Friday, December 31, 2010

ಸಂಪನ್ಮೂಲಗಳ ಉಪಯುಕ್ತತೆ!


ಒಂದು ದಿನ ಭಗವಾನ್ ಬುದ್ಧ ಪ್ರಪಂಚದ ಜನರ ಒಳಿತಿನ ಬಗ್ಗೆ ಬಹಳಾ ಆಳವಾಗಿ ಯೋಚನೆಮಾಡುತ್ತ ಕುಳಿತ್ತಿದ್ದರು, ಆಗ ಬುದ್ದ ಇರುವ ಜಾಗಕ್ಕೆ ಒಬ್ಬ ಭಕ್ತ ಬಂದು ಕೇಳಿದ, ಗುರುಗಳೇ ನೀವು ಪ್ರಪಂಚದ ಎಲ್ಲ ಜನರ ಒಳಿತಿಗಾಗಿ ತುಂಬಾ ಯೋಚನೆ ಮಾಡುತ್ತಿರ, ಆದರೆ ನಿಮ್ಮ ಭಕ್ತರ ಬಗ್ಗೆ ಯಾಕೆ ಯೋಚನೆ ಮಾಡುವುದಿಲ್ಲ? ಎಂದು ಕೇಳಿದ.

ಆಗ ಬುದ್ದ ಕೇಳಿದ!

ಬುದ್ದ: ಸರಿ ಶಿಷ್ಯ ಹೇಳು ನನ್ನಿಂದ ಏನು ಸಹಾಯ ಆಗಬೇಕು?

ಶಿಷ್ಯ: ಗುರುಜೀ ನನ್ನ ಬಟ್ಟೆ ತುಂಬಾ ಹಾಳಗಿಹೋಗಿದೆ, ತುಂಬಾ ಕೊಳಕು ಮತ್ತು ಹರಿದು ಹೋಗಿದೆ ಇದನ್ನು ತೊಡಲು ತುಂಬಾ ಮುಜುಗರವಾಗುತ್ತಿದೆ,  ನಾನು ಒಂದು ಒಳ್ಳೆ ಬಟ್ಟೆ ತೆಗೆದು ಕೊಳ್ಳಬಹುದಾ? ಎಂದು ಕೇಳಿದ.

ಆಗ ಬುದ್ದಶಿಷ್ಯನಕಡೆ ನೋಡಿ, ಆತನು ದರಿಸಿದ್ದ ಬಟ್ಟೆ ಹಾಳಾಗಿಹೊಗಿರುವುದನ್ನು ಗಮನಿಸಿ, ಅಲ್ಲಿಯೇ ಇದ್ದ ಒಬ್ಬ ಶಿಷ್ಯನನ್ನು ಕೇಳಿದ ಒಂದು ಜೊತೆ ಹೊಸ ಬಟ್ಟೆಗಳನ್ನು ಈತನಿಗೆ ನಿಡಿ ಎಂದು ಹೇಳಿದ. ಆಗ ಆ ಶಿಷ್ಯನು ಒಂದು ಜೊತೆ ಹೊಸ ಹುಡುಪುಗಳನ್ನೂ ತೆಗೆದುಕೊಂಡು ಆ ಶಿಷ್ಯನಿಗೆ ಕೊಟ್ಟ, ಆಗ ಆ ಶಿಷ್ಯನು ತನ್ನ ಮನೆಗೆ ಯಿಂದಿರುಗಿದ,

ಸ್ವಲ್ಪ ದಿನಗಳ ನಂತರ ಭಗವಾನ್ ಬುದ್ದ ಆತನ ಮನೆಗೆ ಅನಿರೀಕ್ಷಿತ ಬೇಟಿ ನೀಡಿದರು, ಬುದ್ದ ಕೇಳಿದರು ನಿನ್ನ ಹೊಸ ಹುದುಪುಗಳು ಸರಿಯಾಗಿವೆಯೇ, ಇನ್ನೂ ಏನಾದರು ಬೇಕಿದೆಯೇ? ಎಂದು ಕೇಳಿದರು.

ಆಗ ಶಿಷ್ಯ:  ಧನ್ಯವಾದಗಳು ಗುರುಗಳೇ ಹುಡುಪುಗಳು ಸರಿಯಾಗಿವೆ ನನಗೆ ಇಷ್ಟು ಸಾಕು, ಇನ್ನೇನು ಬೇಡ ಅಂದ.

ಆಗ  ಬುದ್ದ: ಶಿಷ್ಯ ಈಗ ನೀನು ಹೊಸ ಹುಡುಪುಗಳನ್ನು ಹೊಂದಿದ್ದಿಯ ಆದರೆ ಹಳೆಯ ಹುಡುಪುಗಳನ್ನು ಏನು ಮಾಡಿದೆ? ಎಂದು ಕೇಳಿದರು.

