Friday, November 26, 2010

ನಮ್ಮೆಲ್ಲರ ಜೀವನದ ಸತ್ಯ!!!!!


ಒಂದು ಕಡಲ ತೀರದ ಹಳ್ಳಿಯಲ್ಲಿ ಕೆಲವು ಮೀನುಗಾರರು ಜೀವಿಸುತ್ತಿದ್ದರು, ಅವರಲ್ಲಿ ಒಬ್ಬ ಮೀನುಗಾರನಿದ್ದ, ಅವನು ದಿನವು ಮೀನುಗಳನ್ನು ಹಿಡಿದು ಮಾರಿ ಜೀವನ ನಡೆಸಬೇಕಿತ್ತು. ಒಂದು ದಿನ ಒಬ್ಬ ದೊಡ್ಡ ಉದ್ಯಾಮಿಗೆ ಮೀನುಗಳನ್ನು ಮಾರಲು ಹೋದ, ಆ ಉದ್ಯಾಮಿಯು ಕೇಳಿದ, ಏನಪ್ಪ ಈ ಮೀನುಗಳನ್ನು ಎಲ್ಲಿ ಹಿಡಿದೇ, ಇದರ ಗುಣಮಟ್ಟ ತುಂಬಾ ಚನ್ನಾಗಿದೆ? ಎಷ್ಟು ಸಮಯ ಬೇಕಾಯಿತು ಎವುಗಳನ್ನು ಹಿಡಿಯಲು? ಎಂದು ಕೇಳಿದ.

ಅದಕ್ಕೆ ಆ ಮೀನುಗಾರನು ಹೇಳಿದ, ಆ ಮೀನುಗಳನ್ನು ಸಾಗರದ ಹಾಳದಲ್ಲಿ ಹಿಡಿದು ತಂದಿದ್ದೇನೆ, ಆದ್ದರಿಂದಲೇ ಮೀನುಗಳ ಗುಣಮಟ್ಟ ತುಂಬಾ ಚನ್ನಾಗಿದೆ, ಅವುಗಳನ್ನೂ ಹಿಡಿಯಲು ಹೆಚ್ಚು ಸಮಯ ಹಿಡಿಯುವುದಿಲ್ಲ ಎಂದು ಹೇಳಿದ! ಆ ಉದ್ಯಾಮಿಯು ಕೇಳಿದ, ಎಷ್ಟು ಮೀನುಗಳನ್ನು ಹಿಡಿಯುತ್ತಿಯ ಒಂದು ದಿನಕ್ಕೆ? ಅದಕ್ಕೆ ಆ ಮೀನುಗಾರನು ಹೇಳಿದ, ಕೇವಲ ನನ್ನ ಸಂಸಾರವನ್ನು ನೆಡೆಸಲು ಬೇಕಾಗುವಷ್ಟು ನಾನು ಹಿಡಿಯುತ್ತೇನೆ. ಆಗ ಆ ಉದ್ಯಾಮಿ ಕೇಳಿದ, ಇನ್ನು ಉಳಿದ ಸಮಯದಲ್ಲಿ ಏನನ್ನು ಮಾಡುತ್ತಿಯ? ಅದಕ್ಕೆ ಮೀನುಗಾರನು ಹೇಳಿದ, ನಾನು ಮಲಗುವುದು ತುಂಬಾ ತಡವಾಗಿ ಮಲಗುತ್ತೇನೆ, ತಡವಾಗಿ ಹೇಳುತ್ತೇನೆ, ಜೀವನಕ್ಕೆ ಬೇಕಾಗುವಷ್ಟು ಮೀನುಗಳನ್ನು ಹಿಡಿಯುತ್ತೇನೆ, ನನ್ನ ಮುದ್ದಿನ ಮಕ್ಕಳೊಡನೆ ಆಟವಾಡುತ್ತೇನೆ, ನನ್ನ ಸ್ನೇಹಿತರೊಡನೆ ಸಂತೋಷದಿಂದ ಕಾಲ ಕಳೆಯುತ್ತೇನೆ, ನನ್ನ ಗ್ಹಿತಾರ್ನ್ನು ನುಡಿಸುತ್ತೇನೆ, ಕೆಲವು ಹಾಡುಗಳನ್ನೂ ಹಾಡುತ್ತೇನೆ ಎಂದ!

 ಅದಕ್ಕೆ ಆ ಉದ್ಯಾಮಿರು ಹೇಳಿದ! ನಾನು ಮ್.ಬಿ.ಎ ಯನ್ನೂ ಹರ್ವದ್ ಯುನಿವರ್ಸಿಟಿಯಲ್ಲಿ ಮುಗಿಸಿದ್ದೇನೆ, ನಾನು ನಿನಗೆ  ಒಂದು ಸಲಹೆ ಕೊಡುತ್ತೇನೆ, ನೀನು ಪ್ರತಿ ದಿನ ಹೆಚ್ಚು ಕಾಲ ಹೆಚ್ಚು ಹೆಚ್ಚು ಮೀನುಗಳನ್ನು ಹಿಡಿದು ಮಾರಾಟ ಮಾಡು ನೀನು ತುಂಬಾ ಹಣ ಸಂಪಾದಿಸಬಹುದು, ದೊಣಿಗಳನ್ನು ಕೊಂಡುಕೊಳ್ಳ ಬಹುದು! ಎಂದ.

