಹಾದಿಯಲ್ಲಿ ಕಲ್ಲು ಮುಳ್ಳುಗಳಿರಲಿ
ನೋವು ನಲಿವು ಗಳಿರಲಿ,  ಸೋಲು ಗೆಲುವುಗಳಿರಲಿ,
ಸಾದಿಸುವ ಛಲವೂಯನ್ನ ಬಿಡದಿರಲಿ. 

Thursday, January 22, 2015

ದೇವರಿಗೆ ಒಂದು ಥ್ಯಾಂಕ್ಸ್ ಹೇಳೋದರಲ್ಲಿ ತಪ್ಪಿಲ್ಲಾ ಅಲ್ವಾ ?




ಸ್ನೇಹಿತರೇ,

ಕೆಲವರು ಹೇಳುತ್ತಾರೆ  ದೇವರು ಇದಾನೆ ಅಂತಾ, ಕೆಲವರು ಹೇಳುತ್ತಾರೆ  ದೇವರು ಎಲ್ಲಾ ಇಲ್ಲಾ  ಅಂತಾ. ಇನ್ನಾ  ಕೆಲವರು  ಹೇಳುತ್ತಾರೆ ದೇವರು ಒಬ್ಬಾ, ಇನ್ನಾ  ಕೆಲವರು ಇದರಲ್ಲೆಲ್ಲ ನಂಬಿಕೆನೇ ಇಟ್ಟಿರೋಲ್ಲ. ಅದೇನೇ ಇರಲಿ, ಇವತ್ತು ದೇವರ ಪರವಾಗಿ ಮಾತಾಡ್ತೀನಿ. 

ಕೆಲವು ಸಾರಿ ನಮಗೆ ಯಾರಾದ್ರು ಸಹಾಯ ಮಾಡಿದ್ರೆ, ನಾವು ಥ್ಯಾಂಕ್ಸ್ ಅಂತ ಹೇಳ್ತಿವಿ, ಕೆಲವು ಬಾರಿ ಹೇಳೋದೇ ಇಲ್ಲಾ.  ಹಾಗೆಯೇ ಕೆಲವು  ಸಮಯ ಯಾರಾದ್ರು  ಸಹಾಯ ಮಾಡಿದ್ರೆ, ದೇವರಾಗಿ  ಬಂದು ಸಹಾಯ ಮಾಡಿದ್ರು  ಅಂಥ ಹೇಳ್ತಿವಿ.  ಇಲ್ಲಿ ಒಂದು ಉದಾಹರಣೆ ಕೊಡೋಕೆ ಇಷ್ಟಪಡುತ್ತೇನೆ. 