ಶಿಷ್ಯ:  ಗುರುಗಳೇ ಆ ಬಟ್ಟೆಗಳನ್ನು ತನ್ನ ಹಾಸಿಗೆಯ ಮೇಲೆ ಹಾಸಲು ಬಳಸುತ್ತಿದ್ದೇನೆ ಎಂದು ಹೇಳಿದ.

 ಬುದ್ದ:  ಹಾಗಾದರೆ ಹಳೆಯ ಹಾಸಿಗೆಯ ಬಟ್ಟೆ ನೀನು ಏಸದಿರಬಹುದು? ಅಲ್ಲವೇ.

ಆಗಶಿಷ್ಯ: ಇಲ್ಲ ಗುರುಗಳೇ ಅದನ್ನು ಕಿಟಕಿಗಳನ್ನು ಮುಚ್ಚಲು ಬಳಸುತ್ತಿದ್ದೇನೆ ಎಂದ.

ಬುದ್ದ: ಹಾಗದರೆ ಹಳೆಯ ಕಿಟಕಿ ಮುಚ್ಚಲು ಬಳಸುತ್ತಿದ್ದ ಬಟ್ಟೆಗಳು ಏನಾದವು?

ಆಗ ಶಿಷ್ಯ: ಆ ಬಟ್ಟೆಗಳನ್ನು ಅಡುಗೆಮನೆಯಲ್ಲಿ ಕರವಸ್ತ್ರಗಳನ್ನಾಗಿ ಬಳಸುತ್ತಿದ್ದೇನೆ ಎಂದ.


ಬುದ್ದ: ಹಾಗಾದರೆ ಹಳೆಯ ಕರವಸ್ತ್ರಏನಾಯಿತು?

ಆಗ  ಶಿಷ್ಯ: ಆ ಬಟ್ತೆಗಳನ್ನು ನೆಲವನ್ನು ವರಸಲು ಬಳಸಿದೆ.

ಬುದ್ದ: ಹಾಗದರೆ ಹಳೆಯ ಬಟ್ಟೆ ನೆಲವನ್ನೂ ವರಸಲು ಬಳಸುತ್ತಿದ್ದ ಬಟ್ಟೆಏನಾಯಿತು?


ಆಗ ಶಿಷ್ಯ:  ಗುರುಗಳೇ ಆ ಬಟ್ಟೆಗಳು ತುಂಬಾ ಹಳೆಯದಾಗಿದ್ದವು ನನಗೆ ಅವುಗಳನ್ನೂ ಏನು ಮಾಡಬೇಕು ಎಂದು ತಿಳಿಯಲಿಲ್ಲ, ಅದಕ್ಕೆ ನಾನು ಆ ಬಟ್ತೆಗಳನ್ನು ದೀಪದ ಬತ್ತಿಯಾಗಿ ಮಾಡಿ, ಈಗ ನಿಮ್ಮ ಕೋಣೆಯಲ್ಲಿ ಹತ್ತಿ ಹುರಿಯುತ್ತಿರುವ ದೀಪಕ್ಕೆ ಹಾಕಿದ್ದೇನೆ ಎಂದ.

ಆಗಬುದ್ದ ಮುಗುಳ್ನಗುತ್ತ ಆತನ ಮನೆಯಿಂದ ಹೊರಟರು.

ಗೆಳೆಯರೇ ಈ ಮೂಲಕ ನಿಮಗೆ ತಿಳಿಸಲು ಇಚ್ಚಿಸುವುದು ಏನೆಂದರೆ, ನಾವುಗಳು ಒಂದುವೇಳೆ ಇಷ್ಟೊಂದು ತರಹದ ಬಳಕೆ ಮಾಡದಿದ್ದರು ಕನಿಷ್ಠ ನಾವು ಪ್ರಯತ್ನ ಮಾಡಬೇಕು, ಭೂಮಿಯ ಮೇಲಿರುವ ಎಲ್ಲಾ ವಸ್ತುಗಳನ್ನೂ ನಾವು ತುಂಬಾ ಹೆಚ್ಚರವಾಗಿ ಬಳಸಬೇಕು, ವಸ್ತುಗಳು ಪ್ರಕೃತಿದತ್ತವಾದ ಅಥವಾ ಮಾನವ ನಿರ್ಮಿತ ಸಂಪನ್ಮೂಲಗಳಾಗಿರಬಹುದು, ನಾವು ಅವುಗಳನ್ನೂ ತುಂಬಾ ಹೆಚ್ಚರವಾಗಿ ಉಪಯೋಗಿಸಬೇಕು ಹಾಗ ಮಾತ್ರ ನಾವು ಮುಂದಿನ ಪಿಲಿಗೆಗಳಿಗೆಉಳಿಸಲು ಸಾದ್ಯ!!!!

 ********************************ದಿ ಎಂಡ್ ***********************************