Thursday, December 30, 2010

ಸಾಮಾನ್ಯ ಜನರಿಗೂ ಮತ್ತು ರಾಜಕೀಯ ವೆಕ್ತಿಗಳಿಗೂ ಇರುವ ಮೂಲ ವ್ಯತ್ಯಾಸ!!!


ಒಂದು ದಿನ ಒಬ್ಬ ಹೂಗಳನ್ನು ಮಾರುವ ವೆಕ್ತಿ ತಲೆಕೂದಲು ಕತ್ತರಿಸು ಛೌರದ ಅಂಗಡಿಗೆ ಹೋದ, ಆತನ ಛೌರ ಮುಗಿದ ನಂತರ ಛೌರದವನಿಗೆ ಹಣವನ್ನು ಕೊಡಲು ಹಣವನ್ನು ಜೋಬಿನಿಂದ ತೆಗೆದ, ಆದರೆ ಆ ಛೌರಿಕನು ಹೇಳಿದ ನಾನು ಈ ವಾರ ನಾನು ಯಾರ ಬಳಿಯಲ್ಲಿಯೂ ಹಣ ತೆಗೆದುಕೊಲ್ಲುವುದಿಲ್ಲ, ಈ ವಾರ ಸೋಸಿಯಲ್ ಸರ್ವಿಸ್ ಮಾಡುತ್ತಿದ್ದೇನೆ ಅಂದ.

ಆಗ ಆ ಹೂವಿನ ಮನುಷ್ಯ ಆ ಜಾಗದಿಂದ ಮುಗುಳ್ನಗುತ್ತ ಹೊರಟ. ನಂತರ ನಾಳೆ ಬೆಳಿಗ್ಗೆ ಛೌರದ ಅಂಗಡಿಯ ಮುಂದೆ ಒಂದಿಷ್ಟು ಹೂ ಗುಚ್ಚಗಳನ್ನು ಮತ್ತು ಒಂದು ಧನ್ಯವಾದದ ಪತ್ರ ಬರೆದಿಟ್ಟು ಹೋಗಿದ್ದ. ಆಗ ಆ ಛೌರದ ಅಂಗಡಿಯ ಛೌರಿಕ ಬಂದು ಅಂಗಡಿಯ ಬಾಗಿಲು ತೆಗೆಯಲು ಬಂದಾಗ ಆತನು ಹೂಗಳನ್ನು ನೋಡಿತುಂಬಾ ಆಶ್ಚರ್ಯದಿಂದ ಅವುಗಳನ್ನೂ ನೋಡಿದ ಆತನ ಪತ್ರವನ್ನು ನೋಡಿ ತುಂಬಾ ಸಂತೋಷಗೊಂದನು.

ಮತ್ತೆ  ಓರ್ವ ಸಿಹಿ ತಿಂಡಿಗಳನ್ನು ಮಾರಾಟ ಮಾಡುವವ, ತಲೆಕೂದಲು ಛೌರ ಮಾಡಿಸಲು ಆತನ ಛೌರದ ಅಂಗಡಿಗೆ ಬಂದ, ಛೌರ ಮುಗಿಯಿತು ಯತಪ್ರಕಾರ ಈ ಸಿಹಿತಿಂಡಿ ಮಾರುವವ ಹಣ ಕೊಡಲು ಮುಂದಾದ, ಆಗ ಆ ಛೌರಿಕನು ನಿರಾಕರಿಸಿದ ಆತ ಹೇಳಿದ ಈ ವಾರ ನಾನು ಜನರ ಸೇವೆ (ಪುಬ್ಲಿಕ್ ಸರ್ವಿಸ್) ಮಾಡುತ್ತಿದ್ದೇನೆ ಎಂದು ಹೇಳಿದ, ಆಗ ಸಿಹಿತಿಂಡಿ ಮಾರುವವ ತುಂಬಾ ಸಂತೋಷದಿಂದ ಹಿಂದಿರುಗಿದ.

ಮಾರನೆಯ ದಿನ ಆ ಛೌರಿಕ ಮತ್ತೆ ತನ್ನ ಅಂಗಡಿಯನ್ನು ತೆರೆಯಲು ಬಂದಾಗ ಅಲ್ಲಿದ್ದ ಒಂದು ಸಿಹಿತಿಂಡಿಯ ಬಾಕ್ಸ್ ಮತ್ತು ಒಂದುಧನ್ಯವಾದದ ಪತ್ರ ನೋಡಿದ, ಆಗ ಮತ್ತೆ ಆ ಛೌರಿಕನಿಗೆ ಅದನ್ನು ನೋಡಿ ಮತ್ತೆ ತುಂಬಾ ಸಂತೋಷಗೊಂಡನು.

