Friday, February 13, 2015

ಪ್ರಯತ್ನ ಎಂದಿಗೂ ನಿಲ್ಲದಿರಲಿ ....... !





ಒಂದು ದಿನ ತಂದೆ ಮತ್ತು ಮಗಳು ಕಾರ್ ನಲ್ಲಿ ಪ್ರಯಾಣಿಸುತ್ತಿದ್ದರು. ತುಂಬಾ ಮಳೆ, ಗಾಳಿ, ಮಿಂಚು ಮತ್ತು ಗುಡುಗು ಬರುತ್ತಿತ್ತು. ಮಗಳು ತಂದೆಯನ್ನು ಕೇಳಿದಳು, ಅಪ್ಪ ತುಂಬಾ ಮಳೆ ಗಾಳಿ ಇದೆ, ಕಾರ್ ನ್ನು ಮುಂದೆ ಹೊಡಿಸಲು ಖಷ್ಟ ಆಗುತ್ತಿದೆ, ದಾರಿ ಸರಿಯಾಗಿ ಕಾಣಿಸುತ್ತಿಲ್ಲ ಅಂದಳು. ಆದರೆ ಅಪ್ಪ ಕಾರ್ ನ್ನು ನಿಲ್ಲಿಸಬೇಡ, ಮುಂದೆ ಸಾಗು ಅಂದ, ಸ್ವಲ್ಪ ದೂರದ ನಂತರ ಕೆಲವು  ವಾಹನಗಳು  ರಸ್ತೆ ಬದಿಯಲ್ಲಿ ನಿಂತಿದ್ದವು ಅವುಗಳನ್ನು ನೋಡಿದ ಮಗಳು ಹೇಳಿದಳು, ಅಪ್ಪ ತುಂಬಾ ಖಷ್ಟ ಆಗುತ್ತಿದೆ, ತುಂಬಾ ವಾಹನಗಳು ಮುಂದೆ ತೆರಳದೆ ನಿಂತಿವೆ ಅಂದಳು.

ತಂದೆ ಯಾವುದೇ ಕಾರಣಕ್ಕೂ ಕಾರ್ ನ್ನು ನಿಲ್ಲಿಸಬೇಡ, ಮುಂದೆ ಸಾಗುತ್ತಲೇ ಇರು ಅಂದ. ಸ್ವಲ್ಪ ದೂರ ತೆರಳಿದ ನಂತರ, ಮಳೆ ಗಾಳಿ ತುಂಬಾ ಹೆಚ್ಚಾಗುತ್ತಿತ್ತು, ದೊಡ್ಡ ದೊಡ್ಡ ವಾಹನಗಳು ಸಹ ಮುಂದೆ ಸಾಗಲು ಭಯಪಟ್ಟು ನಿಲ್ಲಿಸಿದ್ದರು. ಆದರೆ, ಆಕೆಯ ತಂದೆ ಯಾವುದೇ ಕಾರಣಕ್ಕೂ ಕಾರ್ ನ್ನು ನಿಲ್ಲಿಸದೆ ಮುಂದೆ ಸಾಗು ಅಂದ.

ಸ್ವಲ್ಪ ದೂರ ಸಾಗಿದ ನಂತರ, ಮಳೆ, ಮೋಡ, ಗಾಳಿ ಕಡಿಮೆಯಾಗಿ, ಸೂರ್ಯನ ಬೆಳಗು ಮತ್ತು ಸುಂದರವಾದ ವಾತಾವರಣ ಕಂಡಿತು. ಆಗ ತಂದೆ ಕಾರ್ ನ್ನು ನಿಲ್ಲಿಸು ಎಂದು ಮಗಳಿಗೆ ಹೇಳಿದನು.

ಆಗ ಮಗಳು ಕೇಳಿದಳು, ಅಪ್ಪ ತುಂಬ ಮಳೆ ಗಾಳಿ ಬರುವಾಗ ಕಾರ್ ನ್ನು ನಿಲ್ಲುಸುವೆ ಅಂದರೆ, ನೀವು ಬೇಡ ಅದೇ, ಆದರೆ ಈಗ ಯಾವುದೇ ಭಯವಿಲ್ಲ, ನಾವು ಯಾಕೆ ಕಾರ್ ನ್ನು ನಿಲ್ಲಿಸಬೇಕು ಎಂದು ಕೇಳಿದಳು. ಆಗ ತಂದೆ ಹೇಳಿದ, ಖಷ್ಟದ ಕಾಲದಲ್ಲಿ ನಾವು ನಮ್ಮ ಪ್ರಯತ್ನವನ್ನು ನಿಲ್ಲಿಸಬಾರದು, ಪ್ರಯತ್ನದ ಮೇಲೆ ಪ್ರಯತ್ನ ಮಾಡುತ್ತಲೇ ಇರಬೇಕು. ಸುಖ ಬಂದಾಗ ಪ್ರಯತ್ನ ನಿಲ್ಲಿಸಿದರು ಯಾವುದೇ ಅಪಯವಿರುವುದಿಲ್ಲ ಎಂದ.

ಈ  ಕಥೆ ಬರೆಯುವಾಗ ನಾನೇ ಬರೆದ ಒಂದು ಕವನ ನೆನಪಾಗುತ್ತೆ ನನಗೆ.

ಸಾದನೆಯ ಹಾದಿಯಲ್ಲಿ ಕಲ್ಲು ಮುಳ್ಳುಗಳಿರಲಿ
ನೋವು ನಲಿವು ಗಳಿರಲಿ,  ಸೋಲು ಗೆಲುವುಗಳಿರಲಿ,
ಸಾದಿಸುವ ಛಲವೂಯನ್ನ ಬಿಡದಿರಲಿ.