ಆರು ಅಂತಸ್ತಿನ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಮೇಸ್ತ್ರಿ ಆರನೇ ಅಂತಸ್ತಿನಲ್ಲಿ ನಿಂತಿದ್ದ, ಕಟ್ಟಡ ಕಾರ್ಮಿಕರು ನೆಲಮಾಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ಕಟ್ಟಡದಲ್ಲಿ ತುಂಬಾ ಶಬ್ದ ಇತ್ತು. ಮೇಸ್ತ್ರಿ, ಕೆಲ  ಕಾರ್ಮಿಕರಿಗೆ ಏನೋ ಹೇಳಲು ಇಚ್ಚಿಸುತ್ತಾನೆ, ಆದರೆ ಕಾರ್ಮಿಕರಿಗೆ ಅವನ ಕೂಗು ಕೇಳುತ್ತಿರಲಿಲ್ಲ. ಮೇಸ್ತ್ರಿ ಒಂದು ಉಪಾಯ ಮಾಡುತ್ತಾನೆ, ೧೦ ರೂಪಾಯಿ ನೋಟು ಮೇಲಿನಿಂದ ಹಾಕಿದರೆ, ಕೆಲಸಗಾರರು ನನ್ನಕಡೆ ನೋಡಬಹುದು ಎಂದು ೧೦ ರೂಪಾಯಿ ನೋಟನ್ನ ಕೆಳಗೆ ಹಾಕುತ್ತಾನೆ, ಕೆಳಗಡೆ ಕೆಲಸ ಮಾಡುತ್ತಿದ್ದ ಕೆಲಸಗಾರ ಆ ೧೦ ರೂಪಾಯಿ ನೋಡಿ, ತೆಗೆದು ಜೋಬಿನಲ್ಲಿ ಇಟ್ಟುಕೊಳ್ಳುತ್ತಾನೆ ಆದರೆ ಆ ಕೆಲಸಗಾರ ಮೇಸ್ತ್ರಿಯಾ ಕಡೆಗೆ ನೋಡೋದಿಲ್ಲ, ನಂತರ ಆತನ ಕೆಲಸವನ್ನ ಮುಂದುವರಿಸುತ್ತಾನೆ. ಮತ್ತೆ  ಆ ಮೇಸ್ತ್ರಿ ೧೦೦ ರೂಪಾಯಿ ನೋಟನ್ನ ಕೆಳಗೆ ಬಿಡುತ್ತಾನೆ, ಆಗಲು ಆ ಕೆಲಸಗಾರ ಆ ನೋಟನ್ನ ತೆಗೆದು ಜೋಬಿನಲ್ಲಿಳಿಸುತ್ತಾನೆ. ಮತ್ತೆ ಆ ಮೇಸ್ತ್ರಿ ೫೦೦ ರೂಪಾಯಿ ಕೆಳಗೆ ಹಾಕುತ್ತಾನೆ, ಮತ್ತೆ ಆ  ಕೆಲಸಗಾರ ಆ ನೋಟನ್ನು ಜೆಬಿಗಿಲಿಸುತ್ತಾನೆ ಆದರೆ ಆ ನೋಟು ಎಲ್ಲಿಂದ ಬರುತ್ತಿರಬಹುದು ಎಂದು ನೋಡಲೇ ಇಲ್ಲಾ. ಕೊನೆಗೆ ಆ ಮೇಸ್ತ್ರಿ ಒಂದು ಸಣ್ಣ ಕಲ್ಲು ತೆಗೆದು ಆ ಕಾರ್ಮಿಕನಿಗೆ ಹೊಡೆಯುತ್ತಾನೆ, ಆಗ ಆ ಕಾರ್ಮಿಕ ಮೇಸ್ತ್ರಿಯಕಡೆ ನೋಡುತ್ತಾನೆ.

ಈ ಕಥೆಯಿಂದ ನಾನು ಹೇಳಬಯಸುವುದೇನೆಂದರೆ, ಕೆಲವು ಸಮಯ ಆ ದೇವರು ಮೇಲಿಂದ ನಮ್ಮನ್ನು ಅವನ ಕಡೆಗೆ ನೋಡೋಹಾಗೆ ಮಾಡಲು ಸಣ್ಣ ಸಣ್ಣ ಸಹಾಯ ಮಾಡಿ ಪ್ರಯತ್ನಿಸುತ್ತಾನೆ. ಆದರೆ ನಾನು ತುಂಬಾ ಬ್ಯುಸಿ, ನಾವು ಅವನೆಡೆಗೆ ನೋಡೋದೇ ಇಲ್ಲಾ, ಆದನ್ನೆಲ್ಲಾ ನಾವು ಅದೃಷ್ಟ ಅನಕೊಥಿವಿ. ಆಗ ಆ ದೇವರು ನಮಗೆ ಖಷ್ಟ ಅನ್ನೋ ಕಲ್ಲಾನ್ನಾ ತಲೆಮೇಲೆ ಹೊಡೆದಗಾ ಮಾತ್ರ ನಾವು ಅವನ ಕಡೆ ನೋಡ್ತಿವಿ, ಅವನ ಬಳಿ  ಹೋಗ್ತಿವಿ. 

ಅದುಕ್ಕೆ ನಾನು ಹೇಳೋದು ಏನಪ್ಪಾ ಅಂದ್ರೆ, ಯಾವಾಗ ನಿಮಿಗೆ ಒಂದುoದು ಗೆಲುವಿಗು, ಸಣ್ಣ ಸಣ್ಣ ಗೆಲುವಿಗೂ ನಾವು ಆ ದೇವರ ಕೃಪೆ ಅನ್ನೋದನ್ನ ನಾವು ಮರೆಯಬಾರದು. ಒಂದು ನಮಸ್ಕಾರ ಹಾಕೋದನ್ನ ಮರಿಯಬರದು........... :-)

ಖಷ್ಟ ಬಂದಾಗ ಮಾತ್ರ ಅಲ್ಲಾ....ಸುಖಃ  ಬಂದಾಗಲು ವೆಂಕಟರಮಣ


*********************************************************************************