ಮತ್ತೆ ಒಂದು ದಿನದ ನಂತರ ಒಬ್ಬ ಕಾಲೆಜ್ ಪ್ರೋಫೆಸ್ಸೇರ್ ತನ್ನ ಕೂದಲನ್ನು ಛೌರ ಮಾಡಿಸಲು ಬಂದ, ಆಗ ಆ ಛೌರಿಕನು ಯಾತಪ್ರಕಾರ ತನ್ನ ಕೆಲಸ ಮುಗಿಸಿದ ಮತ್ತೆ ಆ ಪ್ರೊಫೆಸರ್ ಗೆ  ಯಾತಪ್ರಕರ ಹೇಳಿದ, ಆಗ ಆಪ್ರೊಫೆಸರ್ ಗೆಸಂತೋಷದಿಂದ ಹೊರ ಬಂದನು.

ಮಾರನೇಯ ದಿನ ಒಂದು ಪತ್ರ ಮತ್ತು ಒಂದು ಡಜನ್ ಬೇರೆ ಬೇರೆ ಪುಸ್ತಕಗಳನ್ನು ಇಟ್ಟು ಹೋಗಿದ್ದನು ಅದರಲ್ಲಿ ಆತನ ವ್ಯಾಪಾರದಲ್ಲಿ ಉಪಯುಕ್ತವಾಗುವ ಪುಸ್ತಕಗಳು ಇದ್ದವು, ಅವುಗಳನ್ನೂ ನೋಡಿ ತುಂಬಾ ಸಂತೋಷಗೊಂಡನು.

ಮತ್ತೊಂದು ದಿನ ಒಬ್ಬ ರಾಜಕೀಯ ವೆಕ್ತಿ, ಆತನು ಸರ್ಕಾರದ ಅತ್ಯಂತ ದೊಡ್ಡ ಹುದ್ದೆಯಲ್ಲಿ ಇರುವವನು ತನ್ನ ತಲೆಕೂದಲುಗಳನ್ನು ಛೌರ ಮಾಡಿಸಲು ಆತನ ಅಂಗಡಿಗೆ ಬಂದ, ಆ ಛೌರಿಕನು ತನ್ನ ಕೆಲಸವನ್ನೂ ಅತ್ಯಂತ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ, ಆಗ ಆ ರಾಜಕೀಯ ವೆಕ್ತಿ ತುಂಬಾ ಖುಷಿಯಿಂದ ಹಣ ನೀಡಲು ಮುಂದಾದ ಆಗ ಯತಾಪ್ರಕಾರ ಆ ಛೌರಿಕ  ನಿರಾಕರಿಸಿ ಸಾಮಾಜ ಸೇವೆಯ ಬಗ್ಗೆ ಹೇಳಿದ, ನಂತರ ಆ ರಾಜಕೀಯ ವೆಕ್ತಿ ಖುಷಿಯಿಂದ ಹೊರಹೊದನು.

ಮಾರನೆಯ ದಿನ ಆತನ ಅಂಗಡಿಯ ಮುಂದೆ ಒಂದು ಡಜನ್ ಜನ ರಾಜಕೀಯ ವೆಕ್ತಿಗಳು ಸಾಲಾಗಿ ನಿಂತಿದ್ದರು!

ಗೆಳೆಯರೇ ನಾನು ಈ ಮೂಲಕ ತಿಳಿಸುವುದೇನೆಂದರೆ ಸಾಮಾನ್ಯ ಜನರಿಗೂ ರಾಜಕೀಯ ವೆಕ್ತಿಗಳಿಗು ತುಂಬಾ ವ್ಯತ್ಯಾಸ ಇದೆ, ನಾವುಗಳು ರಾಜ್ಯವನ್ನೂ ಆಳುವವರನ್ನುಸರಿಯಾದವರನ್ನು ಆರಿಸಬೇಕು, ಆಗಲೇ ಈ ಪ್ರಜೆಗಳಿಂದ ನಿರ್ಮಿತವಾದ ಪ್ರಜಾಪಭುತ್ವಕ್ಕೆ ಒಂದು ಅರ್ಥ ಸಿಗುವುದು, ದಯಮಾಡಿ ಸರಿಯಾದವರಿಗೆ ಮತ ನಿಡಿ ಒಳ್ಳೆಯವರನ್ನು ರಾಜ್ಯವನ್ನು ಆಳಲು ಅವಕಾಶ ನಿಡಿ!!!!!

*****************************ದಿ ಎಂಡ್ *********************************

ಮುಂದುವರೆಯುವುದು.....