ಮೀನುಗಾರನು ಕೇಳಿದ, "ಆದಾದಮೇಲೆ?"

ತುಂಬಾ ಹೆಚ್ಚು ಹಣಗಳಿಸಿ ದೊಡ್ಡ ಬೋಟ್ ಗಳನ್ನೂ ತೆಗೆದುಕೊಳ್ಳಬಹುದು, ಹೆಚ್ಚು ಹೆಚ್ಚು ಮೀನುಗನಳನ್ನು ಹಿಡಿದು ದೊಡ್ಡ ಶ್ರೀಮಂತನಾಗಬಹುದು, ಒಂದು ಸ್ವಂತ ಮಾರ್ಕೆಟ್ ನ್ನು ತೆಗೆಯ ಬಹುದು, ಹಲವಾರು ಜನರನ್ನು ಕೆಲಸಕ್ಕೆ ಇಟ್ಟುಕೊಳ್ಳಬಹುದು, ದೊಡ್ಡ ದೊಡ್ಡ ಮಾರ್ಕೆಟ್ ಗಳಲ್ಲಿ ತುಂಬಾ ದೊಡ್ಡ ಹೆಸರು ಹಣ ಗಳಿಸಬಹುದು, ಆಗ ನೀನು ಮತ್ತು ನಿನ್ನ ಸಂಸಾರ ನಗರದಲ್ಲಿ ಶ್ರೀಮಂತ ಜೀವನ ನಡೆಸಬಹುದು, ಎಂದ.


ಮೀನುಗಾರನು ಕೇಳಿದ, ಇದೆಲ್ಲ ಏಷ್ಟು ವರ್ಷಗಳು ಇಡಿಯಬಹುದು? ಆದಾದ ಮೇಲೆ ಇನ್ನೇನು?

ಆಗ  ಉದ್ಯಾಮಿಯು ನಗುತ್ತ! ಗೆಳೆಯ ನೀನು ಇಷ್ಟೆಲ್ಲಾ ಆದಮೇಲೆ ನೀನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇರ್ ಗಳನ್ನೂ ಕೊಂಡು ಕೊಳ್ಳಬಹುದು, ಮಾರಬಹುದು, ಮಿಲಿಯನ್ ಬಿಲಿಯನ್ ಗಟ್ಟಲೆ ಹಣ ಸಂಪಾದಿಸಬಹುದು, ಎಂದ!

ಮೀನುಗಾರನು ಕೇಳಿದ,"ಆದಾದ ಮೇಲೆ?"

ಇಷ್ಟಾದಮೇಲೆ ನೀನು ಸಾಗರದ ತೀರದಲ್ಲಿನ ಒಂದು ಹಳ್ಳಿಯಲ್ಲಿ ಒಂದು ಫಾರಂ ಹೌಸ್ ತೆಗೆದುಕೊಳ್ಳಬಹುದು, ತುಂಬಾ ತಡವಾಗಿ ಮಲಗಿ ಹೇಳಬಹುದು, ನಿನ್ನ ಮಕ್ಕಳ ಜೊತೆ ಆಟವಾಡಬಹುದು, ನಿನ್ನ ಹೆಂಡತಿಯ ಜೊತೆ ಸಂಜೆಯ ಸಮಯವನ್ನೂ ಸಾಗರದ, ಕಡಲ ತೀರದಲ್ಲಿ ಕಾಲ ಕಳೆಯಬಹುದು, ನಿನ್ನ ಆಪ್ತ ಸ್ನೇಹಿತರೊಡನೆ ಆಟ ಮಾತು, ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಂತೋಷವಾಗಿ ಕಾಲ ಕಳೆಯಬಬುದು! ಎಂದ.

ಸ್ನೇಹಿತರೆ ಈ ಕಥೆಯಿಂದ ನಾನು ಹೇಳಲು ಬಯಸಿದ್ದು ಎಷ್ಟೇ, ನಾವು ಒಂದು ಸಥ್ಯವನ್ನು ತಿಳಿದುಕೊಳ್ಳಬೇಕು, ನಾನು ಯಾವ ಕಡೆಗೆ ಜೀವನ ಸಾಗಿಸುತ್ತಿದ್ದೇವೆ,ಈಗಿರುವ ಸಂತೋಷದ ಸಮಯವನ್ನೂ ಬಿಟ್ಟು ಮುಪ್ಪಿನಲ್ಲಿ ಈಗಿರುವ ಸಂತೋಷವನ್ನು ಪಡಲು ಬಯಸುತ್ತೇವೆ, ಆದರೆ ನಮಗೆ ತಿಳಿಯುವುದಿಲ್ಲ, ಈಗಾಗಲೇ ನಾವು ಆ ಸಂತ್ಹೊಶಗಳನ್ನು ಅನುಭವಿಸುತ್ತಿದ್ದೇವೆ ಎಂಬುದನ್ನು. ಇದು ಎಲ್ಲರ ಜೀವನದ ಸತ್ಯವಾದ ಸಂಗತಿ!


******************************ದಿ ಎಂಡ್ ********************************